ಹೈಲೈಟ್ಸ್:
- ಪರಪ್ಪನ ಅಗ್ರಹಾರದಲ್ಲಿ ಬಹಳ ವರ್ಷದಿಂದ ಈ ತರಹದ ಚಟುವಟಿಕೆಗಳು ನಡೆಯುತ್ತಿವೆ
- ಇತ್ತೀಚೆಗೆ ಈ ತರಹದ ಘಟನೆಗಳು ನಡೆದಿಲ್ಲ
- ಎರಡು ತಿಂಗಳ ಹಿಂದೆ ನಾನೇ ಅಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಬಂದಿದ್ದೇನೆ: ಆರಗ ಜ್ಞಾನೇಂದ್ರ
ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಈ ವಿಡಿಯೋಗಳು ತಾವು ಅಧಿಕಾರಕ್ಕೆ ಬರುವುದಕ್ಕಿಂದ ಮೊದಲು ರೆಕಾರ್ಡ್ ಮಾಡಿದ್ದು ಹಾಗೂ ಎರಡು ತಿಂಗಳ ಹಿಂದೆಯೇ ಇವೆಲ್ಲದರ ಬಗ್ಗೆ ಜೈಲಿನಲ್ಲಿ ಸಭೆ ನಡೆಸಿ ಎಚ್ಚರಿಕೆ ನೀಡಿ ಬಂದಿದ್ದೇನೆ ಎಂದರು.
ಪರಪ್ಪನ ಅಗ್ರಹಾರದಲ್ಲಿ ಬಹಳ ವರ್ಷದಿಂದ ಈ ತರಹದ ಚಟುವಟಿಕೆಗಳು ನಡೆಯುತ್ತಿವೆ. ಇತ್ತೀಚೆಗೆ ಈ ತರಹದ ಘಟನೆಗಳು ನಡೆದಿಲ್ಲ. ಎರಡು ತಿಂಗಳ ಹಿಂದೆ ನಾನೇ ಅಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಬಂದಿದ್ದೇನೆ. ಇದೀಗ ವಿಡಿಯೋ ವೈರಲ್ ಆದ ಬಳಿಕ ನಾನು ಅಧಿಕಾರಿಗಳನ್ನ ಕೇಳಿದಾಗ, ಸಾರ್ ಈ ಘಟನೆ ನಡೆದಿದ್ದು ನಿಜ. ಆದರೆ ನಾನು ಸಭೆ ನಡೆಸಿ ಬಂದಿದ್ದಕ್ಕಿಂತ ಹಿಂದೆ ನಡೆದಿದ್ದು ಎಂದು ಹೇಳಿದ್ದಾರೆ ಎಂದು ಗೃಹ ಸಚಿವರು ಹೇಳಿದರು.
ಇತ್ತೀಚೆಗೆ ಯಾವುದೇ ಘಟನೆ ನಡೆಯದಂತೆ ನೋಡಿಕೊಂಡಿದ್ದೇವೆ ಎಂದು ನನಗೆ ಹೇಳಿದ್ದಾರೆ. ನಾನು ಬೆಂಗಳೂರಿಗೆ ಮರಳಿದ ಮೇಲೆ ಈ ಬಗ್ಗೆ ವಿಶೇಷವಾದ ಒಂದು ತನಿಖೆಯನ್ನ ಆರಂಭಿಸುತ್ತೇನೆ. ನನಗೆ ಇದು ಗೊತ್ತಿದೆ. ಶಿವಮೊಗ್ಗದ ಒಂದು ಪ್ರಕರಣವನ್ನ ನಾನೇ ಐಡೆಂಟಿಫೈ ಮಾಡಿ, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಹೇಳಿ ಬೇಧಿಸಿದ್ದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಈ ತರಹದ ವಿಕೃತ ಮನಸ್ಥಿತಿಯವರು ಇದ್ದಾಗ, ವ್ಯವಸ್ಥೆಯಲ್ಲಿ ನಾವೇನೇ ಬದಲಾವಣೆ ತಂದರೂ ಸಾಧ್ಯವಾಗದು. ಒಂದೇ ಒಂದು ಕೆಲಸ ನಾವು ಮಾಡಬಹುದು ಅದು ಜಾಮರ್ ಹಾಕಿ ಮೊಬೈಲ್ ಸಿಗ್ನಲ್ ತಡೆಯಬಹುದು. ಅದನ್ನ ಪರಿಣಾಮಕಾರಿಯಾಗಿ ಮಾಡಿ ನಂತರ ಮಾದಕ ದ್ರವ್ಯ ಸೇರಿ ಏನೇ ಒಳ ಹೋಗುತ್ತಿದ್ದರೂ ಅದನ್ನ ತಡೆಯಬಹುದು ಎಂದು ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
ಪರಪ್ಪನ ಅಗ್ರಹಾರದಲ್ಲಿ ಭಯೋತ್ಪಾದಕರೂ ಸೇರಿದಂತೆ ಹಾರ್ಡ್‌ಕೋರ್ ಕ್ರಿಮಿನಲ್ ಸೆಲ್‌ಗಳ ಮೇಲೆ ತೀವ್ರ ನಿಗಾ ವಹಿಸಲಾಗುವುದು. ಅವುಗಳಲ್ಲಿ ಮೊಬೈಲ್ ಸಿಗ್ನಲ್ ಪ್ರತಿಬಂಧಕಗಳನ್ನ ಅಳವಡಿಸುವ ಸಲುವಾಗ ಸಿಎಂ ಬಸವರಾಜ ಬೊಮ್ಮಾಯಿಯವರಲ್ಲಿ ಚರ್ಚೆ ಮಾಡುತ್ತೇನೆ. ನಾನು ಸಭೆ ನಡೆಸಿದ ನಂತರವೂ ಈ ಪ್ರಕರಣ ಬಂದಿದ್ದೇ ಆದರೆ ಅದನ್ನ ಖಂಡಿತಾ ಬಿಡೋದಿಲ್ಲ. ನಮ್ಮ ಅಧಿಕಾರಿಗಳ ಜೊತೆ ಎರಡು ಮೂರು ಸಲ ನಾನು ರಿವ್ಯೂ ಮಾಡಿದ್ದೇನೆ ಎಂದು ಗೃಹ ಸಚಿವರು ಹೇಳಿದರು.
ಗೃಹ ಸಚಿವನಾಗಿ ನಾನು ಎಲ್ಲದನ್ನೂ ಪೂರ್ಣ ಹೇಳೋದಕ್ಕೆ ಆಗೋದಿಲ್ಲ. ಆದರೆ ಖಂಡಿತಾ ಆ ನೋವು ನನಗಿದೆ. ಅದನ್ನ ಖಂಡಿತಾ ಸರಿ ಮಾಡ್ತೀನಿ. ನಾನು ನೋವಿಟ್ಟುಕೊಂಡು ಸುಮ್ಮನೇ ಇರೋದಿಲ್ಲ. ನನ್ನನ್ನ ಒಳ್ಳೆಯವರು ಎಂದು ಎಲ್ಲರೂ ಪರಿಗಣಿಸಿದ್ದಾರೆ. ಆದರೆ ಒಳ್ಳೆ ಅಧಿಕಾರ ನಡೆಸಬೇಕು ಎಂಬುದನ್ನ ತೋರಿಸಿಕೊಡ್ತೀನಿ ಎಂದು ಆರಗ ಜ್ಞಾನೇಂದ್ರ ಹೇಳಿದರು.
Read more
[wpas_products keywords=”deal of the day sale today offer all”]