Karnataka news paper

ಯುದ್ಧದಲ್ಲಿ ಹೋರಾಡಲಾಗದವರು ಹೇಡಿಯಂತೆ ಹೋಗುತ್ತಾರೆ: ಪಕ್ಷ ತೊರೆದ ನಾಯಕನ ವಿರುದ್ಧ ಕಾಂಗ್ರೆಸ್ ಕಿಡಿ


ಹೈಲೈಟ್ಸ್‌:

  • ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಒಬಿಸಿ ನಾಯಕ ಆರ್‌ಪಿಎನ್ ಸಿಂಗ್
  • ಪದ್ರೌನ ಕ್ಷೇತ್ರದಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಎದುರು ಸ್ಪರ್ಧೆ ಸಾಧ್ಯತೆ
  • ಈ ಯುದ್ಧವು ಹೇಡಿಗಳಿಗೆ ಅಲ್ಲ ಎಂದು ಸಿಂಗ್ ವಿರುದ್ಧ ಕಿಡಿಕಾರಿದ ಕಾಂಗ್ರೆಸ್

ಹೊಸದಿಲ್ಲಿ: ಪಕ್ಷದ ನಾಯಕ ಆರ್‌ಪಿಎನ್ ಸಿಂಗ್ ಅವರು ಬಿಜೆಪಿಗೆ ಜಿಗಿತ ಬೆನ್ನಲ್ಲೇ ಕಾಂಗ್ರೆಸ್ ನಾಯಕತ್ವ ಖಾರವಾದ ಪ್ರತಿಕ್ರಿಯೆ ನೀಡಿದೆ. ಈ ಹೋರಾಟದಲ್ಲಿ ಹೋರಾಡಲು ಸಾಧ್ಯವಾಗದ ಹೇಡಿಗಳು ಪಕ್ಷಾಂತರ ಮಾಡುತ್ತಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

‘ಕಾಂಗ್ರೆಸ್ ದೇಶದ ಎಲ್ಲಾ ಕಡೆಗಳಲ್ಲಿ, ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ನಡೆಸಿರುವ ಹೋರಾಟವು ಸರ್ಕಾರದ ಸಂಪನ್ಮೂಲಗಳು, ಅದರ ಸಂಸ್ಥೆಗಳ ವಿರುದ್ಧ ನಡೆಸಿರುವ ಸಮರವಾಗಿದೆ. ಇದು ಸಿದ್ಧಾಂತ, ಸತ್ಯ ಮತ್ತು ಧೈರ್ಯ ಹಾಗೂ ಸಾಕಷ್ಟು ಬದ್ಧತೆಯೊಂದಿಗೆ ನೀವು ಹೋರಾಟ ನಡೆಸಬೇಕಿರುವ ಯುದ್ಧ. ಈ ಯುದ್ಧವು ಹೇಡಿಗಳಿಗಾಗಿ ಇರುವ ಯುದ್ಧ ಎಂದು ನನಗೆ ಅನಿಸುತ್ತಿಲ್ಲ’ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ ಹೇಳಿದ್ದಾರೆ.

ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿದ ಆರ್‌ಪಿಎನ್‌ ಸಿಂಗ್‌: ಬಿಜೆಪಿಯಿಂದ ಸ್ವಾಮಿ ಪ್ರಸಾದ್‌ ಮೌರ್ಯ ವಿರುದ್ಧ ಸ್ಪರ್ಧೆ?
‘ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೇಳಿರುವಂತೆ ಈ ಯುದ್ಧದಲ್ಲಿ ಹೋರಾಡಲು ನೀವು ತುದಿಗಾಲಿನಲ್ಲಿ ನಿಂತಿರಬೇಕು. ನಿಮ್ಮಲ್ಲಿ ಧೈರ್ಯ ಇರಬೇಕು. ನೀವು ಹೇಡಿಯಾಗಿ ಈ ಯುದ್ಧದಲ್ಲಿ ಹೋರಾಡಬಾರದು’ ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಬಹಳ ಆಪ್ತರಾಗಿದ್ದ ನಾಯಕರಾದ ಜಿತಿನ್ ಪ್ರಸಾದ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಆರ್‌ಪಿಎನ್ ಸಿಂಗ್ ಅವರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದು ಕಾಂಗ್ರೆಸ್‌ಗೆ ಮುಜುಗರ ಉಂಟುಮಾಡಿದೆ.

ಅಧ್ಯಕ್ಷೆ ಸೊನಿಯಾ ಗಾಂಧಿ ಅವರಿಗೆ ಮಂಗಳವಾರ ಪತ್ರ ಬರೆದಿರುವ ಆರ್‌ಪಿಎನ್ ಸಿಂಗ್, ರಾಜೀನಾಮೆ ಸಲ್ಲಿಸಿದ್ದಾರೆ. ಗಣರಾಜ್ಯ ಸ್ಥಾಪನೆಯ ದಿನವನ್ನು ಸಂಭ್ರಮಿಸುವ ಈ ವೇಳೆಗೆ ನಾನು ನನ್ನ ರಾಜಕೀಯ ಜೀವನದ ಹೊಸ ಅಧ್ಯಾಯ ಪ್ರಾರಂಭಿಸುತ್ತಿದ್ದೇನೆ.. ಜೈ ಹಿಂದ್‌.. ಎಂದು ಟ್ವಿಟ್ಟರ್‌ನಲ್ಲಿ ಬರೆದು ರಾಜೀನಾಮೆ ಪತ್ರವನ್ನು ಲಗತ್ತಿಸಿದ್ದಾರೆ. ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ, ಇತ್ತೀಚೆಗೆ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿದ್ದ ಸ್ವಾಮಿ ಪ್ರಸಾದ್‌ ಮೌರ್ಯ ಅವರ ವಿರುದ್ಧ ಪದ್ರೌನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.



Read more

[wpas_products keywords=”deal of the day sale today offer all”]