Personal Finance
ಈ ಹೊಸ ವರ್ಷದ ಎರಡನೇ ತಿಂಗಳಾದ ಫೆಬ್ರವರಿಯಲ್ಲಿ ಖಾಸಗೀ ಬ್ಯಾಂಕುಗಳು ಹಾಗೂ ಸಾರ್ವಜನಿಕ ಬ್ಯಾಂಕ್‌ಗಳು ಹಲವಾರು ದಿನಗಳ ಕಾಲ ಬಂದ್ ಆಗಿರಲಿದೆ. ಫೆಬ್ರವರಿ ತಿಂಗಳು ಹತ್ತಿರ ಬರುತ್ತಿದೆ. ಫೆಬ್ರವರಿಯಲ್ಲಿ ನೀವು ಬ್ಯಾಂಕ್-ಸಂಬಂಧಿತ ಕಾರ್ಯಗಳನ್ನು ಮಾಡಲಿದ್ದರೆ ಮುಂದಿನ ತಿಂಗಳಲ್ಲಿ ಬ್ಯಾಂಕುಗಳು ಯಾವಾಗ ಮುಚ್ಚಿರುತ್ತದೆ ಎಂದು ತಿಳಿಯುವುದು ಬಹಳ ಮುಖ್ಯವಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪಟ್ಟಿಯ ಪ್ರಕಾರ, ಮುಂದಿನ ತಿಂಗಳು ಒಟ್ಟು 12 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆದಾಗ್ಯೂ, ಈ ರಜಾದಿನಗಳು ಎಲ್ಲಾ ರಾಜ್ಯಗಳಲ್ಲಿ ಇರುವುದಿಲ್ಲ. ಕೆಲವೊಂದು ರಾಜ್ಯವಾರು ರಜೆಗಳು ಇದೆ. ಹಾಗಾದರೂ ನೀವು ಮುಂದಿನ ತಿಂಗಳು ಬ್ಯಾಂಕ್‌ಗೆ ಹೋಗುವ ಮುನ್ನ ಬ್ಯಾಂಕ್‌ನ ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಿದರೆ ಉತ್ತಮ.
2022ನೇ ಸಾಲಿನ ಬ್ಯಾಂಕ್ ರಜಾದಿನಗಳ ಪಟ್ಟಿ
ಫೆಬ್ರವರಿ 2022 ರಲ್ಲಿ ವಸಂತ ಪಂಚಮಿ, ಗುರು ರವಿದಾಸ್ ಜಯಂತಿ ಮತ್ತು ಡೋಲ್ಜಾತ್ರಾ ಸೇರಿದಂತೆ ಆರು ರಜಾದಿನಗಳು ಇರುತ್ತವೆ. ಈ ದಿನಗಳಲ್ಲಿ ದೇಶಾದ್ಯಂತ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರದಂದು ವಾರದ (ವೀಕೆಂಡ್ ಬ್ಯಾಂಕ್ ಬ್ಯಾಂಡ್) ರಜೆ ಇರುತ್ತದೆ. ಬರುವ ತಿಂಗಳಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕ್‌ಗಳಲ್ಲಿ ವ್ಯವಹಾರ ಇರುವುದಿಲ್ಲ. ಈ ಸಮಯದಲ್ಲಿ ಗ್ರಾಹಕರು ಎಟಿಎಂಗಳು, ಇಂಟರ್ನೆಟ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಮತ್ತು ಇತರ ಸೇವೆಗಳನ್ನು ಪಡೆಯಬಹುದಾಗಿದೆ. ಆರ್‌ಬಿಐ ಮೂರು ಹಂತಗಳಲ್ಲಿ ಬ್ಯಾಂಕ್ ರಜೆಗಳನ್ನು ವಿಂಗಡನೆ ಮಾಡಲಿದೆ. ರಾಜ್ಯವಾರು ರಜೆಗಳು, ಧಾರ್ಮಿಕ ರಜೆಗಳು ಹಾಗೂ ಹಬ್ಬದ ಹಿನ್ನೆಲೆ ರಜೆಗಳು ಎಂದು ಆರ್‌ಬಿಐ ವಿಂಗಡನೆ ಮಾಡುತ್ತದೆ. ಮುಂದಿನ ತಿಂಗಳು ಎಷ್ಟು ದಿನಗಳ ಕಾಲ ಬ್ಯಾಂಕ್ ರಜೆಗಳು ಇರಲಿದೆ ಎಂದು ತಿಳಿಯಲು ಮುಂದೆ ಓದಿ….

ಬ್ಯಾಂಕ್ ರಜಾದಿನಗಳ ಪಟ್ಟಿ
ಫೆಬ್ರವರಿ 2: ಸೋನಮ್ ಲೋಚಾರ್ (ಗ್ಯಾಂಗ್ಟಾಕ್‌ನಲ್ಲಿ ಬ್ಯಾಂಕ್‌ಗಳು ಬಂದ್ ಆಗಿರಲಿದೆ)
ಫೆಬ್ರವರಿ 5: ಸರಸ್ವತಿ ಪೂಜೆ/ ಪಂಚಮಿ/ವಸಂತಿ ಪಂಚಮಿ ಅಗರ್ತಲಾ, ಭುವನೇಶ್ವರ, ಕೋಲ್ಕತ್ತಾದಲ್ಲಿ ಬ್ಯಾಂಕುಗಳು ಬಂದ್ ಆಗಿರಲಿದೆ)
ಫೆಬ್ರವರಿ 15: ಮೊಹಮ್ಮದ್ ಹಜರತ್ ಅಲಿ ಜನ್ಮದಿನ/ಲೂಯಿಸ್-ನಾಗೈ-ನೀ (ಇಂಫಾಲ್, ಕಾನ್ಪುರ್, ಲಕ್ನೋದಲ್ಲಿ ಬ್ಯಾಂಕ್‌ಗಳು ಬಂದ್ ಆಗಿರಲಿದೆ)
ಫೆಬ್ರವರಿ 16: ಗುರು ರವಿದಾಸ್ ಜಯಂತಿ (ಚಂಡೀಗಢದಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ)
ಫೆಬ್ರವರಿ 18: ಡೊಲ್ಜಾತ್ರಾ (ಕೋಲ್ಕತ್ತಾದಲ್ಲಿ ಬ್ಯಾಂಕುಗಳು ಬಂದ್ ಆಗಿರಲಿದೆ)
ಫೆಬ್ರವರಿ 19: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ (ಬೆಲಾಪುರ, ಮುಂಬೈ, ನಾಗ್ಪುರದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತದೆ)
ಈ ವಾರಾಂತ್ಯದಲ್ಲಿ ಸಹ ಬ್ಯಾಂಕುಗಳು ಬಂದ್ ಆಗಲಿದೆ..
6 ಫೆಬ್ರವರಿ: ಭಾನುವಾರ (ವಾರದ ರಜೆ)
12 ಫೆಬ್ರವರಿ: ತಿಂಗಳ 2ನೇ ಶನಿವಾರ (ವಾರದ ರಜೆ)
13 ಫೆಬ್ರವರಿ: ಭಾನುವಾರ (ವಾರದ ರಜೆ)
20 ಫೆಬ್ರವರಿ: ಭಾನುವಾರ (ವಾರದ ರಜೆ)
26 ಫೆಬ್ರವರಿ: ತಿಂಗಳ 4ನೇ ಶನಿವಾರ (ವಾರದ ರಜೆ)
ಫೆಬ್ರವರಿ 27: ಭಾನುವಾರ (ವಾರದ ರಜೆ)
ಗಮನಿಸಿ: ಜನವರಿಯಲ್ಲಿ ಬ್ಯಾಂಕುಗಳಿಗೆ 16 ರಜಾದಿನಗಳು
ಇನ್ನು ಇದನ್ನು ಹೊರತುಪಡಿಸಿ ಇನ್ನೂ ಎರಡು ದಿನಗಳ ಕಾಲ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದ ‘ಕಾರ್ಮಿಕ ವಿರೋಧಿ’ ನೀತಿಗಳನ್ನು ವಿರೋಧಿಸಿ ಹಲವಾರು ಕೇಂದ್ರ ಕಾರ್ಮಿಕ ಸಂಘಟನೆಗಳು ಫೆಬ್ರವರಿ 23 ಮತ್ತು ಫೆಬ್ರವರಿ 24, 2022 ರಂದು ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಜೊತೆಗೆ ಬ್ಯಾಂಕ್ ಯೂನಿಯನ್‌ಗಳು ಕಾರ್ಮಿಕ ಸಂಹಿತೆಗಳು ಮತ್ತು ಅಗತ್ಯ ರಕ್ಷಣಾ ಸೇವೆಗಳ ಕಾಯಿದೆಯನ್ನು ರದ್ದು ಮಾಡುವಂತೆ ಒತ್ತಾಯ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. ಈ ಮುಷ್ಕರದ ಹಿನ್ನೆಲೆಯಿಂದಾಗಿ ಫೆಬ್ರವರಿ 23 ಮತ್ತು ಫೆಬ್ರವರಿ 24ರಂದು ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
English summary
Bank Holidays in February 2022: Banks Will Be Closed for 12 Days, Here’s Full List
Bank Holidays in February 2022: Banks will be closed for 12 days, Here’s full list.
Read more…
[wpas_products keywords=”deal of the day”]