ಹೈಲೈಟ್ಸ್:
- ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿ.
- ಹೊಸ ತಂಡವಾಗಿ ಕಣಕ್ಕಿಳಿಯುತ್ತಿರುವ ಲಖನೌ ಸೂಪರ್ ಜಯಂಟ್ಸ್.
- ತಂಡದ ಆಟಗಾರರಿಗೆ ಎಚ್ಚರಿಕೆ ನೀಡಿದ ಮೆಂಟರ್ ಗೌತಮ್ ಗಂಭೀರ್.
ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಎರಡು ಬಾರಿ ಟ್ರೋಫಿ ಗೆದ್ದುಕೊಟ್ಟಿರುವ ಗಂಭೀರ್, ನೂತನ ಲಖನೌ ತಂಡದಲ್ಲಿ ಸ್ಥಾನ ಪಡೆಯುವ ಆಟಗಾರರು ಐಪಿಎಲ್ ಆಡುವ ಮೂಲಕ ರಾಷ್ಟ್ರೀಯ ತಂಡದ ಪರ ಆಡುವ ಕನಸು ಕಟ್ಟಿರುವುದಾಗಿ ಹೇಳಿದರೆ ಅದು ಅಪ್ರಾಮಾಣಿಕವಾದುದ್ದಾಗಿದೆ ಎಂದು ಗಂಭೀರ್ ಹೇಳಿದ್ದಾರೆ.
ಐಪಿಎಲ್ 2022 ಟೂರ್ನಿ ಸಲುವಾಗಿ ಫೆಬ್ರವರಿ 12-13ರಂದು ಬೆಂಗಳೂರಿನಲ್ಲಿ ಆಟಗಾರರ ಬೃಹತ್ ಮಟ್ಟದ ಹರಾಜು ನಡೆಯಲಿದೆ. ಈ ವಿಚಾರವಾಗಿ ಬ್ಯಾಕ್ ಸ್ಟೇಜ್ ವಿತ್ ಬೋರಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಗಂಭೀರ್, ತಮ್ಮ ತಂಡ ಸೇರುವ ಆಟಗಾರರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ರಾಹುಲ್ ಸಾರಥ್ಯದ ತಂಡಕ್ಕೆ ‘ಲಖನೌ ಸೂಪರ್ ಜಯಂಟ್ಸ್’ ಎಂದು ನಾಮಕರಣ!
“ನಾನು ಐಪಿಎಲ್ ತಂಡದ ನಾಯಕನಾಗಿದ್ದಾಗ, ಭಾರತ ತಂಡಕ್ಕೆ ಆಡಲು ಬಯಸುವ ಆಟಗಾರರು ನನ್ನ ಐಪಿಎಲ್ ತಂಡಕ್ಕೆ ಬೇಕಾಗಿಲ್ಲ ಎಂದೇ ಹೇಳುತ್ತಿದ್ದೆ. ಕೇವಲ ಫ್ರಾಂಚೈಸಿ ಪರ ಆಡಲು ಬಯಸುವ ಆಟಗಾರರು ಮಾತ್ರವೇ ನನಗೆ ಬೇಕು,” ಎಂದು ಗಂಭೀರ್ ಹೇಳಿದ್ದಾರೆ.
“ನೀವು ಭಾರತ ತಂಡದ ಪರ ಆಡುವ ಕನಸು ಕಂಡಿರುವುದಾಗಿ ಹೇಳಿ, ಲಖನೌ ತಂಡ ಇದಕ್ಕೆ ವೇದಿಕೆ ಮಾಡಿಕೊಡುತ್ತದೆ ಎಂದರೆ ನೀವು ಅವಕಾಶ ಕೊಡುತ್ತಿರುವ ಫ್ರಾಂಚೈಸಿಗೆ ಅಪ್ರಾಮಾಣಿಕರಾಗಿದ್ದೀರಿ ಎಂದರ್ಥ. ಆದರೆ ಲಖನೌ ಪರವಾಗಿ ಆಡಬೇಕೆಂದು ಬಯಸಿ, ತಂಡಕ್ಕೆ ಯಶಸ್ಸು ತಂದುಕೊಟ್ಟಿದ್ದೇ ಆದರೆ ಖಂಡಿತಾ ಭಾರತ ತಂಡದ ಪರ ಆಡುವ ಅವಕಾಶ ಸಿಗುತ್ತದೆ,” ಎಂದಿದ್ದಾರೆ.
ಐಪಿಎಲ್ ಆರಂಭಕ್ಕೆ ಇನ್ನೆರಡು ತಿಂಗಳ ಸಮಯ ಬಾಕಿಯಿದೆ. ಅಂದಹಾಗೆ ಭಾರತ ತಂಡದ ಪರ ಆಡುವುದು ಪ್ರತಿಯೊಬ್ಬ ಆಟಗಾರನ ಹೆಬ್ಬಯಕೆ ಆಗಿರುತ್ತದೆ. ಆದರೆ, ಐಪಿಎಲ್‌ನಲ್ಲಿ ಆಡುವಾಗ ಫ್ರಾಂಚೈಸಿ ಪರ ಆಡುವುದಕ್ಕೆ ಮಾತ್ರವೇ ಆಟಗಾರರು ಮೊದಲ ಆದ್ಯತೆ ಕೊಡಬೇಕು ಎಂದು ಗಂಭೀರ್ ತಿಳಿಸಿದ್ದಾರೆ.
2022ರ ಐಪಿಎಲ್ ಮೆಗಾ ಹರಾಜಿಗೆ ಅಲಭ್ಯರಾಗಿರುವ 5 ಸ್ಟಾರ್ ಆಟಗಾರರು!
“ಬಹುಶಃ ಟೂರ್ನಿ ನಡೆಯುವ ಆ ಎರಡು ತಿಂಗಳ ಸಮಯದಲ್ಲಿ ಆಟಗಾರರು ಭಾರತ ತಂಡದ ಪರ ಆಡುತ್ತೇನೆ ಎಂದು ಹೇಳಬಾರದು. ಆ ಎರಡು ತಿಂಗಳ ಸಮಯದಲ್ಲಿ ಫ್ರಾಂಚೈಸಿ ಪರ ಟೂರ್ನಿ ಗೆಲ್ಲುವ ಕಡೆಗಷ್ಟೇ ಗಮನ ಕೊಡಬೇಕು. ಇದನ್ನು ಸಾಧಿಸಲು ಬೇಕಿರುವ ಪ್ರದರ್ಶನ ಅವರಿಂದ ಹೊರಬಂದಿದ್ದೇ ಆದರೆ ಖಂಡಿತಾ ಟೀಮ್ ಇಂಡಿಯಾ ಟಿಕೆಟ್ ಸಿಗುತ್ತದೆ,” ಎಂದಿದ್ದಾರೆ.
“ಭಾರತ ತಂಡಕ್ಕೆ ಆಯ್ಕೆಯಾಗಲು ಐಪಿಎಲ್ ಖಂಡಿತಾ ವೇದಿಕೆ ಅಲ್ಲ. ಐಪಿಎಲ್ ನಿಮ್ಮೊಳಗಿನ ಪ್ರತಿಭೆಯನ್ನು ಜಗತ್ತಿನ ಮುಂದಿಡಲು ಇರುವ ವೇದಿಕೆ. ಪ್ರತಿಯೊಬ್ಬ ಆಟಗಾರನು ಇದೇ ರೀತಿ ಆಲೋಚಿಸುವ ಅಗತ್ಯವಿದೆ,” ಎಂದು ಹೇಳಿದ್ದಾರೆ.
ಲಖನೌ ಸೂಪರ್ ಜಯಂಟ್ಸ್ ತಂಡ ಮೆಗಾ ಆಕ್ಷನ್‌ಗೂ ಮುನ್ನ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ (17 ಕೋಟಿ ರೂ.), ಆಲ್‌ರೌಂಡರ್ ಮಾರ್ಕಸ್ ಸ್ಟೊಯ್ನಿಸ್ (9.2 ಕೋಟಿ ರೂ.) ಮತ್ತು ರವಿ ಬಿಷ್ಣೋಯ್ (4 ಕೋಟಿ ರೂ.) ಅವರೊಟ್ಟಿಗೆ ಒಪ್ಪಂದ ಮಾಡಿಕೊಂಡಿದೆ.
2022ರ ಐಪಿಎಲ್ ಟೂರ್ನಿ ಭಾರತದಲ್ಲಿಯೇ ಆಯೋಜನೆ! ವರದಿ
ಲಖನೌ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್
1. ಕೆಎಲ್ ರಾಹುಲ್ (ನಾಯಕ/ಓಪನರ್)
2. ಇಶಾನ್ ಕಿಶನ್ (ವಿಕೆಟ್‌ಕೀಪರ್/ಓಪನರ್)
3. ಮನೀಶ್ ಪಾಂಡೆ (ಬ್ಯಾಟ್ಸ್‌ಮನ್)
4. ಮಾರ್ಕಸ್ ಸ್ಟೋಯ್ನಿಸ್ (ಆಲ್‌ರೌಂಡರ್)
5. ಶಾರುಖ್ ಖಾನ್ (ಆಲ್‌ರೌಂಡರ್)
6. ಶಿಮ್ರಾನ್ ಹೆಟ್ಮಾಯೆರ್ (ಬ್ಯಾಟ್ಸ್‌ಮನ್)
7. ಹರ್ಷಲ್ ಪಟೇಲ್ (ಬಲಗೈ ವೇಗಿ)
8. ರವಿ ಬಿಷ್ಣೋಯ್ (ಲೆಗ್ ಸ್ಪಿನ್ನರ್)
9. ಮೊಹಮ್ಮದ್ ಶಮಿ (ಬಲಗೈ ವೇಗಿ)
10. ಕಗಿಸೊ ರಬಾಡ (ಬಲಗೈ ವೇಗಿ)
11. ಯುಜ್ವೇಂದ್ರ ಚಹಲ್ (ಲೆಗ್ ಸ್ಪಿನ್ನರ್)
Read more
[wpas_products keywords=”deal of the day gym”]