ಹೈಲೈಟ್ಸ್:
- ಶೂ ಸೇರಿ ಹಲವು ಉತ್ಪನ್ನಗಳಲ್ಲಿ ತ್ರಿವರ್ಣ ಧ್ವಜ ಮುದ್ರಿಸಿದ್ದ ಅಮೇಜಾನ್ ವಿರುದ್ಧ ಕೇಸ್
- ಮಧ್ಯ ಪ್ರದೇಶದಲ್ಲಿ ಅಮೇಜಾನ್ ವಿರುದ್ಧ ಎಫ್‌ಐಆರ್ ದಾಖಲು
- ಈ ಹಿಂದೆ ಕೂಡ ಅಮೇಜಾನ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದ ಮಧ್ಯ ಪ್ರದೇಶ ಸರ್ಕಾರ
ತ್ರಿವರ್ಣ ಧ್ವಜ ಮುದ್ರಿಸಿದ ಶೂಗಳನ್ನು ಮಾರಾಟ ಮಾಡಿ ರಾಷ್ಟ್ರೀಯ ಚಿಹ್ನೆಗಳನ್ನು ಅವಮಾನ ಮಾಡಿದ್ದಕ್ಕಾಗಿ, ಮಧ್ಯ ಪ್ರದೇಶ ಸರ್ಕಾರ ಅಮೇಜಾನ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ಶೂ ಸೇರಿ ಅಮೇಜಾನ್‌ನಿಂದ ಮಾರಾಟವಾಗುವ ಹಲವು ಉತ್ಪನ್ನಗಳಲ್ಲಿ ತ್ರಿವರ್ಣ ಧ್ವಜವನ್ನು ಅವಮಾನಿಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೂರು ಸಲ್ಲಿಕೆಯಾಗಿದ್ದವು. ಈ ದೂರಿನನ್ವಯ ಎಫ್‌ಐಆರ್ ದಾಖಲು ಮಾಡುವಂತೆ ರಾಜ್ಯ ಪೊಲೀಸ್ ನಿರ್ದೇಶಕರಿಗೆ ಗೃಹ ಸಚಿವ ನರೋತ್ತಮ ಮಿಶ್ರ ಸೂಚನೆ ನೀಡಿದ್ದರು. ಅದರನ್ವಯ ಅಮೇಜಾನ್ ಕಂಪನಿ ಹಾಗೂ ಮಾಲಕರ ವಿರುದ್ಧ ಮೊಕದ್ದಮೆ ದಾಖಲಾಗಿದೆ.
‘ ತ್ರಿವರ್ಣ ಧ್ವಜದ ಮುದ್ರಿಕೆ ಇರುವ ಶೂ ಸಹಿತ ಹಲವು ಉತ್ಪನ್ನಗಳನ್ನು ಅಮೇಜಾನ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯ ಇಲ್ಲ. ಹೀಗಾಗಿ ಅಮೇಜಾನ್‌ನ ಅಧಿಕಾರಿಗಳು ಹಾಗೂ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲು ಸೂಚನೆ ನೀಡಿದ್ದೇನೆ ‘ ಎಂದು ನರೋತ್ತಮ ಮಿಶ್ರಾ ಹೇಳಿದ್ದಾರೆ.
ಕಳೆದ ವರ್ಷ ಕೂಡ ಮಧ್ಯ ಪ್ರದೇಶದಲ್ಲಿ ಅಮೇಜಾನ್ ವಿರುದ್ಧ ದೂರು ದಾಖಲಾಗಿತ್ತು. ಅಮೇಜಾನ್‌ನಿಂದ ಕೀಟ ನಾಶಕ ತರಿಸಿಕೊಂಡಿದ್ದ ಯುವಕನೊಬ್ಬ ಅದನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಹೀಗಾಗಿ ಅಮೇಜಾನ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಈ ಪ್ರಕರಣ ಸಂಬಂಧ ಬಿಂಢ್ ಪೊಲೀಸರು ಅಮೇಜಾನ್ ವಿರುದ್ಧ ಕೇಸು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದರು. ಅಲ್ಲದೇ ಇಂಥ ಹಾನಿಕಾರಕ ವಸ್ತುಗಳನ್ನು ಮಾರಾಟ ಮಾಡಿದ ವ್ಯಾಪಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿಯೂ ಅಮೇಜಾನ್ ಹೇಳಿತ್ತು.
ಅಮೇಕಾನ್ ಡಾಟ್ ಕಾಂ ಮೂಲಕ ವ್ಯಾಪಾರಿಗಳು ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಹೀಗಾಗಿ ಇನ್ನುಮುಂದೆ ಇದು ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದಾಗಿ ಅಮೇಜಾನ್ ಹೇಳಿಕೆ ನೀಡಿತ್ತು. ಜತೆಗೆ ಇಂಥ ಹಾನಿಕಾರಕ ಉತ್ಪನ್ನಗಳನ್ನು ಮಾರಾಟ ಮಾಡಿದವರ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆ ಎಂದಿತ್ತು.
Read more
[wpas_products keywords=”deal of the day sale today offer all”]