Karnataka news paper

ಪ್ರತಿ ತಿಂಗಳು ಹತ್ತಾರು ಲಕ್ಷ ರೂಪಾಯಿ ವಂಚಿಸುತ್ತಿದ್ದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌


ಬೆಂಗಳೂರು: ಟ್ರಾವೆಲ್ಸ್‌ ಹೆಸರಿನಲ್ಲಿ ನಕಲಿ ಕಡತಗಳನ್ನು ತಯಾರು ಮಾಡಿ ಪಾಲಿಕೆಗೆ ಪ್ರತಿ ತಿಂಗಳು ಹತ್ತಾರು ಲಕ್ಷ ರೂ.ಗಳನ್ನು ವಂಚಿಸುತ್ತಿದ್ದ ಆರೋಪದಡಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ವಿನಯ್‌ ಬಾಬು ಎಂಬುವವರು ನೀಡಿದ ದೂರಿನನ್ವಯ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಸಾರಿಗೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಮಹದೇವ್‌, ಗುಮಾಸ್ತ ರಮೇಶ್‌, ಕಂಪ್ಯೂಟರ್‌ ಆಪರೇಟರ್‌ ಸತೀಶ್‌ ಮತ್ತು ಪಂಚಮುಖಿ ಟೂರ್ಸ್ ಟ್ರಾವೆಲ್ಸ್‌ ಮಾಲೀಕ ಶಿವಾನಂದ ವಿರುದ್ಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್‌ 420, 465, 468, 471 ಅಡಿಯಲ್ಲಿ ವಂಚನೆ, ನಕಲಿ ದಾಖಲೆ ತಯಾರಿಕೆ, ಅಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಡಿಎ ಇ-ಹರಾಜಿನಲ್ಲಿ ಕಾರ್ನರ್‌ ಸೈಟ್‌ಗಳ ಗೋಲ್‌ಮಾಲ್‌..! ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ..!
ಈ ಹಿಂದೆ ಪಾಲಿಕೆಯ ಅಧಿಕಾರಿಗಳ ಬಳಕೆಗೆಂದು ಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ಒದಗಿಸುತ್ತಿದ್ದ ಟ್ರಾವೆಲ್ಸ್‌ಗಳ ಪೈಕಿ ಒಂದಾಗಿರುವ ಎಂ.ಎಂ. ಲಾಜಿಸ್ಟಿಕ್‌ ಟೂರ್ಸ್ ಆ್ಯಂಡ್‌ ಟ್ರಾವೆಲ್ಸ್‌ ಸಂಸ್ಥೆಯು ತನ್ನ ಚಾಲಕರು, ಸಿಬ್ಬಂದಿ ವರ್ಗದವರಿಗೆ ಪಾವತಿಸುತ್ತಿದ್ದ ಪಿಎಫ್‌, ಇಎಸ್‌ಐ ದಾಖಲೆಗಳನ್ನು ಆ ಸಂಸ್ಥೆಯು ಪಾಲಿಕೆಗೆ ನೀಡುತ್ತಿದ್ದ ಕಡತಗಳಿಂದ ತೆಗೆದು, ಅವುಗಳನ್ನೇ ನಕಲು ಮಾಡಿಕೊಂಡು ಪಂಚಮುಖಿ ಟೂರ್ಸ್ ಟ್ರಾವೆಲ್ಸ್‌ ಹೆಸರಿನಲ್ಲಿ ಕಡತಗಳನ್ನು ತಯಾರು ಮಾಡಿ, ಪಾಲಿಕೆಗೆ ಪ್ರತಿ ತಿಂಗಳು ಹತ್ತಾರು ಲಕ್ಷ ರೂ.ಗಳನ್ನು ವಂಚಿಸುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ದಾಖಲೆಗಳ ಸಹಿತ ಎಂ.ಎಂ.ಲಾಜಿಸ್ಟಿಕ್‌ ಟೂರ್ಸ್ ಆ್ಯಂಡ್‌ ಟ್ರಾವೆಲ್ಸ್‌ ಸಂಸ್ಥೆಯ ವ್ಯವಸ್ಥಾಪಕ ವಿನಯ್‌ ಬಾಬು ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ.



Read more

[wpas_products keywords=”deal of the day sale today offer all”]