ಹೈಲೈಟ್ಸ್:
- 80-90ರ ದಶಕದ ಸ್ಟಾರ್ ನಟಿ ಭಾಗ್ಯಶ್ರೀ ಪುತ್ರಿ ಚಿತ್ರರಂಗಕ್ಕೆ
- ಭಾಗ್ಯಶ್ರೀ ಪುತ್ರಿ ಅವಂತಿಕಾ ದಾಸಾನಿ ಬಣ್ಣದ ಲೋಕಕ್ಕೆ ಎಂಟ್ರಿ
- ಕನ್ನಡ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪ್ರವೇಶ ಮಾಡಲಿರುವ ಅವಂತಿಕಾ
ಬಾಲಿವುಡ್‌ನಲ್ಲಿ 90ರ ದಶಕದ ಬ್ಲಾಕ್‌ಬಸ್ಟರ್ ರೊಮ್ಯಾಂಟಿಕ್ ಸಿನಿಮಾ ‘ಮೈನೆ ಪ್ಯಾರ್ ಕಿಯಾ’ದ ಸುಂದರ ನಟಿ ಭಾಗ್ಯಶ್ರೀ ಈಗಲೂ ಸಿನಿಪ್ರಿಯರ ಮನದಲ್ಲಿ ಮನ ಮೆಚ್ಚಿದ ನಲ್ಲೆ. ಅವರ ಆಕರ್ಷಕ ನಗು, ಒಲವಿನ ಕಣ್ಣುಗಳಲ್ಲಿರುವ ಪ್ರೇಮಭಾವ ಸದಾ ಹಚ್ಚಹಸಿರು. ಈಗ ಅವರಷ್ಟೇ ಸುಂದರವಾಗಿರುವ ಅವರ ಪುತ್ರಿ ಅವಂತಿಕಾ ದಾಸಾನಿ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದು, ಈ ಸುದ್ದಿ ಭಾಗ್ಯಶ್ರೀ ಅಭಿಮಾನಿಗಳಿಗೆ ಖುಷಿ ತಂದಿದೆ. ಸ್ಯಾಂಡಲ್‌ವುಡ್‌ನಲ್ಲಿ ಮ್ಯೂಸಿಕಲ್ ಲವ್ ಸ್ಟೋರಿಗೆ ಹೆಸರಾಗಿರುವ ನಿರ್ದೇಶಕ ನಾಗಶೇಖರ್ ಅವರ ಹೊಸ ಸಿನಿಮಾದಲ್ಲಿ ಭಾಗ್ಯಶ್ರೀ ಪುತ್ರಿ ನಾಯಕಿಯಾಗಲಿದ್ದಾರೆ.
ಈವರೆಗೆ ‘ಮೈನಾ’, ‘ಸಂಜು ವೆಡ್ಸ್ ಗೀತಾ’ನಂಥ ಸಂಗೀತಮಯ ಪ್ರೇಮಕಥೆಗಳ ಸಿನಿಮಾ ಮಾಡಿರುವ ನಿರ್ದೇಶಕ ನಾಗಶೇಖರ್ ಈಗ ಅಂತಹದ್ದೇ ಇನ್ನೊಂದು ಸಿನಿಮಾ ಆರಂಭಿಸಿದ್ದು, ಅದರಲ್ಲಿ ಭಾಗ್ಯಶ್ರೀ ಪುತ್ರಿ ಅವಂತಿಕಾ ದಾಸಾನಿ ಮಿಂಚಲಿದ್ದಾರೆ. ಈ ಬಗ್ಗೆ ಲವಲವಿಕೆಗೆ ಖಚಿತ ಮಾಹಿತಿ ಸಿಕ್ಕಿದ್ದು ನಿರ್ದೇಶಕರು ಈಗಾಗಲೇ ಭಾಗ್ಯಶ್ರೀ ಮತ್ತು ಅವರ ಪುತ್ರಿಯನ್ನು ಭೇಟಿಯಾಗಿ ಕಥೆ ಹೇಳಿ ಓಕೆ ಮಾಡಿಸಿದ್ದಾರೆ. ಸದ್ಯದಲ್ಲೇ ಈ ಕುರಿತ ಅಗ್ರಿಮೆಂಟ್ ಕೂಡ ಆಗಲಿದೆಯಂತೆ. ಈ ಸಿನಿಮಾಗೆ ‘ಯಾವೂರ ದಾಸಯ್ಯ’ ಎಂಬ ವಿಚಿತ್ರ ಟೈಟಲ್ ಇಡಲಾಗಿದ್ದು, ಇದು ನೈಜ ಘಟನೆಯಾಧರಿತ ಸಿನಿಮಾವಾಗಿದೆ. ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ನಾಗಶೇಖರ್, ‘ಆ್ಯಕ್ಷನ್ ಪ್ಯಾಕ್ಡ್ ಲವ್ ಸ್ಟೋರಿ ಸಿನಿಮಾ ಇದು’ ಎಂದು ಬರೆದುಕೊಂಡಿದ್ದಾರೆ.
ಅವಂತಿಕಾ ದಾಸಾನಿ ಅವರು ಲಂಡನ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿ ಇತ್ತೀಚೆಗಷ್ಟೇ ಭಾರತಕ್ಕೆ ವಾಪಸಾಗಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಅವರು ಕನ್ನಡ ಸಿನಿಮಾ ಮೂಲಕ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ಈ ಸಿನಿಮಾವನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ನಾಗಶೇಖರ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಅಯ್ಯಯ್ಯೋ..! ‘ಮಾಸ್ತಿಗುಡಿ’ ನಿರ್ದೇಶಕ ನಾಗಶೇಖರ್ ಮುಖ ಹೀಗೇಕೆ ಆಗಿದೆ?
ಅಂದಹಾಗೆ, ನಟಿ ಭಾಗ್ಯಶ್ರಿ ಅವರು ಕನ್ನಡದಲ್ಲಿ ‘ಅಮ್ಮಾವ್ರ ಗಂಡ’ ಸಿನಿಮಾದಲ್ಲಿ ನಟಿಸಿದ್ದರು. ಶಿವರಾಜ್‌ಕುಮಾರ್ ಹೀರೋ ಆಗಿದ್ದ ಈ ಸಿನಿಮಾ ಆ ಕಾಲಕ್ಕೆ ಹಿಟ್ ಎನಿಸಿಕೊಂಡಿತ್ತು. ಆನಂತರ ಸ್ಯಾಂಡಲ್‌ವುಡ್‌ನಿಂದ ದೂರವಾಗಿದ್ದ ಅವರು, ನಿಖಿಲ್ ಕುಮಾರಸ್ವಾಮಿ ಮತ್ತು ರಚಿತಾ ರಾಮ್ ನಟಿಸಿದ್ದ ‘ಸೀತಾರಾಮ ಕಲ್ಯಾಣ’ ಸಿನಿಮಾದ ಮೂಲಕ ಪುಣಃ ಸ್ಯಾಂಡಲ್‌ವುಡ್‌ಗೆ ಮರಳಿದ್ದರು. ಈಚೆಗೆ ತೆರೆಕಂಡ ‘ತಲೈವಿ’ಯಲ್ಲಿ ಬಣ್ಣ ಹಚ್ಚಿದ್ದ ಅವರು, ಸದ್ಯ ಬಿಡುಗಡೆ ಸಜ್ಜಾಗಿರುವ ‘ರಾಧೆ ಶ್ಯಾಮ್’ನಲ್ಲೂ ಒಂದು ಇಂಪಾರ್ಟೆಂಟ್ ಪಾತ್ರ ಮಾಡಿದ್ದಾರೆ. 52ರ ಹರೆಯದ ಭಾಗ್ಯಶ್ರೀ ಈಗಲೂ ಯಂಗ್ ಹೀರೋಯಿನ್ಸ್‌ಗೆ ಪೈಪೋಟಿ ನೀಡುವಂತೆ ಫಿಟ್‌ನೆಸ್ಟ್ ಕಾಯ್ದುಕೊಂಡಿದ್ದಾರೆ.
ಬಾಲಿವುಡ್‌ನ ಯಂಗ್ ಹೀರೋ ಜೊತೆ ನಾಗಶೇಖರ್ ಹಿಂದಿ ಸಿನಿಮಾ; ಬಿಟೌನ್‌ಗೆ ಹಾರಿದ ‘ಮೈನಾ’ ಡೈರೆಕ್ಟರ್!
Read more
[wpas_products keywords=”deal of the day party wear dress for women stylish indian”]