Karnataka news paper

ಕರ್ನಾಟಕದಲ್ಲಿ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಲು ಪರೀಕ್ಷೆ ನೀತಿ ಪಾಲಿಸದೆ ಇರುವುದೇ ಕಾರಣ!


ಹೈಲೈಟ್ಸ್‌:

  • ಕರ್ನಾಟಕದಲ್ಲಿ ಪ್ರತಿದಿನ 40 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣ
  • ಐಸಿಎಎಂಆರ್ ನೀತಿಗೆ ಅನುಗುಣವಾಗಿ ಪರೀಕ್ಷೆ ನಡೆಸದ ಕರ್ನಾಟಕ
  • ಲಕ್ಷಣರಹಿತರ ಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದಿರುವ ಐಸಿಎಂಆರ್
  • ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪರೀಕ್ಷೆ ಸಂಖ್ಯೆ ಏರಿಕೆ

ಬೆಂಗಳೂರು: ಮಹಾರಾಷ್ಟ್ರ, ತಮಿಳುನಾಡು, ದಿಲ್ಲಿ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದೈನಂದಿನ ಕೋವಿಡ್ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಪ್ರತಿದಿನ 40 ಸಾವಿರಕ್ಕೂ ಹೆಚ್ಚಿನ ಕೇಸ್‌ಗಳು ದಾಖಲಾಗುತ್ತಿವೆ. ಕೆಲವು ದಿನಗಳಿಂದ ದೇಶದ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದು ಕರ್ನಾಟಕದಲ್ಲಿ. ಇದಕ್ಕೆ ಕೋವಿಡ್ ಪರೀಕ್ಷೆಗಳೇ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.

ಮೆಟ್ರೋ ನಗರಗಳಾದ ದಿಲ್ಲಿ ಮತ್ತು ಮುಂಬಯಿಯಲ್ಲಿ ಪ್ರಕರಣಗಳ ಸಂಖ್ಯೆ ಕೆಲವು ದಿನಗಳ ಹಿಂದೆ ಏರಿಕೆಯಾಗಿದ್ದರೂ, ಕ್ರಮೇಣ ಇಳಿಕೆ ಕಾಣುತ್ತಿದೆ. ಆದರೆ ಬೆಂಗಳೂರು ನಗರ ಇತರೆ ಎಲ್ಲ ನಗರಗಳಿಗಿಂತ ಮುಂದಿದೆ. ರಾಜ್ಯದಲ್ಲಿ ಐಸಿಎಂಆರ್ ಪರೀಕ್ಷೆಯ ನೀತಿಯನ್ನು ಪಾಲಿಸದೆ ಇರುವುದು ಇದಕ್ಕೆ ಕಾರಣ ಎಂದು ರಾಷ್ಟ್ರೀಯ ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಕರ್ನಾಟಕದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಎಂಕೆ ಸುದರ್ಶನ್ ಹೇಳಿದ್ದಾರೆ. ಐಸಿಎಂಆರ್ ಇತ್ತೀಚಿನ ಆದೇಶದಂತೆ ಲಕ್ಷಣ ಇರುವ ರೋಗಿಗಳನ್ನು ಮಾತ್ರವೇ ಪರೀಕ್ಷೆಗೆ ಒಳಪಡಿಸಬೇಕು. ಆದರೆ ಕರ್ನಾಟಕದಲ್ಲಿ ಹಾಗೆ ಮಾಡುತ್ತಿಲ್ಲ.
ಒಂದೇ ವರ್ಷದಲ್ಲಿ ಶೇ.100ರಷ್ಟು ಕೋವಿಡ್‌ ಲಸಿಕೆ ಗುರಿ ತಲುಪಿದ ಕರ್ನಾಟಕ!
‘ಪರೀಕ್ಷೆಯಲ್ಲಿನ ಹೆಚ್ಚಳದ ಕಾರಣದಿಂದ ಪ್ರಕರಣಗಳಲ್ಲಿಯೂ ಏರಿಕೆಯಾಗುತ್ತಿದೆ. ಲಕ್ಷಣ ರಹಿತ ಜನರು ಕೂಡ ಪರೀಕ್ಷೆಗೆ ಒಳಪಡುತ್ತಿದ್ದಾರೆ. ಈ ಕಾರಣದಿಂದಾಗಿಯೇ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಪ್ರತಿದಿನ ಸುಮಾರು 1.5 ಲಕ್ಷ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ವರದಿಯಾದ ಎಲ್ಲ ಕೋವಿಡ್ 19 ಪ್ರಕರಣಗಳೂ ಲಕ್ಷಣವಿರುವ ಪ್ರಕರಣಗಳಲ್ಲ. ವಾಸ್ತವವಾಗಿ ಸೋಂಕು ತಗುಲುವ ಶೇ 80- 90ರಷ್ಟು ಮಂದಿ ಲಕ್ಷಣರಹಿತರಾಗಿರುತ್ತಾರೆ (Asymptomatic) ಮತ್ತು ಶೇ 5- 6ರಷ್ಟು ರೋಗಿಗಳು ಮಾತ್ರವೇ ಆಸ್ಪತ್ರೆಗೆ ದಾಖಲಾಗುತ್ತಾರೆ. ಎರಡನೇ ಅಲೆಯಲ್ಲಿ ಉಂಟಾದರೆ ತೀವ್ರ ನಿಗಾ ಘಟಕ ಅಥವಾ ಆಕ್ಸಿಜನ್ ಹಾಸಿಗೆಯ ಅಗತ್ಯ ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ಪ್ರಕರಣಗಳಾಗಿ ವರದಿಯಾಗುತ್ತಿರುವ ಸೋಂಕು ಭಯ ಹುಟ್ಟಿಸುವಂತೆ ಇದೆ. ಪ್ರಸ್ತುತ ಸೋಂಕಿತರ ಸಂಖ್ಯೆ ಹೆದರಿಕೆ ಮೂಡಿಸಬಹುದು. ಆದರೆ ವಾಸ್ತವದಲ್ಲಿ ಚಿಂತೆ ಮಾಡುವಂತಹ ಸ್ಥಿತಿ ಎದುರಾಗಿಲ್ಲ. ವಾರಾಂತ್ಯದ ಕರ್ಫ್ಯೂಗಳು ಸಣ್ಣ ಮಾತ್ರದಲ್ಲಿ ಪ್ರಯೋಜನಕಾರಿ ಎಂಬುದನ್ನು ಅಂಕಿ ಅಂಶಗಳು ಸೂಚಿಸಿವೆ. ಮುಖ್ಯಮಂತ್ರಿಗಳನ್ನು ಒಳಗೊಂಡ ಸಭೆಯಲ್ಲಿ ವಿಸ್ತ್ರತ ಚರ್ಚೆಯ ಬಳಿಕ ವೀಕೆಂಡ್ ಕರ್ಫ್ಯೂಗಳನ್ನು ಮುಂದುವರಿಸದೆ ಇರಲು ನಿರ್ಧರಿಸಲಾಯಿತು ಎಂದು ಹೇಳಿದ್ದಾರೆ.
ಕೋವಿಡ್ ತಪಾಸಣೆ: ರಾಜ್ಯದಲ್ಲಿ ಈವರೆಗೆ ನಡೆಸಲಾದ ಟೆಸ್ಟಿಂಗ್ ಸಂಖ್ಯೆ ಆರು ಕೋಟಿ
ಹಾಗೆಂದು ನಾವು ನಿರ್ಲಕ್ಷ್ಯ ವಹಿಸಬಾರದು. ಎಚ್ಚರಿಕೆಯಿಂದ ಇರಯವ ಅಗತ್ಯವಿದೆ. ಅಧಿಕಾರಿಗಳು ಕೋವಿಡ್ ರೋಗಿಗಳ ಆಸ್ಪತ್ರೆ ದಾಖಲೀಕರಣದ ಮೇಲೆ ನಿಗಾ ಇರಿಸಿದ್ದಾರೆ. ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದರೆ, ನಿರ್ಬಂಧ ಕ್ರಮಗಳನ್ನು ಮತ್ತೆ ಜಾರಿಗೆ ತರುವ ಹಾಗೂ ಪರಿಷ್ಕರಿಸುವ ಸಾಧ್ಯತೆ ಎದುರಾಗಬಹುದು. ಪ್ರಸ್ತುತದ ಸನ್ನಿವೇಶ ಗಮನಿಸಿದರೆ, ಗಣಿತ ಮಾದರಿಯು ಈ ತಿಂಗಳಲ್ಲಿ ಪರಿಸ್ಥಿತಿ ಸ್ಥಿರಗೊಳ್ಳಲಿದೆ ಮತ್ತು ತಿಂಗಳ ಅಂತ್ಯದಿಂದ ಸಂಖ್ಯೆಯಲ್ಲಿ ಕುಸಿತ ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ರೋಗ ಲಕ್ಷಣಗಳು ಇಲ್ಲದೆ ಇದ್ದರೆ, ಅಥವಾ ಅಧಿಕ ಅಪಾಯ ಇದೆ ಎನಿಸದೆ ಇದ್ದರೆ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ ಎಂದು ಐಸಿಎಂಆರ್ ಕೆಲವು ವಾರಗಳ ಹಿಂದೆ ತಿಳಿಸಿತ್ತು. ಹೋಮ್ ಐಸೋಲೇಷನ್ ಮಾರ್ಗಸೂಚಿಗೆ ಅನುಗುಣವಾಗಿ ಬಿಡುಗಡೆಯಾದವರು, ಕೋವಿಡ್ ಕೇಂದ್ರದಿಂದ ಡಿಸ್ಚಾರ್ಜ್ ಆದವರು, ಅಂತಾರಾಜ್ಯ ಆಂತರಿಕ ಪ್ರಯಾಣ ನಡೆಸುವವರನ್ನು ಪರೀಕ್ಷೆಗೆ ಒಳಪಡಿಸುವುದು ಬೇಡ ಎಂದು ಹೇಳಿತ್ತು.



Read more

[wpas_products keywords=”deal of the day sale today offer all”]