Karnataka news paper

ಉತ್ತರ ಪ್ರದೇಶ ಚುನಾವಣೆ: ಟಿಕೆಟ್ ಪಡೆಯಲು ಕುಟುಂಬ ಸದಸ್ಯರು, ಸಂಬಂಧಿಕರ ನಡುವೆ ಪೈಪೋಟಿ ತೀವ್ರ


The New Indian Express

ಲಖನೌ: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯುವುದಕ್ಕೆ ರಾಜಕಾರಣಿಗಳ ಕುಟುಂಬ ಸದಸ್ಯರಲ್ಲೇ ಪೈಪೋಟಿ ತೀವ್ರಗೊಳ್ಳುತ್ತಿದೆ. 

ಪತಿಯ ವಿರುದ್ಧ ಪತ್ನಿ, ಸಹೋದರರ ಪುತ್ರ/ಪುತ್ರಿಯರೇ ಒಬ್ಬರ ವಿರುದ್ಧ ಮತ್ತೊಬ್ಬರು ನಿಲ್ಲುತ್ತಿದ್ದಾರೆ.

ಈ ರೀತಿಯ ಸನ್ನಿವೇಶವಿರುವ ಹಲವು ವಿಧಾನಸಭಾ ಕ್ಷೇತ್ರಗಳ ಪೈಕಿ ಲಖನೌ ನಲ್ಲಿರುವ ಸರೋಜಿನಿ ನಗರ್ ವಿಧಾನಸಭಾ ಕ್ಷೇತ್ರವೂ ಒಂದು ಸಚಿವೆ ಸ್ವಾತಿ ಸಿಂಗ್ ಹಾಗೂ ಅವರ ಪತಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ದಯಾಶಂಕರ್ ಸಿಂಗ್ ಇಬ್ಬರೂ ಟಿಕೆಟ್ ಪಡೆಯುವುದಕ್ಕೆ ತೀವ್ರ ಪೈಪೋಟಿ ನಡೆಸಿದ್ದಾರೆ.

ಇನ್ನು ಅಮೇತಿಯಲ್ಲಿ ಮಾಜಿ ಕಾಂಗ್ರೆಸ್ ನಾಯಕ ಸಂಜಯ್ ಸಿಂಗ್ ಅವರ ಇಬ್ಬರು ಪತ್ನಿಯರು ನಡುವೆ ಬಿಜೆಪಿ ಟಿಕೆಟ್ ಪಡೆಯುವುದಕ್ಕೆ ಭರ್ಜರಿ ಲಾಭಿ ನಡೆಸುತ್ತಿದ್ದಾರೆ.

ಗರಿಮಾ ಸಿಂಗ್ ಸಂಜಯ್ ಸಿಂಗ್ ಅವರ ಮೊದಲ ಪತ್ನಿಯಾಗಿದ್ದು ಅಮೇಥಿಯ ಹಾಲಿ ಬಿಜೆಪಿ ಶಾಸಕಿ. ಆದರೆ ಸಂಜಯ್ ಸಿಂಗ್ ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರಗೊಳ್ಳುತ್ತಿದ್ದಂತೆಯೇ ಸಂಜಯ್ ಸಿಂಗ್ ಅವರ ಎರಡನೇ ಪತ್ನಿ ಅಮಿತಾ ಸಿಂಗ್ ಗರಿಮಾ ಸಿಂಗ್ ಅವರಿಗೆ ಸವಾಲಾಗಿ ಪರಿಣಮಿಸಿದರು. 2019 ರಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುವುದಕ್ಕೂ ಮುನ್ನ ಸಂಜಯ್ ಸಿಂಗ್ ರಾಜ್ಯಸಭೆ ಸ್ಥಾನವನ್ನು ತ್ಯಜಿಸಿದ್ದರು. ಈಗ ಸಂಜಯ್ ಸಿಂಗ್ ತಮ್ಮ ಎರಡನೇ ಪತ್ನಿ ಅಮಿತಾ ಸಿಂಗ್ ಗೆ ಅಮೇಥಿಯಿಂದ ಬಿಜೆಪಿ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುತ್ತಿವೆ ಪಕ್ಷದ ಮೂಲಗಳು. ಸಂಜಯ್ ಸಿಂಗ್ 1995 ರಲ್ಲಿ ತಮ್ಮ ಮೊದಲ ಪತ್ನಿ ಗರಿಮಾ ಸಿಂಗ್ ಗೆ ವಿಚ್ಛೇದನ ನೀಡಿ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಅಮಿತಾ ಸಿಂಗ್ ಅವರನ್ನು ವಿವಾಹವಾಗಿದ್ದರು. 2017 ರಲ್ಲಿ ಅಮಿತಾ ಸಿಂಗ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು.

ಇದನ್ನೂ ಓದಿ: ಹೊಸ ವೈಖರಿ, ಇನ್ನು ಮುಂದೆ ಬಹುತೇಕ ಪ್ರಾದೇಶಿಕ ಪಕ್ಷಗಳು ಮುಸ್ಲಿಂ ಸಮುದಾಯವನ್ನು ಓಲೈಸುವುದಿಲ್ಲ!

ಇದೇ ರೀತಿ ಘಾಜಿಪುರ ಜಿಲ್ಲೆಯಲ್ಲೂ ಕುಟುಂಬ ಸದಸ್ಯರ ನಡುವೆಯೇ ಟಿಕೆಟ್ ಪಡೆಯುವುದಕ್ಕೆ ಹಣಾಹಣಿ ಜೋರಾಗಿ ನಡೆಯುತ್ತಿದೆ. 

ಮೊಹಮ್ಮದಾಬಾದ್ ನ ಮಾಜಿ ಬಿಜೆಪಿ ಶಾಸಕ ದಿವಂಗತ ಕೃಷ್ಣಾನಂದ್ ರೈ ಅವರ ಕುಟುಂಬ ಸದಸ್ಯರ ನಡುವೆಯೂ ಟಿಕೆಟ್ ವಿಷಯದಲ್ಲಿ ವೈಮನಸ್ಸುಂಟಾಗಿದೆ. ಕೃಷ್ಣಾನಂದ ರೈ ನಿಧನದ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರ ಪತ್ನಿ ಅಲ್ಕಾ ರೈ ಗೆದ್ದಿದ್ದರು. ಇದಾದ ಬಳಿಕ ನಡೆದ 2017 ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಅವರು ಬಿಜೆಪಿಯಿಂದ ಗೆದ್ದಿದ್ದರು. ಈಗ ಅಲ್ಕಾ ರೈ ತಮ್ಮ ಪುತ್ರ ಪಿಯೂಷ್ ರೈ ಗೆ ಟಿಕೆಟ್ ಕೊಡಿಸಲು ನಡೆಸುತ್ತಿರುವ ಲಾಭಿಗೆ ಕೃಷ್ಣಾನಂದ ರೈ ಅವರ ಹಿರಿಯ ಸಹೋದರನ ಪುತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

“ನನ್ನ ಚಿಕ್ಕಪ್ಪನ ಸಾವಿನ ನಂತರ ನನ್ನ ಸಮಯವನ್ನು ಕುಟುಂಬಕ್ಕಾಗಿ ಹಾಗೂ ಕ್ಷೇತ್ರದ ಜನತೆಗಾಗಿ ತ್ಯಾಗ ಮಾಡಿದೆ, ಇದರ ಜೊತೆಗೆ ಕೋರ್ಟ್ ಕೇಸ್ ಗಳಲ್ಲಿ ಹೋರಾಡುತ್ತಿದ್ದಾಗ ಹಲವಾರು ಸವಾಲುಗಳನ್ನು ವಿರೋಧಿಗಳಿಂದ ಎದುರಿಸಿದೆ. ಆದರೆ ಅಲ್ಕಾ ಅವರು ಮಾತ್ರ ಮುಂಚೂಣಿಯಲ್ಲಿದ್ದರು. ಅವರಿಗೆ ಚುನಾವಣೆಯಲ್ಲಿ ಗೆಲ್ಲಲೂ ಸಹಾಯ ಮಾಡಿದೆ. ಈಗ ಅವರು ಅವರ ಪುತ್ರನಿಗೆ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದಾರೆ, ಇದನ್ನು ಹೇಗೆ ಸಹಿಸಿಕೊಳ್ಳುವುದು” ಎಂದು ಕೃಷ್ಣಾನಂದ ರೈ ಅವರ ಸಹೋದರನ ಪುತ್ರ ಪ್ರಶ್ನಿಸಿದ್ದಾರೆ.

ಘೋರವಾಲ್ ನ ಬಿಜೆಪಿ ಶಾಸಕ ಅನಿಲ್ ಮೌರ್ಯ ಹಾಗೂ ಅವರ ಹಿರಿಯ ಸಹೋದರ ಉದಯ್ ಲಾಲ್ ಮೌರ್ಯ (ಇತ್ತೀಚೆಗೆ ಬಿಜೆಪಿ ತೊರೆದು ಎಸ್ ಪಿ ಸೇರಿದ್ದ ನಾಯಕ) ಇಬ್ಬರೂ ಪರಸ್ಪರ ಎದುರಾಳಿಗಳಾಗಿ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.

ಇಷ್ಟೆಲ್ಲದರ ನಡುವೆ ಯಾರು ಏನೇ ಹೇಳಲಿ, ಟಿಕೆಟ್ ಗಾಗಿ ಎಷ್ಟೇ ಲಾಭಿ ಮಾಡಲಿ ಯಾರಿಗೆ ಟಿಕೆಟ್ ನೀಡಬೇಕು ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಅಂತಿಮ ತೀರ್ಮಾನ ಪಕ್ಷದ್ದಾಗಿರುತ್ತದೆ ಎನ್ನುತ್ತಾರೆ ಬಿಜೆಪಿ ಲೋಕಸಭೆಯ ಸಮನ್ವಯದ ಹೊಣೆ ಹೊತ್ತಿರುವ ರಾಜೇಶ್ ಮಸಲ
 



Read more

[wpas_products keywords=”deal of the day”]