Karnataka news paper

ಕುಳುವ ಮಹಾಸಂಘದ ಅಧ್ಯಕ್ಷರಾಗಿ ಶಿವಾನಂದ ಭಜಂತ್ರಿ ಆಯ್ಕೆ


ಬೆಂಗಳೂರು: ಅಖಿಲ ಕರ್ನಾಟಕ ಕುಳುವ ಮಹಾಸಂಘದ (ಕೊರಮ, ಕೊರಚ, ಕೊರವ ಸಮುದಾಯಗಳ ಒಕ್ಕೂಟ) ಅಧ್ಯಕ್ಷರಾಗಿ ಶಿವಾನಂದ ಎಂ. ಭಜಂತ್ರಿ ಆಯ್ಕೆಯಾಗಿದ್ದಾರೆ.

ರಾಜ್ಯ ಕಾರ್ಯಕಾರಿ ಸಮಿತಿಗೆ ಜ.23ರಂದು ಚುನಾವಣೆ ನಡೆದಿತ್ತು. ಮುಂದಿನ ಮೂರು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಎಂ. ರಾಘವೇಂದ್ರ ತಿಳಿಸಿದ್ದಾರೆ.

ಇತರ ಪದಾಧಿಕಾರಿಗಳು: ಬಿ.ಎಸ್. ಆನಂದಕುಮಾರ್ ಏಕಲವ್ಯ (ರಾಜ್ಯ ಪ್ರಧಾನ ಕಾರ್ಯದರ್ಶಿ), ಆನಂದಪ್ಪ (ಹಿರಿಯ ಉಪಾಧ್ಯಕ್ಷ), ವಿ. ಕಿರಣಕುಮಾರ್ ಕೊತ್ತಗೆರೆ (ಜಂಟಿ ಕಾರ್ಯದರ್ಶಿ), ಆದರ್ಶ ಯಲ್ಲಪ್ಪ (ರಾಜ್ಯ ಹೆಚ್ಚುವರಿ ಕಾರ್ಯದರ್ಶಿ), ಹುಲಿಗಪ್ಪ ಮಾಣಿಕ್ (ಸಹ ಕಾರ್ಯದರ್ಶಿ), ರಮಣಪ್ಪ ಭಜಂತ್ರಿ (ಖಜಾಂಚಿ).

ಭೀಮಪುತ್ರಿ ನಾಗಮ್ಮ (ಬೆಂಗಳೂರು ವಿಭಾಗದ ಉಪಾಧ್ಯಕ್ಷರು), ಪಿ.ವೆಂಕಟಾಚಲಶೆಟ್ಟಿ (ಮೈಸೂರು ವಿಭಾಗದ ಉಪಾಧ್ಯಕ್ಷ), ಹನುಮಂತಪ್ಪ ಅಪ್ಪರಾಯಿ ಭಜಂತ್ರಿ (ಕಿತ್ತೂರು ಕರ್ನಾಟಕ ವಿಭಾಗದ ಉಪಾಧ್ಯಕ್ಷ), ನಿಲಕಂಠಪ್ಪ ಭಜಂತ್ರಿ ಮಸ್ಕಿ (ಕಲ್ಯಾಣ ಕರ್ನಾಟಕ ವಿಭಾಗದ ಉಪಾಧ್ಯಕ್ಷ), ಎ.ವೆಂಕಟೇಶ್‌ (ಬೆಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ), ಎಂ.ಎ.ರಂಗಸ್ವಾಮಿ (ಮೈಸೂರು ವಿಭಾಗದ ಸಂಘಟನಾ ಕಾರ್ಯದರ್ಶಿ), ಈರಣ್ಣ ಗುರುನಾಥ ಭಜಂತ್ರಿ (ಕಲ್ಯಾಣ ಕರ್ನಾಟಕ ವಿಭಾಗದ ಸಂಘಟನಾ ಕಾರ್ಯದರ್ಶಿ).



Read more from source

[wpas_products keywords=”deal of the day sale today kitchen”]