Karnataka news paper

ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ: ಕಾಲ ಭೈರವನಿಗೆ ಪೂಜೆ, ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟಿಸಲಿರುವ ಪಿಎಂ


Source : ANI

ವಾರಣಾಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸೋಮವಾರ ತಮ್ಮ ಸ್ವಕ್ಷೇತ್ರ ವಾರಣಾಸಿ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಇಂದು ಅವರು, ಸುಮಾರು 339 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾಶಿ ವಿಶ್ವನಾಥ ದೇಗುಲದ ಕಾರಿಡಾರ್ ನ ಮೊದಲನೇ ಹಂತವನ್ನು ಉದ್ಘಾಟಿಸಲಿದ್ದಾರೆ.

ನಂತರ ಅವರು ಕಾಶಿ ವಿಶ್ವನಾಥ ದೇಗುಲದಲ್ಲಿ ದೇವರಿಗೆ ಮಧ್ಯಾಹ್ನ ಪೂಜೆ ಸಲ್ಲಿಸಲಿದ್ದು ನಂತರ ಕಾಶಿ ವಿಶ್ವನಾಥ ಕಾರಿಡಾರ್ ನ್ನು ಉದ್ಘಾಟಿಸಲಿದ್ದಾರೆ. 

ಇದನ್ನೂ ಓದಿ: ಡಿ.13ರಂದು 900 ಕೋಟಿ ರೂ. ವೆಚ್ಚದ ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟಿಸಲಿರುವ ಪ್ರಧಾನಿ ಮೋದಿ!

ಅದಕ್ಕೂ ಮೊದಲು ಇಂದು ಬೆಳಗ್ಗೆ ವಾರಣಾಸಿಯಲ್ಲಿ ಕಾಲ ಭೈರವ ದೇವಸ್ಥಾನಕ್ಕೆ ಆಗಮಿಸಿ ಆರತಿ ಬೆಳಗಿದರು. ಈ ಸಂದರ್ಭದಲ್ಲಿ ಪ್ರಧಾನಿಯವರನ್ನು ನೋಡಲು ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಪ್ರಧಾನಿಯವರಿಗೆ ಸ್ಥಳೀಯರು ಅದ್ದೂರಿ ಪ್ರೀತಿಪೂರ್ವಕ ಸ್ವಾಗತ ನೀಡಿದರು. ಅವರ ಕಡೆ ಕೈಬೀಸುತ್ತಾ ಪ್ರಧಾನಿ ಮುಗುಳ್ನಗುತ್ತಾ ಧನ್ಯವಾದ ಹೇಳಿದರು. 

ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಡಬಲ್ ಡೆಕ್ಕರ್ ದೋಣಿಯಲ್ಲಿ ಕಿಕ್ರಿಯಾ ಘಾಟ್ ನಿಂದ ಲಲಿತ್ ಘಾಟ್ ಗೆ ಪ್ರಯಾಣಿಸಿದರು. ಹೋಗುವಾಗ ಅಲ್ಲಿನ ಸೌಂದರ್ಯ ವೀಕ್ಷಿಸಿದರು.





Read more