
ಲಂಡನ್ (ಪಿಟಿಐ): ಬ್ರಿಟನ್ ಮತ್ತು ಭಾರತ ಎರಡೂ ಮಿತ್ರ ರಾಷ್ಟ್ರಗಳಾಗಿವೆ ಎಂದು ಮಂಗಳವಾರ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಬಣ್ಣಿಸಿದ್ದಾರೆ.
ಎರಡೂ ರಾಷ್ಟ್ರಗಳು 5 ಜಿ ಮತ್ತು ದೂರಸಂಪರ್ಕ ಸೇವೆಗಳಂತಹ ಪ್ರಮುಖ ಯೋಜನೆಗಳಲ್ಲಿ ಪಾಲುದಾರಿಕೆಯನ್ನು ಹೊಂದಿದ್ದು ಜನರ ಜೀವನದಲ್ಲಿ ಪರಿವರ್ತನೆ ಉಂಟು ಮಾಡಲು ಸಹಾಯಕವಾಗಿದೆ ಎಂದು ಹೇಳಿದರು.
2021ರ ಜಾಗತಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಬ್ರಿಟನ್ ಮತ್ತು ಭಾರತದ ಬಾಂಧವ್ಯ ಮುಂದಿನ ದಿನಗಳಲ್ಲಿ ಇನ್ನಷ್ಟು ಗಟ್ಟಿಗೊಳ್ಳಲಿದೆ ಎಂದರು.
‘ಭಾರತ ಮತ್ತು ಬ್ರಿಟನ್ ನಡುವೆ ಹೊಸ ಆವಿಷ್ಕಾರದ ಕೊಡುಕೊಳ್ಳುವಿಕೆಯ ಸಂಸ್ಕೃತಿ, ವಾಣಿಜ್ಯೋದ್ಯಮವನ್ನು ವಿಸ್ತರಿಸುವ ತುಡಿತದಿಂದ ಎರಡೂ ರಾಷ್ಟ್ರಗಳು ಮೈತ್ರಿ ಸಾಧಿಸಿವೆ’ ಎಂದು ಬೋರಿಸ್ ಹೇಳಿದರು.