Online Desk
ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಚರ್ಚೆಗಳು ಮುಂದುವರೆದಿದೆ. ಈ ನಡುವೆ ಕೊಹ್ಲಿ ಫಾರ್ಮ್ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ನೀಡಿರುವ ಹೇಳಿಕೆ ಇದೀಗ ನಗೆಪಾಟಲಿಗೀಡಾಗಿದೆ.
ಅಖ್ತರ್ ಅವರ ಪ್ರಕಾರ ವಿರಾಟ್ ಕೊಹ್ಲಿ ಮದುವೆಯಾದ ಬಳಿಕ ಅವರ ಆಟದ ಮೇಲೆ ಪರಿಣಾಮ ಬೀರಿದೆ. ಮದುವೆಯ ಒತ್ತಡವು ಅವರ ಆಟದ ಮೇಲೆ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಅಖ್ತರ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ನಾನು ವಿರಾಟ್ ಕೊಹ್ಲಿಯ ಸ್ಥಾನದಲ್ಲಿದ್ದರೆ ಮದುವೆಯಾಗುತ್ತಿರಲಿಲ್ಲ ಎಂದಿದ್ದಾರೆ.
ರಾವಲಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಮಾಜಿ ವೇಗಿ, ಕೊಹ್ಲಿ ಮದುವೆ ಆಗುವ ಬದಲು ತಮ್ಮ ಗಮನ ಎಲ್ಲವನ್ನೂ ಕ್ರಿಕೆಟ್ ಕಡೆಗೆ ಇಟ್ಟು ದೊಡ್ಡ ದೊಡ್ಡ ಶತಕಗಳನ್ನು ಬಾರಿಸಬೇಕಿತ್ತು ಎಂದಿದ್ದಾರೆ. ಅಂದಹಾಗೆ ವಿರಾಟ್ 2019ರ ಬಳಿಕ ಈವರೆಗೆ ಯಾವುದೇ ಶತಕ ಬಾರಿಸಿಲ್ಲ.
“ವಿರಾಟ್ ಕೊಹ್ಲಿ ಕಳೆದ 6-7 ವರ್ಷಗಳಿಂದ ಭಾರತ ತಂಡದ ಕ್ಯಾಪ್ಟನ್ ಆಗಿದ್ದಾರೆ. ಅಂದಹಾಗೆ ಅವರ ನಾಯಕತ್ವಕ್ಕೆ ನಾನೆಂದೂ ಬೆಂಬಲ ನೀಡಿದವನಲ್ಲ. ಆದರೆ, ಆತ ಕೇವಲ ಬ್ಯಾಟಿಂಗ್ ಕಡೆಗಷ್ಟೇ ಗಮನ ನೀಡಿ ಶತಕ ಮತ್ತು ದೊಡ್ಡ ಶತಕಗಳನ್ನು ಬಾರಿಸುವ ಕಡೆಗೆ ಗಮನ ನೀಡಬೇಕಿತ್ತು ಎಂಬುದಷ್ಟೇ ನನ್ನ ಅಭಿಪ್ರಾಯ,” ಎಂದು ದೈನಿಕ್ ಜಾಗರಣ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಯಾವುದೇ ಶತಕ ಬಾರಿಸಿಲ್ಲ. ತಮ್ಮ ಶ್ರೇಷ್ಠ ಲಯ ಕಂಡುಕೊಳ್ಳಲು ಪರದಾಟ ನಡೆಸುತ್ತಿರುವ ಕೊಹ್ಲಿ, ಈ ಸಲುವಾಗಿ ಕ್ಯಾಪ್ಟನ್ಸಿ ಹೊರೆ ಕಳೆದುಕೊಳ್ಳುವ ಪ್ರಯತ್ನ ಮಾಡಿ ಮೊದಲು ಆರ್‌ಸಿಬಿ ನಾಯಕತ್ವ ಮತ್ತು ನಂತರ ಭಾರತ ಟಿ20 ಕ್ರಿಕೆಟ್ ತಂಡದ ಜವಾಬ್ದಾರಿಯಿಂದ ಕೆಳಗಿಳಿದರು.
ಇದನ್ನೂ ಓದಿ: ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡ ವಿರಾಟ್ ಕೊಹ್ಲಿ ಪುತ್ರಿ ವಮಿಕಾ!
ಬಳಿಕ ಬಿಸಿಸಿಐ ನಿರ್ಧಾರದಂತೆ ಟೀಮ್ ಇಂಡಿಯಾ ಏಕದಿನ ಕ್ರಿಕೆಟ್ ತಂಡದ ನಾಯಕತ್ವ ಕಳೆದುಕೊಂಡ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿ ಸೋಲಿನ ನಂತರ ಟೆಸ್ಟ್ ತಂಡದ ನಾಯಕತ್ವಕ್ಕೂ ವಿದಾಯ ಹೇಳಿ ಶಾಕ್ ಕೊಟ್ಟರು.
ಕೊಹ್ಲಿ ಜಾಗದಲ್ಲಿ ನಾನಿದ್ದಿದ್ದರೆ ಖಂಡಿತಾ ಮದುವೆ ಆಗುತ್ತಿರಲಿಲ್ಲ. ರನ್ ಗಳಿಸುತ್ತಾ ಕ್ರಿಕೆಟ್‌ನ ಆನಂದಿಸುವ ಕಡೆಗಷ್ಟೇ ಗಮನ ನೀಡುತ್ತಿದ್ದೆ. ಕ್ರಿಕೆಟ್ ವೃತ್ತಿಬದುಕಿನ 10-12 ವರ್ಷ ಅತ್ಯಂತ ಪ್ರಮುಖವಾದದ್ದು. ಆ ಸಮಯ ಮತ್ತೆ ಸಿಗುವುದಿಲ್ಲ. ಮದುವೆ ಆಗುವುದು ತಪ್ಪು ಎಂದು ನಾನು ಇಲ್ಲಿ ಹೇಳುತ್ತಿಲ್ಲ. ಆದರೆ, ನೀವು ಭಾರತ ತಂಡದ ಪರ ಆಡುತ್ತಿದ್ದೀರಿ, ಆಟವನ್ನು ಆನಂದಿಸಲು ಮತ್ತಷ್ಟು ಸಮಯ ಕೊಡಬೇಕಿತ್ತು. ಕೊಹ್ಲಿ ಎಂದರೆ ಅಭಿಮಾನಿಗಳಲ್ಲಿ ಅಪಾರ ಪ್ರೀತಿ ಇದೆ. ಇದನ್ನು ಅವರು ಉಳಿಸಿಕೊಳ್ಳುವ ಅಗತ್ಯವಿದೆ,” ಎಂದಿದ್ದಾರೆ.
Read more…
[wpas_products keywords=”deal of the day sports items”]