Karnataka news paper

ಬೆಂಗಳೂರಿಗಾಗಿ ಪೈಪೋಟಿ; ಆರ್ ಅಶೋಕ್ v/s ಸೋಮಣ್ಣ ಫೈಟ್ ತಪ್ಪಿಸುವಲ್ಲಿ ಬಸವರಾಜ ಬೊಮ್ಮಾಯಿ ಯಶಸ್ವಿ!


ಹೈಲೈಟ್ಸ್‌:

  • ಬೆಂಗಳೂರು ಉಸ್ತುವಾರಿ ಸ್ಥಾನಕ್ಕಾಗಿ ಪೈಪೋಟಿ
  • ಆರ್. ಅಶೋಕ್ ಸೋಮಣ್ಣ ಫೈಟ್ ತಪ್ಪಿಸುವಲ್ಲಿ ಬೊಮ್ಮಾಯಿ ಯಶಸ್ವಿ!
  • ಬೆಂಗಳೂರು ಉಸ್ತುವಾರಿ ಸ್ಥಾನ ಸಿಎಂ ಬೊಮ್ಮಾಯಿ ಕೈಯಲ್ಲಿ

ಬೆಂಗಳೂರು: ಬೆಂಗಳೂರು ಉಸ್ತುವಾರಿ ಪಟ್ಟಕ್ಕಾಗಿ ಸಚಿವರಾದ ಆರ್.‌ಅಶೋಕ್ ಹಾಗೂ ವಿ. ಸೋಮಣ್ಣ ನಡುವಿನ ಫೈಟ್ ಗೆ ಸಿಎಂ ಬಸವರಾಜ ಬೊಮ್ಮಾಯಿ ಜಾಣ್ಮೆಯಿಂದ ಪೂರ್ಣವಿರಾಮ ಹಾಕಿದ್ದಾರೆ. ನನಗೇ ಬೆಂಗಳೂರು ಪಟ್ಟ ನೀಡಬೇಕು ಎಂದು ಸಿಎಂ ಮುಂದೆ ಇಬ್ಬರು ಸಚಿವರು ಒತ್ತಡ ಹೇರುತ್ತಿದ್ದರು. ಇದಕ್ಕಾಗಿ ಬೆಂಗಳೂರು ಶಾಸಕರ ಬೆಂಬಲವನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಸಿಎಂ ಇಬ್ಬರಿಗೂ ಬೆಂಗಳೂರು ಉಸ್ತುವಾರಿ ನೀಡದೆ ಈ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ.

ಸಚಿವ ಸೋಮಣ್ಣಗೆ ಚಾಮರಾಜನಗರ ನಗರ ಉಸ್ತುವಾರಿ ನೀಡಿದರೆ ಕಂದಾಯ ಸಚಿವ ಆರ್.‌ಅಶೋಕ್ ಗೆ ಸದ್ಯ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡದೆ ಇರುವುದು ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಮತ್ತೋರ್ವ ಸಚಿವ ಡಾ.‌ಅಶ್ವತ್ಥ ನಾರಾಯಣ ಕೂಡಾ ಬೆಂಗಳೂರು ಉಸ್ತುವಾರಿ ಪಟ್ಟಕ್ಕೆ ಪ್ರಯತ್ನ ಪಡುತ್ತಿದ್ದರು.ಆದರೆ ಅವರು ಇತ್ತೀಚಿನ ದಿನಗಳಲ್ಲಿ ರಾಮನಗರದಲ್ಲಿ ಪಕ್ಷ ಬಲವರ್ಧನೆಗೆ ಹೆಚ್ಚಿನ ಗಮನ ನೀಡುತ್ತಿರುವುದರಿಂದ ಅವರಿಗೆ ರಾಮನಗರ ಉಸ್ತುವಾರಿ ಸ್ಥಾನ ನೀಡಲಾಗಿದೆ.

ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ, ಬೊಮ್ಮಾಯಿ ಕೈಯಲ್ಲೇ ಬೆಂಗಳೂರು! ಯಾರಿಗೆ ಯಾವ ಜಿಲ್ಲೆ?

ಅಶೋಕ್ ಗೆ ಸಿಕ್ಕಿಲ್ಲ ಉಸ್ತುವಾರಿ!

ಸದ್ಯ ಕಂದಾಯ ಸಚಿವ ಆರ್ ಅಶೋಕ್ ಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಿಲ್ಲ. ಆದರೆ ಸಿಎಂ ಈ ನಡೆಯ ಹಿಂದಿನ ಉದ್ದೇಶ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಬೆಂಗಳೂರು ನಗರದ ಉಸ್ತುವಾರಿ ಸಿಎಂ ಬೊಮ್ಮಾಯಿ ಅವರ ಕೈಯಲ್ಲಿದೆ. ಆದರೆ ಸೋಮಣ್ಣ ಹಾಗೂ ಅಶೋಕ್ ನಡುವಿನ ಬಿಕ್ಕಟ್ಟು ಶಮನ ವಾದ ನಂತರ ಬೆಂಗಳೂರು ಉಸ್ತುವಾರಿಯನ್ನು ಸಿಎಂ ಅವರು ಅಶೋಕ್ ಗೆ ಬಿಟ್ಟುಕೊಡುತ್ತಾರಾ? ಎಂಬುವುದು ಸದ್ಯಕ್ಕೆ ಕುತೂಹಲ ಸೃಷ್ಟಿಸಿದೆ.

ಉಸ್ತುವಾರಿ ಪಟ್ಟಿ ಹೀಗಿದೆ

ಬಸವರಾಜ ಬೊಮ್ಮಾಯಿ- ಬೆಂಗಳೂರು ನಗರ

ಗೋವಿಂದ ಎಂ ಕಾರಜೋಳ- ಬೆಳಗಾವಿ

ಕೆ.ಎಸ್‌. ಈಶ್ವರಪ್ಪ- ಚಿಕ್ಕಮಗಳೂರು

ಬಿ. ಶ್ರೀರಾಮುಲು -ಬಳ್ಳಾರಿ

ವಿ. ಸೋಮಣ್ಣ -ಚಾಮರಾಜನಗರ

ಉಮೇಶ್‌ ವಿ -ಕತ್ತಿ ವಿಜಯಪುರ

ಎಸ್‌. ಅಂಗಾರ- ಉಡುಪಿ

ಆರಗ ಜ್ಞಾನೇಂದ್ರ- ತುಮಕೂರು

ಸಿ.ಎನ್‌. ಅಶ್ವತ್ಥ ನಾರಾಯಣ- ರಾಮನಗರ

ಸಿ.ಸಿ. ಪಾಟೀಲ್‌- ಬಾಗಲಕೋಟೆ

ಆನಂದ್‌ ಸಿಂಗ್‌ – ಕೊಪ್ಪಳ

ಕೋಟಾ ಶ್ರೀನಿವಾಸ ಪೂಜಾರಿ- ಉತ್ತರ ಕನ್ನಡ

ಪ್ರಭು ಚೌವ್ಹಾಣ -ಯಾದಗಿರಿ

ಮುರುಗೇಶ್‌ ರುದ್ರಪ್ಪ ನಿರಾಣಿ- ಕಲಬುರಗಿ

ಅರಬೈಲ್‌ ಶಿವರಾಮ ಹೆಬ್ಬಾರ್‌- ಹಾವೇರಿ

ಎಸ್‌.ಟಿ. ಸೋಮಶೇಖರ್‌- ಮೈಸೂರು

ಬಿ.ಸಿ. ಪಾಟೀಲ್‌ ಚಿತ್ರದುರ್ಗ & ಗದಗ

ಬೈರತಿ ಬಸವರಾಜ್‌ ದಾವಣಗೆರೆ

ಡಾ. ಕೆ. ಸುಧಾಕರ್‌ ಬೆಂಗಳೂರು ಗ್ರಾಮಾಂತರ

ಕೆ. ಗೋಪಾಲಯ್ಯ ಮಂಡ್ಯ & ಹಾಸನ

ಶಶಿಕಲಾ ಜೊಲ್ಲೆ – ವಿಜಯನಗರ

ಎಂಟಿಬಿ ನಾಗರಾಜ್‌- ಚಿಕ್ಕಬಳ್ಳಾಪುರ

ಕೆ.ಸಿ. ನಾರಾಯಣಗೌಡ -ಶಿವಮೊಗ್ಗ

ಬಿ.ಸಿ. ನಾಗೇಶ್‌ – ಕೊಡಗು

ವಿ. ಸುನೀಲ್‌ ಕುಮಾರ್‌ – ದಕ್ಷಿಣ ಕನ್ನಡ

ಹಾಲಪ್ಪ ಆಚಾರ್‌- ಧಾರವಾಡ

ಶಂಕರ್‌ ಬಿ. ಪಾಟೀಲ್‌ ಮುನೇನಕೊಪ್ಪ-ರಾಯಚೂರು & ಬೀದರ್‌

ಮುನಿರತ್ನ- ಕೋಲಾರ



Read more

[wpas_products keywords=”deal of the day sale today offer all”]