ಹೈಲೈಟ್ಸ್:
- ಕೋವಿಡ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವೇತನದಾರರ ನಿರೀಕ್ಷೆಗಳೇನು?
- ಸಿಗಬಹುದೇ ರ್ಕ್ ಫ್ರಂ ಹೋಮ್ ವಿನಾಯಿತಿ? ಹೆಚ್ಚಳವಾಗುತ್ತಾ ಸ್ಟಾಂಡರ್ಡ್ ಡಿಡಕ್ಷನ್ ?
- ಬಜೆಟ್‌ಗೆ ಕ್ಷಣಗಣನೆ ಆರಂಭವಾಗುತ್ತಿರುವಂತೆ ವೇತನದಾರರಲ್ಲಿ ಹಲವಾರು ನಿರೀಕ್ಷೆ
ಎರಡು ವರ್ಷಗಳಿಂದ ಕೋವಿಡ್ ಉಂಟು ಮಾಡಿರುವ ಆರ್ಥಿಕ ನಷ್ಟ, ಕೆಲಸ ನಷ್ಟದಿಂದಾಗಿ ಹಲವು ರಿಯಾಯಿತಿಗಳನ್ನು ಜನ ನಿರೀಕ್ಷೆ ಮಾಡುತ್ತಿದ್ದಾರೆ. ಅದರಲ್ಲೂ ಮಾಸಿಕ ವೇತನ ಪಡೆಯುವರು (salaried people) ಈ ಬಾರಿಯ ಬಜೆಟ್‌ನಲ್ಲಿ ಭಾರೀ ಭರವಸೆ ಇಟ್ಟುಕೊಂಡಿದ್ದಾರೆ. ವೇತನ ಕಡಿತದಿಂದ ಉಂಟಾಗಿರುವ ಆರ್ಥಿಕ ನಷ್ಟ ಸರಿದೂಗಿಸಲು ಈ ಬಾರಿಯ ಬಜೆಟ್‌ನಲ್ಲಿ ಏನಾದರೂ ರಿಯಾಯಿತಿ ಸಿಗಬಹುದು ಎಂದು ಎದುರು ನೋಡುತ್ತಿದ್ದಾರೆ.
ಹಾಗಾದ್ರೆ ಈ ಬಜೆಟ್‌ನಲ್ಲಿ ಮಾಸಿಕ ವೇತನ ಪಡೆಯುವವರ ನಿರೀಕ್ಷೆಗಳೇನು? ಎನ್ನುವುದರ ಸಂಕ್ಷಿಪ್ತ ವಿವರ ಇಲ್ಲಿದೆ.
1. ತೆರಿಗೆ ದರ ಇಳಿಕೆ
ತೆರಿಗೆ ಇಳಿಸುವುದೆಂದರೆ ಯಾರಿಗೆ ಖುಷಿ ಇಲ್ಲ ಹೇಳಿ. ಬಡ ಹಾಗೂ ಮಾಧ್ಯಮ ವರ್ಗದ ಜನರೇ ಹೆಚ್ಚಿರುವ ನಮ್ಮ ದೇಶದಲ್ಲಿ ತೆರಿಗೆ ದರ ಕಡಿಮೆ ಮಾಡಿದರೆ ಎಲ್ಲರಿಗೂ ಖುಷಿಯ ವಿಚಾರವೇ. ಪ್ರತೀ ವರ್ಷದ ನಿರೀಕ್ಷೆಯಂತೆ ಈ ಬಾರಿ ಕೂಡ ವೇತನದಾರರು ತೆರಿಗೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ.
ನೇರ ಆದಾಯದ ಮೇಲಿನ ತೆರಿಗೆ ಇಳಿಕೆಯಿಂದಾಗಿ ಜನರ ಕೈಯಲ್ಲಿ ಹೆಚ್ಚಿನ ಹಣ ಉಳಿತಾಯವಾಗಲಿದೆ. ಸಹಜವಾಗಿಯೇ ಜನ ಹೆಚ್ಚು ಖರ್ಚು ಮಾಡುತ್ತಾರೆ. ಹಣದ ಹರಿವು ಹೆಚ್ಚಳವಾಗುತ್ತದೆ. ಹೀಗಾದರೆ ಪರೋಕ್ಷ ತೆರಿಗೆಯಿಂದ ಸರ್ಕಾರದ ಬೊಕ್ಕಸ ತುಂಬಲಿದೆ.
ಇದರ ಜತೆಗೆ ಹಳೆಯ ತೆರಿಗೆ ಪದ್ಧತಿಯಲ್ಲಿ ಎಲ್‌ಟಿಎ, ಎಚ್‌ಆರ್‌ಎ, 80ಸಿ ಹಾಗೂ 80ಡಿ ಅಡಿ ವಿವಿಧ ತೆರಿಗೆ ವಿನಾಯಿತಿಗಳು ಜತೆಗೆ ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ ಕೂಡ ಇತ್ತು ಆದರೆ ಹೊಸ ತೆರಿಗೆ ಪದ್ಧತಿಯಲ್ಲಿ ಈ ವಿನಾಯಿತಿಗಳು ಇಲ್ಲ. ಈ ಬಾರಿಯ ಬಜೆಟ್‌ನಲ್ಲಿ ಹಲವು ವಿನಾಯಿತಿಯನ್ನು ವೇತನದಾರರು ನಿರೀಕ್ಷೆ ಮಾಡುತ್ತಿದ್ದಾರೆ.
ಅಲ್ಲದೇ ಹೊಸ ಹಾಗೂ ಹಳೇ ತೆರಿಗೆ ಪದ್ಧತಿಯಲ್ಲಿ ಅತೀ ಹೆಚ್ಚು ತೆರಿಗೆ ದರ ಶೇ.30 ರಷ್ಟೇ ಇದೆ. ಇದರ ಜತೆಗೆ ಸರ್ಚಾರ್ಚ್, ಶಿಕ್ಷಣ ಸೆಸ್ ಎಲ್ಲಾ ಸೇರಿಸಿದರೆ ಒಟ್ಟು ತೆರಿಗೆ ಶೇ.42 ರಷ್ಟಾಗುತ್ತದೆ. ಇದು ವೇತನದಾರರ ಜೇಬಿಗೆ ಕತ್ತರಿ ಹಾಕುತ್ತಿದೆ. ಹೀಗಾಗಿ ಹಲವು ಸೆಸ್ ಹಾಗೂ ವಿವಿಧ ಸೆಕ್ಷನ್‌ಗಳಡಿ ಹೆಚ್ಚಿನ ವಿನಾಯಿತಿಯನ್ನು ವೇತನದಾರರು ನಿರೀಕ್ಷೆ ಮಾಡುತ್ತಿದ್ದಾರೆ.
2. ಸ್ಟಾಂಡರ್ಡ್ ಡಿಡಕ್ಷನ್ ಹೆಚ್ಚಳ
ಹಳೇಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡವರಿಗೆ ಸದ್ಯ ₹ 50,000 ಸ್ಯಾಂಡರ್ಡ್ ಡಿಡಕ್ಷನ್ ಇದೆ. ಈಗಾಗಲೇ ಕೋವಿಡ್‌ನಿಂದಾಗಿ ವೇತನ ಕಡಿತ, ಆರೋಗ್ಯ ಖರ್ಚಿನಿಂದಾಗಿ ವೇತನದಾರರ ಉಳಿತಾಯ ಕಡಿಮೆಯಾಗಿದೆ. ಹೀಗಾಗಿ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತದಲ್ಲಿ ಹೆಚ್ಚಳವಾಗುವ ನಿರೀಕ್ಷೆ ವೇತನದಾರರದ್ದು.
ಇದರ ಜತೆಗೆ ಕೆಲ ವರ್ಷಗಳಿಂದ ಸಿಬಿಡಿಟಿ ವಸೂಲಿ ಮಾಡುತ್ತಿರುವ ನೇರ ತೆರಿಗೆ ಶೇ.60 ರಷ್ಟು ಹೆಚ್ಚಳ ಆಗಿದೆ. ಹೀಗಾಗಿ ಸ್ಟಾಂಡರ್ಡ್ ಡಿಡಕ್ಷನ್ ಹೆಚ್ಚಳವಾಗುವ ನಿರೀಕ್ಷೆಯಲ್ಲಿ ವೇತನದಾರರು ಇದ್ದಾರೆ.
3. ಪಿಎಫ್ ಮೇಲಿನ ಬಡ್ಡಿಗೆ ತೆರಿಗೆ ವಿಧಿಸುವುದರ ಬಗ್ಗೆ ಸ್ಪಷ್ಟತೆ
2021-22ರ ಬಜೆಟ್‌ನಲ್ಲಿ ವಾರ್ಷಿಕ ₹2.5 ಲಕ್ಷಕ್ಕಿಂತ ಹೆಚ್ಚು ಪಿಎಫ್ ಮೇಲೆ ಬಡ್ಡಿ ಲಭ್ಯವಾಗುತ್ತದ್ದರೇ, ಅದರೆ ಮೇಲೆ ತೆರಿಗೆ ವಿಧಿಸುವ ನಿಯಮ ತರಲಾಗಿದೆ. ಈ ಬಜೆಟ್‌ನಲ್ಲಿ ಆ ಮೊತ್ತವನ್ನು ಐದು ಲಕ್ಷಕ್ಕೆ ಏರಿಕೆ ಮಾಡಬೇಕು ಎನ್ನುವುದು ವೇತನದಾರರ ನಿರೀಕ್ಷೆ.
ಇದರ ಜತೆಗೆ ಬಡ್ಡಿ ಮೂಲದಲ್ಲಿ ವಿಧಿಸಲಾಗುತ್ತದೆಯೋ ಅಥವಾ ಪಿಎಫ್ ಹಿಂಪಡೆಯುವಾಗ ವಿಧಿಸಲಾಗುತ್ತದೆಯೇ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಈ ಬಜೆಟ್‌ನಲ್ಲಾದರೂ ಸ್ಪಷ್ಟೀಕರಣ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.
4. ವರ್ಕ್ ಫ್ರಂ ಹೋಮ್ ವಿನಾಯಿತಿ
ಮಹಾಮಾರಿ ಕೋವಿಡ್ ಇಡೀ ಕೆಲಸದ ಸಂಸ್ಕೃತಿಯನ್ನೇ ಬದಲಾಯಿಸಿ ಬಟ್ಟಿದೆ. ಕಚೇರಿಯಲ್ಲಿ ಮಾತ್ರ ನಡೆಯುತ್ತಿದ್ದ ಕೆಲಸಗಳು ಈಗ ಮನೆಯಿಂದಲೇ ಸಾಗುತ್ತಿವೆ. ಹಲವು ಕಂಪನಿಗಳು ಶಾಶ್ವತವಾಗಿ ತನ್ನ ನೌಕರರಿಗೆ ವರ್ಕ್ ಫ್ರಂ ಹೋಮ್ ಸೌಲಭ್ಯ ನೀಡಿದೆ. ಹೀಗಾಗಿ ಈ ಬಾರಿಯ ಬಜೆಟ್‌ನಲ್ಲಿ ವರ್ಕ್ ಫ್ರಂ ಹೋಮ್ ವಿನಾಯಿತಿಯ ನಿರೀಕ್ಷೆಯಲ್ಲಿ ವೇತನದಾರರು ಇದ್ದಾರೆ.
ವರ್ಕ್ ಫ್ರಂ ಹೋಮ್‌ನಿಂದಾಗಿ ಇಂಟರ್ನೆಟ್ ಚಾರ್ಚ್, ವಿದ್ಯುತ್ ಬಿಲ್, ಪೀಠೋಪಕರಣದ ಖರ್ಚು ವೇತನದಾರರ ಕಿಸೆಯಿಂದೇ ಹೋಗುತ್ತಿದೆ. ಹೀಗಾಗಿ ವರ್ಕ್ ಫ್ರಂ ಹೋಮ್ ವಿನಾಯಿತಿಯನ್ನು ವೇತನದಾರರು ಎದುರು ನೋಡುತ್ತಿದ್ದಾರೆ.
Read more
[wpas_products keywords=”deal of the day sale today offer all”]