Karnataka news paper

ರಾಷ್ಟ್ರಗೀತೆ ಹಾಡುವಾಗ ‘ಚ್ಯೂಯಿಂಗ್ ಗಮ್’ ಜಗಿದು ಟ್ರೋಲ್ ಗೆ ಗುರಿಯಾದ ಕೊಹ್ಲಿ


Online Desk

ಕೇಪ್ ಟೌನ್: ಇಲ್ಲಿ ನಡೆದ ದಕ್ಷಿಣ ಆಫ್ರಿಕಾ- ಭಾರತ ನಡುವಣ ಮೂರನೇ ಏಕದಿನ ಪಂದ್ಯದ ಆರಂಭಕ್ಕೂ ಮುನ್ನ ದೇಶದ ರಾಷ್ಟ್ರೀಗಿತೆ ಹಾಡುವಾಗ ಚ್ಯೂಯಿಂಗ್ ಗಮ್ ಜಿಗಿಯುತ್ತಾ ನಿಂತಿದ್ದ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ಆಹಾರವಾಗಿದ್ದಾರೆ.

ಈ ವಿಡಿಯೋವನ್ನು ಟ್ರೋಲ್ ಮಾಡಿರುವ ನೆಟ್ಟಿಗರು, ಕೊಹ್ಲಿಗೆ ದೇಶದ ಬಗ್ಗೆ ಗೌರವವಿಲ್ಲ, ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ದುವರ್ತನೆ ತೋರಿದ್ದಾರೆ ಎಂದು ಟೀಕಿಸಿದ್ದಾರೆ. ಮತ್ತೆ ಕೆಲವರು ರಾಷ್ಟ್ರಗೀತೆ ವೇಳೆ ‘ಚ್ಯೂಯಿಂಗ್ ಗಮ್’ ಜಿಗಿಯುತ್ತಾ ನಿಂತಿರುವ ಈ ವ್ಯಕ್ತಿ ನಮ್ಮ ದೇಶದ ರಾಯಭಾರಿ ಎಂದು ಹೇಳಿ ಕಾಲೆಳೆದಿದ್ದಾರೆ. 

ಕೊಹ್ಲಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. 





Read more…

[wpas_products keywords=”deal of the day sports items”]