The New Indian Express
ಷೇರು ಮಾರುಕಟ್ಟೆ ಕುಸಿತದಲ್ಲಿ ಪೇಟಿಯೆಂ ಬಳಿಕ ಈಗ ಜೊಮ್ಯಾಟೋ ಸರದಿ, ಜ.24 ರಂದು ಆರಂಭಗೊಂಡ ಷೇರು ಮಾರುಕಟ್ಟೆಯಲ್ಲಿ ಜೊಮ್ಯಾಟೋ ಷೇರುಗಳು ಶೇ.19 ರಷ್ಟು ಕುಸಿತ ಕಂಡಿದ್ದು, ಬಿಎಸ್ಇಯಲ್ಲಿ 92.25 ರೂಪಾಯಿಗಳಿಗೆ ಕುಸಿದಿದೆ.
2021 ರ ಜುಲೈ ನಲ್ಲಿ ಬಂಪರ್ ಲಿಸ್ಟಿಂಗ್ ನ ಬಳಿಕ ಜೊಮ್ಯಾಟೋ ಷೇರುಗಳು ಮೊದಲ ಬಾರಿಗೆ 100 ರೂಪಾಯಿಗಳಿಗಿಂತಲೂ ಕಡಿಮೆ ಮೌಲ್ಯದ ವಹಿವಾಟು ನಡೆಸುತ್ತಿದೆ.
ಇದನ್ನೂ ಓದಿ: ಯಾವ ಸಂಸ್ಥೆ ಷೇರು ಕೊಳ್ಳಲಿ? ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಇಲ್ಲಿದೆ ಉತ್ತರ!
ಇದಕ್ಕೂ ಮುನ್ನ ಶುಕ್ರವಾರದಂದು ಜೊಮ್ಯಾಟೋ ಮೌಲ್ಯ ಶೇ.9 ರಷ್ಟು ಕುಸಿತ ಕಂಡಿತ್ತು. ಇನ್ನು ಲಾಭದಲ್ಲಿರುವ ಕೆಲವೇ ಕೆಲವು ಇಂಟರ್ ನೆಟ್ ಕಂಪನಿಗಳ ಪೈಕಿ ಒಂದಾಗಿರುವ ನೈಕಾ ಸಹ ಸೆಲ್ಲಿಂಗ್ ಪ್ರೆಷರ್ ನಲ್ಲಿದ್ದು, ಸೋಮವಾರದ ಪ್ರಾರಂಭದ ಒಂದು ಗಂಟೆಗಳು ಷೇರುಗಳ ಮೌಲ್ಯ ಶೇ.10 ರಷ್ಟು ಕುಸಿದಿದ್ದವು. ಲಿಸ್ಟಿಂಗ್ ಪ್ರೈಸ್ 2,206 ರೂಪಾಯಿಗಳಷ್ಟಿದ್ದು ಸೋಮವಾರ ಇದರ ಮೌಲ್ಯ 1,771 ಕ್ಕೆ ಕುಸಿದಿದೆ.
Read more…
[wpas_products keywords=”deal of the day”]