ಎನ್‌ಸಿಸಿಯಿಂದ 19 ಹಾಗೂ ಎನ್‌ಎಸ್‌ಎಸ್‌ನಿಂದ ಇಬ್ಬರು ವಿದ್ಯಾರ್ಥಿನಿಯರು ಸೇರಿ
ಒಟ್ಟು 21 ಮಂದಿ ಹೊಸದಿಲ್ಲಿಯ ಕಾರ್ಯಪ್ಪ ಮೈದಾನ ಹಾಗೂ ಪರೇಡ್ ನಡೆಯುವ ರಾಜಪಥ್‌ನಲ್ಲಿ ಪೂರ್ವ ಸಿದ್ಧತೆ ಕೈಗೊಂಡಿದ್ದಾರೆ.
ಎನ್‌ಸಿಸಿ ವಿದ್ಯಾರ್ಥಿಗಳು 30 ದಿನಗಳಿಂದ ಹಾಗೂ ಎನ್‌ಎಸ್‌ಎಸ್‌ನ ಇಬ್ಬರು ಯುವತಿಯರು 24 ದಿನಗಳಿಂದ ಹೊಸದಿಲ್ಲಿಯಲ್ಲಿ ಪರೇಡ್‌ನ ಪೂರ್ವ ತಯಾರಿಯಲ್ಲಿದ್ದಾರೆ.
”ಅದರಲ್ಲೂ ಗಣರಾಜ್ಯೋತ್ಸವ ದಿನದಂದು ನಡೆಯುವ ಪರೇಡ್‌ನಂತೆಯೇ ಸಕಲ ತಯಾರಿಯೊಂದಿಗೆ ಪ್ರತಿಯೊಬ್ಬರೂ ರಾಜಪಥ್‌ನಲ್ಲಿ ಪಾಲ್ಗೊಂಡಿದ್ದರು. ಅಂತಿಮವಾಗಿ ಜ. 26ರಂದು ಪರೇಡ್‌ಗೆ ಸಕಲ ಸಿದ್ಧತೆ ಕೈಗೊಳ್ಳಬೇಕಿರುವುದರಿಂದ ಕೊನೆಯ ಎರಡು ದಿನ ಈ ಪಥದಲ್ಲಿ ತಾಲೀಮಿಗೆ ಅವಕಾಶ ನೀಡುವುದಿಲ್ಲ’ ಎಂದು ರಾಜ್ಯದ ಎನ್‌ಎಸ್‌ಎಸ್ ತಂಡವನ್ನು ಮುನ್ನಡೆಸುತ್ತಿರುವ ಡಾ.ರಾಘವೇಂದ್ರ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
ಮೈಸೂರು ಭಾಗದಿಂದ ಯಾರು ಯಾರು?
ಎನ್‌ಸಿಸಿ: ಕೆಡೆಟ್‌ಗಳಲ್ಲಿ ರಜತ್ ಸಿಂಗ್ ಆರ್. (ಜೆಎಸ್‌ಎಸ್ ಪಾಲಿಟೆಕ್ನಿಕ್), ಅನಿರುದ್ಧ್ ಕೆ.ಆರ್ (ಯುವರಾಜ ಕಾಲೇಜು), ಮಿಥುನ್ ಆರ್.,ಸುಚಿತ್ರ ಎಲ್, ಪ್ರಿಯಾ ಎಸ್ (ಶಾರದಾ ವಿಲಾಸ ಕಾಲೇಜು), ಸುವರ್ಣ ಗೌಡ (ಮಹಾರಾಣಿ ಕಲಾ ಕಾಲೇಜು), ಪ್ರಮೀಳಾ ಕುನರ್ವ (ಸೇಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜು), ತನ್ಮಯಿ ಎಚ್.ವಿ.(ಮಹಾರಾಜ ಕಾಲೇಜು), ಪ್ರಜ್ವಲ್ (ವಿದ್ಯಾವರ್ಧಕ ಕಾಲೇಜು), ಚೈತ್ರಾ ಎಸ್, ಪ್ರಜ್ವಲ್ ಎಂ (ಜೆಎಸ್‌ಎಸ್ ವಿಜ್ಞಾನ, ವಾಣಿಜ್ಯ ಮತ್ತು ಕಲಾ ಕಾಲೇಜು), ದೀಕ್ಷಾ (ಜೆಎಸ್‌ಎಸ್ ಮಹಿಳಾ ಕಾಲೇಜು), ದರ್ಶನ್ ಎಚ್.ಎಂ.ಪವನ್ ವಿ, ಚರಣ್ ಬಸವರಾಜ್ (ಡಿ.ಬನುಮಯ್ಯ ಕಾಲೇಜು) ರೋಶಿನಿ ಮರಿಯಮ್ (ಸರಕಾರಿ ಸಿಪಿಸಿ ಪಾಲಿಟೆಕ್ನಿಕ್), ಸಿದ್ದರಾಜು (ಭಾರತಿ ಕಾಲೇಜು, ಕೆ.ಎಂ.ದೊಡ್ಡಿ, ಮಂಡ್ಯ), ಪೂಜಾ ವಿ ಮತ್ತು ಲೇಖನ ಎಸ್. (ಪಿಇಎಸ್ ಕಾಲೇಜು , ಮಂಡ್ಯ).
ಎನ್‌ಎಸ್‌ಎಸ್: ಹಾಸನ ಎವಿಕೆ ಕಾಲೇಜಿನ ತನುಶ್ರೀ ಹಾಗೂ ಮೈಸೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸುಷ್ಮಿತಾ ಆಯ್ಕೆಯಾಗಿದ್ದು, ಇವರಿಬ್ಬರು ಬಿಎಸ್ಸಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಪ್ರತಿ ವರ್ಷ ಹೊಸ ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಶಿಬಿರದಲ್ಲಿ ತಮ್ಮ ರಾಜ್ಯಗಳನ್ನು ಪ್ರತಿನಿಧಿಸಲು ದೇಶದ ಎಲ್ಲಾ 17 ನಿರ್ದೇಶನಾಲಯಗಳಿಂದ ಎನ್‌ಸಿಸಿ ಕೆಡೆಟ್‌ಗಳನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಡ್ರಿಲ್, ಸಾಂಸ್ಕೃತಿಕ ಕಾರ್ಯಕ್ರಮಗಳು, ಧ್ವಜ ವಂದನೆ, ಅತ್ಯುತ್ತಮ ಕೆಡೆಟ್ ಮತ್ತಿತರ ವಿಭಾಗ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಈ ವರ್ಷ ಕೋವಿಡ್-19ನಿಂದಾಗಿ ಗಣರಾಜ್ಯೋತ್ಸವ ಶಿಬಿರದಲ್ಲಿ ಭಾಗವಹಿಸುವ ಕೆಡೆಟ್‌ಗಳು ಮತ್ತು ವೀಕ್ಷಕರ ಸಂಖ್ಯೆಯನ್ನೂ ಕಡಿತಗೊಳಿಸಲಾಗಿದೆ.
Read more
[wpas_products keywords=”deal of the day sale today offer all”]