Karnataka news paper

‘ಒನ್ ಕಟ್ ಟು ಕಟ್’ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಫೆ.3ಕ್ಕೆ ಬಿಡುಗಡೆ


The New Indian Express

ವಂಶೀಧರ ಭೋಗರಾಜ್ ನಿರ್ದೇಶನದ ಡ್ಯಾನಿಶ್ ಸೇಠ್ ಅಭಿನಯದ ಪಿಆರ್ ಕೆ ಪ್ರೊಡಕ್ಷನ್ ಹೌಸ್ ನ ಒನ್ ಕಟ್ ಟು ಕಟ್ ಹಾಸ್ಯಪ್ರಧಾನ ಚಿತ್ರ ಫೆಬ್ರವರಿ 3ರಂದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಲಿದೆ.

ಪುನೀತ್ ರಾಜ್ ಕುಮಾರ್ ಅವರು ಆರಂಭಿಸಿದ್ದ ಈಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನಡೆಸಿಕೊಂಡು ಹೋಗುತ್ತಿರುವ ಪಿಆರ್ ಕೆ ಪ್ರೊಡಕ್ಷನ್ ಹೌಸ್ ಸಂಸ್ಥೆಯ ನಿರ್ಮಾಣದ ಮೂರು ಚಿತ್ರಗಳು ತನ್ನ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಅಮೆಜಾನ್ ಪ್ರೈಮ್ ಈ ಹಿಂದೆ ಪ್ರಕಟಿಸಿತ್ತು.

ಅಲ್ಲದೆ ದಿವಂಗತ ಪುನೀತ್ ಗೌರವಾರ್ಥ ಅವರು ನಟಿಸಿರುವ 5 ಚಿತ್ರಗಳನ್ನು ಫೆಬ್ರವರಿ ತಿಂಗಳಿನಲ್ಲಿ ಪ್ರೇಕ್ಷಕರಿಗೆ ಉಚಿತವಾಗಿ ತೋರಿಸಲಾಗುವುದು ಎಂದು ಕೂಡ ಪ್ರಕಟಿಸಿದೆ. 

ಇದನ್ನೂ ಓದಿ: ಪುನೀತ್ ಅಭಿನಯದ ಚಿತ್ರಗಳು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಫೆ.1ರಿಂದ ಒಂದು ತಿಂಗಳು ಉಚಿತವಾಗಿ ಲಭ್ಯ!

ಒನ್ ಕಟ್ ಟು ಕಟ್ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ವಿನೀತ್ ಬೀಪ್ ಕುಮಾರ್, ಸಂಪತ್ ಮೈತ್ರೇಯ, ಸಹಿತಾನಂದ ಮೊದಲಾದವರು ಕೂಡ ನಟಿಸಿದ್ದಾರೆ. 





Read more…

[wpas_products keywords=”party wear dress for women stylish indian”]