Karnataka news paper

ಕೇರಳ: ರಿಕ್ಷಾದಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ; ಪೊಲೀಸರಿಗೆ ಸಾರ್ವಜನಿಕರ ಸಾಥ್


Source : The New Indian Express

ಕೊಚ್ಚಿ: ರಿಕ್ಷಾದಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯೋರ್ವನನ್ನು ಅಬಕಾರಿ ಅಧಿಕಾರಿಗಳು ಕೇರಳದ ಚಿರಕ್ಕಾಡು ಎಂಬಲ್ಲಿ ಬಂಧಿಸಿದ್ದಾರೆ. 

ಇದನ್ನೂ ಓದಿ: ಡ್ರಗ್ಸ್ ಮಾರಾಟಕ್ಕೆ ಹೊಸ ಮಾರ್ಗ: ಪೆಡ್ಲರ್ ಗಳಿಂದ ಸಾರ್ವಜನಿಕ ಪ್ರದೇಶಗಳ ಬಳಕೆ!

ಖಚಿತ ಸುಳಿವಿನ ಆಧಾರದ ಮೇಲೆ ಅಧಿಕಾರಿಗಳು ಧಾಳಿ ನಡೆಸಿದ್ದರು. ಆರೋಪಿ ಅಭಿಲಾಶ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. 

ಇದನ್ನೂ ಓದಿ: 17 ಮಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಆಹಾರದಲ್ಲಿ ಮತ್ತು ಬರುವ ಔಷಧ ನೀಡಿ ಲೈಂಗಿಕ ಕಿರುಕುಳ

ಈ ಹಿಂದೆ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಮದ್ಯ ಹಾಗೂ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದರೆ ಪೊಲೀಸರ ಗಮನಕ್ಕೆ ತರಬೇಕಾಗಿ ಪ್ರಕಟಣೆ ಹೊರಡಿಸಲಾಗಿತ್ತು. ಅಲ್ಲದೆ ನಿರ್ದಿಷ್ಟ ಫೋನ್ ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡಬೇಕಾಗಿ ಮನವಿ ಮಾಡಿಕೊಂಡಿತ್ತು. 

ಇದನ್ನೂ ಓದಿ: ಮಣಿಪುರದಲ್ಲಿ 500 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಪೊಲೀಸರ ಪ್ರಕಟಣೆ ನಂತರ ಸಾರ್ವಜನಿಕರಿಂದ ಒಳ್ಳೆಯ ಸ್ಪಂದನೆ ಹಾಗೂ ಸಹಕಾರ ಲಭ್ಯವಾಗುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರೌಡಿ ಶೀಟರ್, ಡ್ರಗ್ ಪೆಡ್ಲರ್ ಗಳ ಮನೆಗಳ ಮೇಲೆ ಪೊಲೀಸ್ ದಾಳಿ



Read more