Karnataka news paper

ಬಜೆಟ್ ಕ್ಯಾರಿಯರ್‌ ಇತಿಹಾಸ: ಬ್ರೀಫ್‌ಕೇಸ್‌ನಿಂದ ಟ್ಯಾಬ್‌ವರೆಗಿನ ಬದಲಾವಣೆಯ ಕಿರು ನೋಟ!


ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ 2022-23ರ ಬಜೆಟ್‌ ಅನ್ನು ಫೆಬ್ರವರಿ 1 ರಂದು ಮಂಡಿಸಲಿದ್ದಾರೆ. ಕೋವಿಡ್-19 ಸೋಂಕಿನಿಂದಾಗಿ ಕಳೆದ ವರ್ಷ ಮಂಡಿಸಲಾದ ಬಜೆಟ್ ಕಾಗದರಹಿತವಾಗಿತ್ತು. ಹಣಕಾಸು ಸಚಿವರು ಟ್ಯಾಬ್ ಸಹಾಯದಿಂದ ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ್ದರು. ಆದರೆ, ಕೊರೊನಾ ಮಹಾಮಾರಿಯ ಯುಗವು ಇನ್ನೂ ಮುಗಿದಿಲ್ಲ. ಇತ್ತೀಚೆಗೆ 3ನೇ ಅಲೆ ಅಪ್ಪಳಿಸಿದ್ದು, ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಹೀಗಿರುವಾಗ ಈ ಬಾರಿಯೂ ಕಾಗದ ರಹಿತವಾಗಿ ಬಜೆಟ್ ಮಂಡನೆಯಾಗುವ ಸಾಧ್ಯತೆ ಹೆಚ್ಚಿದೆ.

ಬಜೆಟ್‌ ಇತಿಹಾಸದಲ್ಲಿ ಕಳೆದ ವರ್ಷವೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡಿಸಲಾಗಿತ್ತು. ಬಜೆಟ್ ದಾಖಲೆಗಳನ್ನು ಕೊಂಡೊಯ್ಯಲು ಮೊದಲು ಲೆದರ್‌ ಬ್ಯಾಗ್‌ ಬಳಸಲಾಗುತ್ತಿತ್ತು, ನಂತರ ಬ್ರೀಫ್‌ಕೇಸ್‌, ಲೆಡ್ಜರ್‌, ನಂತರ ಟ್ಯಾಬ್‌ ಹೀಗೆ ಹಲವು ಬದಲಾವಣೆಗಳಾಗಿವೆ. ಈ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ.

ಬಜೆಟ್‌ ಅಂದರೇನು? ಪ್ರಾರಂಭವಾಗಿದ್ದು ಎಲ್ಲಿ? ಬಜೆಟ್‌ ಬಗ್ಗೆ ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳಿವು

  1. ಭಾರತದ ಬಜೆಟ್ ಆರಂಭವಾಗಿದ್ದು ಹೇಗೆ?
    1860 ರಲ್ಲಿ ಬ್ರಿಟಿಷ್ ಚಾನ್ಸೆಲರ್ ಆಫ್ ದಿ ಎಕ್ಸ್‌ಚೆಕರ್ ಚೀಫ್ ‘ವಿಲಿಯಂ ಎವರ್ಟ್ ಗ್ಲಾಡ್‌ಸ್ಟನ್’ ಮೊದಲ ಬಾರಿಗೆ ಭಾರತದ ಬಜೆಟ್ ಮಂಡಿಸಿದರು. ಬಜೆಟ್ ತುಂಬಾ ಉದ್ದವಾಗಿರುವುದರಿಂದ, ದಾಖಲೆಗಳನ್ನು ಇಡಲು ದೊಡ್ಡ ಬ್ರೀಫ್ಕೇಸ್ ಅಗತ್ಯವಿದೆ ಎಂದು ಅವರು ಭಾವಿಸಿದರು. ಈ ರೀತಿಯಾಗಿ ಭಾರತದ ಮೊದಲ ಬಜೆಟ್‌ನ ದಾಖಲೆಗಳು ದೊಡ್ಡ ಬ್ರೀಫ್‌ಕೇಸ್‌ನಲ್ಲಿ ಬಂದವು ಮತ್ತು ಈ ಬ್ರೀಫ್‌ಕೇಸ್‌ಗೆ ‘ಗ್ಲಾಡ್‌ಸ್ಟನ್ ಬಾಕ್ಸ್’ ಎಂದು ಕರೆಯಲಾಯಿತು. ಬ್ರಿಟನ್ ರಾಣಿ ಬಜೆಟ್ ಪೇಪರ್‌ಗಳಲ್ಲಿ ಚಿನ್ನದ ಮೊನೊಗ್ರಾಮ್ ಹೊಂದಿದ್ದರು. ಬಜೆಟ್ ಮಂಡಿಸಲು ಗ್ಲಾಡ್‌ಸ್ಟನ್‌ಗೆ ಈ ಬ್ರೀಫ್‌ಕೇಸ್ ಅನ್ನು ಸ್ವತಃ ರಾಣಿಯೇ ನೀಡಿದ್ದರು ಎಂದು ಹೇಳಲಾಗುತ್ತದೆ. ಬ್ರಿಟನ್‌ನ ರೆಡ್ ಗ್ಲಾಡ್‌ಸ್ಟನ್ ಬಜೆಟ್ ಬಾಕ್ಸ್ 2010 ರವರೆಗೂ ಬಳಕೆಯಲ್ಲಿತ್ತು . ಆದರೆ, ಅದು ಹಾಳಾಗುತ್ತಿದ್ದ ಕಾರಣ ಅದನ್ನು ವಸ್ತುಸಂಗ್ರಹಾಲಯದಲ್ಲಿ ಇರಿಸಲಾಯಿತು. ನಂತರದಲ್ಲಿ ಬಜೆಟ್‌ ದಾಖಲೆಗಳನ್ನು ಒಯ್ಯಲು ಲೆದರ್‌ ಬ್ಯಾಗ್‌ ಅನ್ನು ಬಳಸಲಾಯಿತು.
  2. ಬ್ರೀಫ್‌ಕೇಸನ್ನು ಲೆದರ್‌ ಬ್ಯಾಗ್‌ ಬದಲಾಯಿಸಿದ್ದು ಯಾವಾಗ?
    ಭಾರತವು 1947 ರಲ್ಲಿ ಸ್ವತಂತ್ರವಾಯಿತು. ಆದರೆ, ಬಜೆಟ್ ಬಾಕ್ಸ್ ಸಂಪ್ರದಾಯವು ಮುಂದುವರಿದೇ ಇತ್ತು. 1947ರ ನವೆಂಬರ್ 26 ರಂದು, ಸ್ವತಂತ್ರ ಭಾರತದ ಮೊದಲ ಹಣಕಾಸು ಮಂತ್ರಿ ಷಣ್ಮುಖಂ ಶೆಟ್ಟಿ ಅವರು ಬಜೆಟ್ ಮಂಡಿಸಲು ಕೆಂಪು ಬಣ್ಣದ ಲೆದರ್‌ ಬ್ರೀಫ್‌ಕೇಸ್‌ ಸಹಾಯ ಪಡೆದರು. ನಂತರ 1998-99 ರ ಬಜೆಟ್‌ನಲ್ಲಿ, ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಸ್ಟ್ರಾಪ್ ಮತ್ತು ಬಕಲ್‌ಗಳೊಂದಿಗೆ ಕಪ್ಪು ಬಣ್ಣದ ಲೆದರ್‌ ಬ್ಯಾಗ್‌ಅನ್ನು ಬಳಕೆಗೆ ತಂದರು. ಮತ್ತೊಂದೆಡೆ, ಮನಮೋಹನ್ ಸಿಂಗ್ 1991 ರಲ್ಲಿ ತಮ್ಮ ಪ್ರಸಿದ್ಧ ಬಜೆಟ್ ಮಂಡಿಸಿದಾಗ, ಅವರು ಸರಳ ಕಪ್ಪು ಬಣ್ಣದ ಲೆದರ್ ಬ್ಯಾಗ್‌ಗೆ ಆದ್ಯತೆ ನೀಡಿದ್ದರು. ಈ ರೀತಿಯಾಗಿ ಭಾರತದ ಬಜೆಟ್ ಬ್ಯಾಗ್‌ಗಳ ಬಣ್ಣ ಮತ್ತು ಆಕಾರವು ಆಗಾಗ್ಗೆ ಬದಲಾಗುತ್ತಲೇ ಬಂದಿದೆ.
  3. 2019 ರ ಜುಲೈನಲ್ಲಿ ನಿರ್ಮಲಾ ಸೀತಾರಾಮನ್‌ ತಂದ ಬದಲಾವಣೆ ಏನು?
    ಇದರ ನಂತರ, ಮೋದಿ 2.0 ಅವಧಿ ಪ್ರಾರಂಭವಾದಾಗ ಪೂರ್ಣ ಸಮಯದ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಮೊದಲ ಬಾರಿಗೆ ಬಜೆಟ್ ಮಂಡಿಸಿದರು. 2019ರ ಜುಲೈನಲ್ಲಿ ಬಜೆಟ್‌ನ ಪ್ರತಿಯು ವಿಭಿನ್ನ ರೀತಿಯಲ್ಲಿ ಹೊರಬಂದಿತು. ಪ್ರತಿ ಬಾರಿ ಬಜೆಟ್ ದಾಖಲೆಗಳನ್ನು ಬ್ರೀಫ್‌ಕೇಸ್‌ನಲ್ಲಿ ತರಲಾಗುತ್ತಿತ್ತು. ಆದರೆ, 2019 ರಲ್ಲಿ, ಸೀತಾರಾಮನ್ ಅದನ್ನು ಕೆಂಪು ವೆಲ್ವೆಟ್ ಬಟ್ಟೆಯಲ್ಲಿ ತಂದರು. ಬಟ್ಟೆಯ ಮೇಲೆ ಭಾರತ ಸರ್ಕಾರದ ಲಾಂಛನವೂ ಇತ್ತು. ಇದು ಭಾರತೀಯ ಸಂಪ್ರದಾಯ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ.ಸುಬ್ರಮಣಿಯನ್ ಈ ಬಗ್ಗೆ ಹೇಳಿದ್ದರು. ಇದು ಪಾಶ್ಚಾತ್ಯ ಚಿಂತನೆಯ ಗುಲಾಮಗಿರಿಯಿಂದ ಬಿಡುಗಡೆಯನ್ನು ಸಂಕೇತಿಸುತ್ತದೆ.
  4. ಬ್ರೀಪ್‌ಕೇಸ್‌ ಟ್ಯಾಬ್ಲೆಟ್‌ಗೆ ರೂಪಾಂತರಗೊಂಡಿದ್ದು ಯಾವಾಗ?
    ಇದರ ನಂತರ, ಪೇಪರ್‌ಲೆಸ್ ಬಜೆಟ್ ಆಗಿರುವುದರಿಂದ 2021 ರ ಬಜೆಟ್ ಟ್ಯಾಬ್‌ನಲ್ಲಿ ಕಾಣಿಸಿಕೊಂಡಿದೆ. ಬಜೆಟ್‌ನ ಭೌತಿಕ ಪ್ರತಿ ಇರಲಿಲ್ಲ. ಬಜೆಟ್ ಟ್ಯಾಬ್ ಅನ್ನು ಲೆಡ್ಜರ್‌ನಂತೆಯೇ ಕೆಂಪು ಬಟ್ಟೆಯಲ್ಲಿ ಹೊದಿಸಲಾಗಿತ್ತು. ಈ ಬಟ್ಟೆಯ ಮೇಲೆ ಭಾರತ ಸರ್ಕಾರದ ಲಾಂಛನವಿತ್ತು. ಈ ಬಾರಿಯ ಹಣಕಾಸು ಸಚಿವರು ಬಜೆಟ್ ದಾಖಲೆಗಳೊಂದಿಗೆ ಸಂಸತ್ತಿಗೆ ಹೇಗೆ ಬರುತ್ತಾರೆ ಎಂಬುದನ್ನು ಈಗ ನೋಡಬೇಕು.



Read more…

[wpas_products keywords=”deal of the day”]