Karnataka news paper

ಮಂತ್ರಿಗಿರಿ ರೇಸ್‌ನಲ್ಲಿ ನಾನಿಲ್ಲ, ರಾಮದಾಸ್‌ಗೆ ಸಚಿವ ಸ್ಥಾನ ಕೊಡಿ: ಹಳ್ಳಿಹಕ್ಕಿ ಆಗ್ರಹ


ಮೈಸೂರು: ರಾಜ್ಯದಲ್ಲಿ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗೋ ಲಕ್ಷಣಗಳು ಕಾಣಿಸ್ತಿದೆ . ಬಾಕಿ ಉಳಿದಿರೋ ನಾಲ್ಕು ಸ್ಥಾನಕ್ಕೆ ತೀವ್ರ ಪೈಪೋಟಿ ಇದೆ . ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೂ ಅನ್ನೋ ವಿಚಾರವೇ ಇನ್ನೂ ಗೌಪ್ಯವಾಗಿದೆ . ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲೂ ಕೂಡ ಗುಟ್ಟುಬಿಟ್ಟು ಕೊಡುತ್ತಿಲ್ಲ. ಎಲ್ಲವನ್ನೂ ಹೈ ಕಮಾಂಡ್ ನಿರ್ಧಾರ ಮಾಡುತ್ತೆ ಅನ್ನೋದ್ರ ಮೂಲಕ ಜಾಣತನ ಪ್ರದರ್ಶನ ಮಾಡ್ತಿದ್ದಾರೆ . ಹೀಗಿರುವಾಗ್ಲೇ ಮೈಸೂರು ಭಾಗಕ್ಕೆ ಸಚಿವ ಸ್ಥಾನ ನೀಡುವಂತೆ ಒತ್ತಾಯಗಳು ಹೆಚ್ಚಾಗಿವೆ.

ರಾಮದಾಸ್‌ಗೆ ಮಂತ್ರಿಗಿರಿ ಕೊಡಿ..!

ರಾಜ್ಯದಲ್ಲಿ ಸಚಿವ ಸಂಪುಟ ಪುನರಚನೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಲ್ಲಿ ವಿಧಾನ ಪರಿಷತ್‌ ಸದಸ್ಯ ಎಚ್‌ ವಿಶ್ವನಾಥ್ ಹೇಳಿಕೆ ಕೊಟ್ಟಿದ್ದಾರೆ . ನಾನು ಸಚಿವ ಸ್ಥಾನದ ರೇಸ್‌ನಲ್ಲಿ ಇಲ್ಲ ಅಂತ ಎಂ.ಎಲ್.ಸಿ ಎಚ್ ವಿಶ್ವನಾಥ್ ಸ್ಪಷ್ಟನೆ ಕೊಟ್ಟಿದ್ದಾರೆ.

ದೇವ್ರಾಣೆ, ನಮ್ಮ ಅಪ್ಪನಾಣೆ ನಾವೇ ಮೇಕೆದಾಟು ಯೋಜನೆ ಮಾಡೋದು : ಸಚಿವ ವಿ ಸೋಮಣ್ಣ

ಮೈಸೂರು ಭಾಗಕ್ಕೆ ಒಂದು ಸಚಿವ ಸ್ಥಾನ ನೀಡಲೇಬೇಕು. ಹಿರಿಯರಾದ ಎಸ್ ಎ ರಾಮದಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಗೆ ಒತ್ತಾಯ ಮಾಡುತ್ತೇನೆ. ಸುಧಾರಣೆಗಾಗಿ ಬದಲಾವಣೆಯಾಗಬೇಕು ಅಂತ ವಿಶ್ವನಾಥ್ ಹೇಳಿದರು .

ಮೈಸೂರು ಭಾಗಕ್ಕೆ ಒಲಿಯುತ್ತಾ ಸ್ಥಾನ..?

ಇನ್ನೂ ಹಳೇ ಮೈಸೂರು ಭಾಗಕ್ಕೆ ಬಿಜೆಪಿ ಸರಕಾರದಲ್ಲಿ ಅನ್ಯಾಯ ಆಗಿದೆ . ಸಂಪುಟ ಸಮಾನತೆ ಸಿಕ್ಕಿಲ್ಲ ಅನ್ನೋ ವಿಚಾರ ಸಾಕಷ್ಟು ದಿನಗಳಿಂದ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆಗುತ್ತಿದೆ . ಮೈಸೂರು , ಕೊಡಗು , ಚಾಮರಾಜನಗರಕ್ಕೆ ಒಂದೇ ಒಂದು ಸಚಿವ ಸ್ಥಾನ ಸಿಕ್ಕಿರಲಿಲ್ಲ . ಕಳೆದ ಭಾರಿ ಸಂಪುಟ ವಿಸ್ತರಣೆ ವೇಳೆ ಶಾಸಕ ರಾಮದಾಸ್‌ಗೆ ಕೂದಲೆಳೆ ಅಂತದರಲ್ಲಿ ಮಂತ್ರಿಗಿರಿ ಮಿಸ್ ಆಗಿತ್ತು . ಆದರೆ ಈ ಬಾರಿ ಮೈಸೂರಿಗೆ ಮಂತ್ರಿಗಿರಿ ಪಕ್ಕಾ ಅಂತ ಹೇಳಲಾಗ್ತಿದೆ . ಸ್ಥಳೀಯ ನಾಯಕರು ಹಾಗೂ ರಾಜ್ಯ ನಾಯಕರ ಒಲವು ರಾಮದಾಸ್ ಮೇಲಿದ್ದು, ಸಂಪುಟದಲ್ಲಿ ಈ ಸಲ ಸ್ಥಾನ ಸಿಗೋ ಲಕ್ಷಣಗಳು ಹೆಚ್ಚಾಗಿದೆ .

ಯಾರಿಗೆ ಒಲಿಯುತ್ತೆ ಲಕ್..!?

ಮೈಸೂರು, ಮಡಿಕೇರಿ ಭಾಗಕ್ಕೆ ಮಂತ್ರಿಗಿರಿ ಬೇಕು ಅನ್ನೋದು ಕಾರ್ಯಕರ್ತರ ಬೇಡಿಕೆ. ಎರಡು ಜಿಲ್ಲೆಯಲ್ಲಿ ಯಾರಿಗೆ ಮನ್ನಣೆ ಸಿಗತ್ತೆ ಅನ್ನೋದು ಇನ್ನೂ ಕೌತುಕವಾಗಿಯೇ ಉಳಿದಿದೆ. ಬಹುತೇಕ ಫೆಬ್ರವರಿ 2ನೇ ವಾರದಲ್ಲಿ ಸಂಪುಟ ವಿಸ್ತರಣೆ ಅಗೋ ಸಾಧ್ಯತೆ ಇದೆ.

ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ, ಬೊಮ್ಮಾಯಿ ಕೈಯಲ್ಲೇ ಬೆಂಗಳೂರು! ಯಾರಿಗೆ ಯಾವ ಜಿಲ್ಲೆ?

ಸಂಪುಟ ಸಂಕಟ ಆರಂಭದ ಮೊದಲೇ ಎಸ್‌ಎ ರಾಮದಾಸ್ ಪರ ಹಳ್ಳಿಹಕ್ಕಿ ಶಾಸಕ ಬ್ಯಾಟ್ ಬಿಸಿರೋದು ಹಲವು ಚರ್ಚೆಯನ್ನ ಹುಟ್ಟುಹಾಕಿದೆ. ಬಹುತೇಕ ರಾಮದಾಸ್ ಮಂತ್ರಿ ಆಗ್ತಾರೆ ಅನ್ನೋ ಮಾತು ಬಿಜೆಪಿ ವಲಯದಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ.



Read more

[wpas_products keywords=”deal of the day sale today offer all”]