Karnataka news paper

ಬ್ರಿಟಿಷರ ಸವಾಲಿಗೇ ಹೆದರಿಲ್ಲ. ಬಿಜೆಪಿಯ ಪುಂಗಿದಾಸರ ಬೆದರಿಕೆಗಳಿಗೆ ಜಗ್ಗುತ್ತೇವಾ?: ಹರಿಪ್ರಸಾದ್


ಮಂಗಳೂರು: ಕೇರಳದಲ್ಲಿ ನಾರಾಯಣಗುರುಗಳು ಸ್ಥಾಪಿಸಿದ್ದ ಎಸ್‍ಎನ್‍ಡಿಪಿಯಿಂದಾಗಿ ಬಿಜೆಪಿಗೆ ನೆಲೆಯೂರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಳೆದ ಚುನಾವಣೆಗೆ ಮೊದಲು ಎಸ್‍ಎನ್‍ಡಿಪಿಯನ್ನು ಇಬ್ಭಾಗ ಮಾಡಿತು. ಆದರೆ, ಇದ್ದ ಒಂದು ಸೀಟನ್ನೂ ಕಳೆದುಕೊಂಡಿದ್ದರಿಂದ ಹತಾಶೆಗೊಂಡು, ನಾರಾಯಣ ಗುರುಗಳನ್ನೇ ಜನಮಾನಸದಿಂದ ಅಳಿಸಿ ಹಾಕುವ ಷಡ್ಯಂತ್ರ ಹೂಡಿದೆ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.

ಮಂಗಳೂರಿನಲ್ಲಿ ಸೋಮವಾರ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್‌, ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಣೆ ಮೂಲಕ ಅವಮಾನ ಮಾಡಿರುವ ಕೇಂದ್ರ ಸರಕಾರದ ವಿರುದ್ಧ ಗುರುಗಳ ಅನುಯಾಯಿಗಳು, ಸಮಾಜದ ಮುಖಂಡರು ಈಗಾಗಲೇ ದನಿ ಎತ್ತಿದ್ದು, ಈ ಹಿನ್ನೆಲೆಯಲ್ಲಿ ಜ.26ರ ಸ್ವಾಭಿಮಾನಿ ಯಾತ್ರೆಗೆ ಬೆಂಬಲ ನೀಡುತ್ತಿದ್ದೇವೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರನ್ನು ವಿಶ್ವ ಗುರು ಮಾಡಲು ಹೊರಟಿರುವ ಬಿಜೆಪಿಯವರು, ಯಾವುದೇ ದಾರ್ಶನಿಕರನ್ನು ಸಹಿಸುವುದಿಲ್ಲ. ನಾರಾಯಣ ಗುರುಗಳ ಸಹಿತ, ಸುಭಾಷ್ಚಂದ್ರ ಬೋಸ್, ಭಾರತಿಯಾರ್, ವೇಲು ನಾಚಿಯಾರ್ ಮತ್ತಿತರ ಗಣ್ಯರ ಸ್ತಬ್ಧಚಿತ್ರಗಳನ್ನು ತಿರಸ್ಕರಿಸಿದ್ದಾರೆ. ಟಿಪ್ಪುವನ್ನು ವಿರೋಸುವ ಬಿಜೆಪಿಯವರು ಅದೇ ಟಿಪ್ಪು ಸುಲ್ತಾನನ ಸ್ತಬ್ಧಚಿತ್ರಕ್ಕೆ ಅವಕಾಶ ನೀಡುವುದು ಅವರ ದ್ವಂದ್ವ ನೀತಿಯನ್ನು ತೋರಿಸುತ್ತಿದೆ ಎಂದು ಹೇಳಿದರು.

ಮಂಗಳೂರಿನ ಭರತನಾಟ್ಯ ಕಲಾವಿದೆ ರೆಮೋನಾ ಪಿರೇರಾಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ!

ಒನ್ ನೇಶನ್, ಒನ್ ಎಲೆಕ್ಷನ್, ಒನ್ ರೇಷನ್ ಎನ್ನುವ ಬಿಜೆಪಿ- ಆರೆಸ್ಸೆಸ್‍ನವರು ಒಂದೇ ಜಾತಿ, ಒಂದೇ ಧರ್ಮ ಎನ್ನುವ ಬ್ರಹ್ಮಶ್ರೀಗಳ ಮೂಲ ಮಂತ್ರವನ್ನು ಒಪ್ಪುವುದಿಲ್ಲ. ಕೋಟ ಶ್ರೀನಿವಾಸ ಪೂಜಾರಿ ಗುರುಗಳ ಪ್ರಬಲ ಅನುಯಾಯಿ. ಆದರೆ, ಪಕ್ಷನಿಷ್ಠೆಯಿಂದ ಮಾತನಾಡುತ್ತಿದ್ದಾರೆ. ಸುನಿಲ್ ಕುಮಾರ್‌ಗೆ ಮಾತನಾಡುವ ನೈತಿಕತೆ ಇಲ್ಲ. ನಾರಾಯಣ ಗುರುಗಳ ಜನ್ಮ ದಿನಕ್ಕೆ ಸರಕಾರಿ ಕಾರ್ಯಕ್ರಮ ಘೋಷಿಸಿರುವ ಸಿದ್ದರಾಮಯ್ಯ, ಮಂಗಳೂರು ವಿವಿಯಲ್ಲಿ ನಾರಾಯಣ ಗುರು ಪೀಠಕ್ಕೆ 50 ಲಕ್ಷ ರೂ. ಅನುದಾನ ನೀಡಿರುವ ನನಗೆ ಮಾತನಾಡುವ ಹಕ್ಕಿದೆ. ನಾವೇ ಮಾತನಾಡಿದರೆ ಸಾಲದು ಎಂದರು.

ಮಂಗಳೂರಿನ ಭರತನಾಟ್ಯ ಕಲಾವಿದೆ ರೆಮೋನಾ ಪಿರೇರಾಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ!

ಸಿಎಂ ಬೊಮ್ಮಾಯಿ, ಸಂಸದ ನಳಿನ್ ಕುಮಾರ್ ತುಟಿ ಬಿಚ್ಚಲಿ. ಸರಕಾರದ ತಪ್ಪನ್ನು ಒಪ್ಪಿಕೊಳ್ಳಲಿ. ನಾವು ಬ್ರಿಟಿಷರ ಸವಾಲಿಗೇ ಹೆದರಿದವರಲ್ಲ. ಇನ್ನು ಬಿಜೆಪಿಯ ಪುಂಗಿದಾಸರ ಬೆದರಿಕೆಗಳಿಗೆ ಜಗ್ಗುತ್ತೇವಾ? ಜ.26ರ ಮೆರವಣಿಗೆ ನಡೆದೇ ತೀರುತ್ತದೆ ಎಂದು ಹರಿಪ್ರಸಾದ್ ಸವಾಲು ಹಾಕಿದರು.



Read more

[wpas_products keywords=”deal of the day sale today offer all”]