ಹೈಲೈಟ್ಸ್:
- ದಿಲ್ಲಿ ಕ್ರಿಪ್ಟೋಕರೆನ್ಸಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವ
- ಪ್ರಕರಣಕ್ಕೆ ಪ್ಯಾಲೆಸ್ತೇನ್‌ನ ಭಯೋತ್ಪಾದಕ ಸಂಘಟನೆ ‘ಹಮಾಸ್’ ನಂಟು
- ದಿಲ್ಲಿ ಪೊಲೀಸ್ ತನಿಖಾ ವರದಿಯಿಂದ ಬೆಳಕಿಗೆ ಬಂದ ಮಾಹಿತಿ
ಮಾಹಿತಿಯ ಪ್ರಕಾರ, ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶ ಮತ್ತು ವಿದೇಶಗಳಲ್ಲಿನ ಸಂಬಂಧಿತ ಅಧಿಕಾರಿಗಳಿಗೆ ಬೆಳವಣಿಗೆಗಳ ಬಗ್ಗೆ ತಿಳಿಸುವ ಸಾಧ್ಯತೆಯಿದೆ. ಇಡೀ ಪ್ರಕರಣ ಯಾವೆಲ್ಲ ತಿರುವು ಪಡೆಯಲಿದೆ. ಪ್ರಕರಣದಲ್ಲಿ ಯಾರೆಲ್ಲ ಬರಲಿದ್ದಾರೆ ಎಂಬ ಕುರಿತು ಪೊಲೀಸರಿಂದ ಅಧಿಕೃತ ಮಾಹಿತಿ ಹೊರಬಂದ ನಂತರವೇ ತಿಳಿಯಲಿದೆ.
ಆದರೆ, ಪೊಲೀಸ್ ತನಿಖಾ ವರದಿಯಲ್ಲಿ ಆಘಾತಕಾರಿ ಅಂಶ ಬಹಿರಂಗವಾಗಿರುವುದಂತೂ ಸತ್ಯ. ದೆಹಲಿ ಪೊಲೀಸ್ ಗುಪ್ತಚರ ವಿಭಾಗದ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ಅವರು ಗೌಪ್ಯ ತನಿಖಾ ವರದಿ ಸಿದ್ಧಪಡಿಸಿದ್ದಾರೆ. ಈ ವರದಿ ಪ್ರಕಾರ ದೆಹಲಿಯ ಉದ್ಯಮಿಯ ಕ್ರಿಪ್ಟೋಕರೆನ್ಸಿ ಕಳ್ಳತನ ಪ್ರಕರಣದಲ್ಲಿ ಭಯೋತ್ಪಾದಕ ಸಂಘಟನೆ ಹಮಾಸ್ ಸಂಪರ್ಕ ಇರುವುದು ಬೆಳಕಿಗೆ ಬಂದಿದೆ. ಉದ್ಯಮಿಯ ಖಾಸಗಿ ವ್ಯಾಲೆಟ್‌ನಿಂದ ಕದ್ದ ಕ್ರಿಪ್ಟೋಕರೆನ್ಸಿಯ ಬಳಕೆಯನ್ನು ಹಮಾಸ್‌ನ ಮಿಲಿಟರಿ ವಿಭಾಗವಾದ ಅಲ್-ಕಸಾಮ್ ಬ್ರಿಗೇಡ್ ಬಹಿರಂಗಪಡಿಸಿದೆ. ಹಮಾಸ್‌ನ ಈ ಮಿಲಿಟರಿ ಶಾಖೆಯು ಭಯೋತ್ಪಾದನೆಗೆ ಹಣಕಾಸು ಒದಗಿಸಲು ಕದ್ದ ಮತ್ತು ದೇಣಿಗೆ ನೀಡಿದ ಕ್ರಿಪ್ಟೋಕರೆನ್ಸಿಯನ್ನು ಬಳಸುತ್ತದೆ.
ಕರೆನ್ಸಿ ವರ್ಗಾವಣೆ ಎಲ್ಲಿಲ್ಲಿ ನಡೆದಿದೆ?
IFSO ವರದಿಯ ಪ್ರಕಾರ, ಕದ್ದ ಕ್ರಿಪ್ಟೋಕರೆನ್ಸಿಯನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ.
ವಶಪಡಿಸಿಕೊಂಡ ವ್ಯಾಲೆಟ್ ಮೊಹಮ್ಮದ್ ನಾಸಿರ್ ಇಬ್ರಾಹಿಂ ಅಬ್ದುಲ್ಲಾ ಅವರಿಗೆ ಸೇರಿದ್ದು.
– ಈಜಿಪ್ಟ್‌ನ ಗಿಜಾದಿಂದ ನಿರ್ವಹಿಸಲಾಗುತ್ತಿರುವ ಇತರ ವ್ಯಾಲೆಟ್ ಅಹ್ಮದ್ ಮರ್ಜೌಕ್‌ಗೆ ಸೇರಿತ್ತು.
– ಕ್ರಿಪ್ಟೋಕರೆನ್ಸಿಯನ್ನು ವರ್ಗಾಯಿಸಿದ ಮತ್ತೊಂದು ವ್ಯಾಲೆಟ್ ಪ್ಯಾಲೆಸ್ತೇನ್‌ನ ರಮಲ್ಲಾಹ್‌ನ ಅಹ್ಮದ್ ಕಾಹ್ ಸಫಿಗೆ ಸೇರಿದೆ.
ಕದ್ದ ಕೆಲವು ಕರೆನ್ಸಿಯನ್ನು ಯುಕೆ ಮೂಲದ ಜೂಜಿನ ಸೈಟ್ ಮತ್ತು ಮಕ್ಕಳ ಅಶ್ಲೀಲ ಸೈಟ್‌ಗೆ ವರ್ಗಾಯಿಸಲಾಯಿತು.
ಸುಮಾರು ಮೂರು ವರ್ಷಗಳ ಹಿಂದೆ ಕಳ್ಳತನ ನಡೆದಿತ್ತು
ಮೂರು ವರ್ಷಗಳ ಹಿಂದೆ, ಅಂದರೆ 2019 ರಲ್ಲಿ ದೆಹಲಿಯ ಪಶ್ಚಿಮ ವಿಹಾರ್‌ನ ಉದ್ಯಮಿಯೊಬ್ಬರು ತಮ್ಮ ವ್ಯಾಲೆಟ್‌ನಿಂದ ಕ್ರಿಪ್ಟೋಕರೆನ್ಸಿ ಕಾಣೆಯಾದ ಪ್ರಕರಣ ದಾಖಲಿಸಿದ್ದರು. ಇವರು ತನ್ನ Oppo F17 ಮೊಬೈಲ್ ಡಿವೈಸ್‌ನಲ್ಲಿ 6.2 ಬಿಟ್‌ಕಾಯಿನ್, 9.79 ಇಥೆರಿಯಮ್, 2.44 ಬಿಟ್‌ಕಾಯಿನ್ ನಗದು ಬ್ಲಾಕ್‌ಚೈನ್ ಮೊಬೈಲ್ ವ್ಯಾಲೆಟ್ ಅನ್ನು ಹೊಂದಿದ್ದರು. ಆಗ ಆ ಕರೆನ್ಸಿಯ ಮೌಲ್ಯ ಸುಮಾರು 30.6 ಲಕ್ಷ ರೂ. ಇತ್ತು. ಪ್ರಸ್ತುತ ಇದರ ಮೌಲ್ಯ 2.5 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ನಂತರದಲ್ಲಿ ಪ್ರಕರಣದ ತಾಂತ್ರಿಕ ತನಿಖೆಗಾಗಿ ವಿಶೇಷ ಸೆಲ್‌ಗೆ ಹಸ್ತಾಂತರಿಸಲಾಯಿತು. ನಂತರ ಮಲ್ಹೋತ್ರಾ ಅವರು ಎಸಿಪಿ ರಾಮನ್ ಲಂಬಾ, ಎಸ್‌ಐ ನೀರಜ್ ಮತ್ತು ಇತರರನ್ನು ಒಳಗೊಂಡ ವಿಶೇಷ ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ.
Read more…
[wpas_products keywords=”deal of the day”]