Karnataka news paper

ಇಂಗ್ಲೆಂಡ್‌ ಎದುರು 1 ರನ್‌ನಿಂದ ವೀರೋಚಿತ ಸೋಲುಂಡ ವಿಂಡೀಸ್‌!


ಹೈಲೈಟ್ಸ್‌:

  • ಇಂಗ್ಲೆಂಡ್‌-ವೆಸ್ಟ್‌ ಇಂಡೀಸ್‌ ನಡುವಣ 5 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿ.
  • ಎರಡು ಪಂದ್ಯಗಳ ಮುಕ್ತಾಯಕ್ಕೆ ಸರಣಿ 1-1 ಅಂತರದಲ್ಲಿ ಸಮಬಲದಲ್ಲಿದೆ.
  • ಮೊದಲ ಪಂದ್ಯದಲ್ಲಿ ವಿಂಡೀಸ್‌ 9 ವಿಕೆಟರ್‌ಗಳಿಂದ ಗೆದ್ದರೆ, ಈಗ 1 ರನ್‌ನಿಂದ ಸೋತಿದೆ.

ಬಾರ್ಬೇಡೊಸ್‌: ಕೊನೇ ಓವರ್‌ನಲ್ಲಿ ಆರ್ಭಟಿಸಿದ ಯುವ ಆಲ್‌ರೌಂಡರ್‌ ಅಕೆಲ್‌ ಹೊಸೇನ್‌ ಬರೋಬ್ಬರಿ 28 ರನ್‌ಗಳನ್ನು ಚೆಚ್ಚಿದರೂ ಆತಿಥೇಯ ವೆಸ್ಟ್‌ ಇಂಡೀಸ್‌ ತಂಡ ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ 2ನೇ ಪಂದ್ಯದಲ್ಲಿ 1 ರನ್‌ಗಳ ವೀರೋಚಿತ ಸೋಲುಂಡಿತು.

ಇಲ್ಲಿನ ಕೆನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಭಾನುವಾರ ತಡರಾತ್ರಿ ನಡೆದ ರೋಚಕ ಪಂದ್ಯದಲ್ಲಿ 172 ರನ್‌ಗಳ ಕಠಿಣ ಗುರಿ ಬೆನ್ನತ್ತಿದ್ದ ವೆಸ್ಟ್‌ ಇಂಡೀಸ್‌, 98ಕ್ಕೆ 8 ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ನಂತರದ ನಡೆದದ್ದು ಅದ್ಭುತ ಹೋರಾಟ.

ಆಲ್‌ರೌಂಡರ್‌ಗಳಾದ ರೊಮಾರಿಯೋ ಶೆಫರ್ಡ್‌ (28 ಎಸೆತಗಳಲ್ಲಿ 44* ರನ್‌) ಮತ್ತು ಅಕೆಲ್‌ ಹೊಸೇನ್‌ (16 ಎಸೆತಗಳಲ್ಲಿ 44* ರನ್‌) ನಡುವಣ ಅಮೋಘ ಜೊತೆಯಾಟದ ಫಲವಾಗಿ ವಿಂಡೀಸ್‌ ಜಯದ ದಡದತ್ತ ದಾಪುಗಾಲಿಟ್ಟಿತ್ತು. ಆದರೆ, ದುರದೃಷ್ಟವಶಾತ್‌ 1 ರನ್‌ಗಳಿಂದ ಸೋತು ನಿರಾಶೆ ಅನುಭವಿಸಿತು. ಇಂಗ್ಲೆಂಡ್‌ ಪರ ಮೊಯೀನ್‌ ಅಲಿ (24ಕ್ಕೆ 3) ಯಶಸ್ವಿ ಬೌಲರ್‌ ಎನಿಸಿದರೆ, ಆದಿಲ್‌ ರಶೀದ್‌ (24ಕ್ಕೆ 2) ಉತ್ತಮ ಸಾಥ್‌ ಕೊಟ್ಟರು.

‘ನಾಯಕನಾಗಿ ಯೋಗ್ಯ ಕೆಲಸ ಮಾಡಿದ್ದಾರೆ’ ಕೆ.ಎಲ್‌ ರಾಹುಲ್‌ಗೆ ದ್ರಾವಿಡ್‌ ಬೆಂಬಲ!

ರೋಚಕ ಜಯ ದಕ್ಕಿಸಿಕೊಂಡ ಐಯಾನ್‌ ಮಾರ್ಗನ್‌ ಸಾರಥ್ಯದ ಇಂಗ್ಲೆಂಡ್‌ ತಂಡ ಐದು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ. ಟ್ರಿನಿಡಾಡ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು.

ಸವಾಲಿನ ಮೊತ್ತ ದಾಖಲಿಸಿದ ಇಂಗ್ಲೆಂಡ್
ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ಸವಾಲಿನ ಮೊತ್ತ ಪೇರಿಸುವಲ್ಲಿ ಯಸಸ್ವಿಯಾಯಿತು. ಓಪನರ್‌ ಜೇಸನ್‌ ರಾಯ್‌ (45), ಟಾಮ್‌ ಬ್ಯಾನ್ಟನ್‌ (25), ಮೊಯೀನ್‌ ಅಲಿ (31) ಮತ್ತು ಕ್ರಿಸ್‌ ಜಾರ್ಡನ್‌ (27) ಬ್ಯಾಟಿಂಗ್‌ ಬಲದಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 171 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು. ವಿಂಡೀಸ್‌ನ ಮಾಜಿ ನಾಯಕ ಜೇಸನ್‌ ಹೋಲ್ಡರ್‌ 25ಕ್ಕೆ 2 ವಿಕೆಟ್‌ ಕಿತ್ತು ಗಮನ ಸೆಳೆದರು.

19 ಎಸೆತಗಳಲ್ಲಿ ಅಜೇಯ 52 ರನ್‌ ಚೆಚ್ಚಿದ ತಾಹಿರ್‌, ಇಂಡಿಯಾಗೆ ಶಾಕ್‌!

ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌: 20 ಓವರ್‌ಗಳಲ್ಲಿ 171/8 (ಜೇಸನ್‌ ರಾಯ್‌ 45, ಮೊಯೀನ್‌ ಅಲಿ 31; ಜೇಸನ್‌ ಹೋಲ್ಡರ್‌ 25ಕ್ಕೆ 3).
ವೆಸ್ಟ್‌ ಇಂಡೀಸ್‌: 20 ಓವರ್‌ಗಳಲ್ಲಿ 170/8 (ಅಕೆಲ್‌ ಹೊಸೇನ್‌ 44*, ರೊಮಾರಿಯೊ ಶೆಫರ್ಡ್‌ 44*; ಮೊಯೀನ್‌ ಅಲಿ 24ಕ್ಕೆ 3).

ವೆಸ್ಟ್‌ ಇಂಡೀಸ್‌ ತಂಡ ಇಂಗ್ಲೆಂಡ್‌ ವಿರುದ್ಧದ ಈ ಸರಣಿ ನಂತರ ಭಾರತ ಪ್ರವಾಸ ಕೈಗೊಳ್ಳಲಿದೆ. ಫೆಬ್ರವರಿಯಲ್ಲಿ ಟೀಮ್ ಇಂಡಿಯಾ ಎದುರು ತಲಾ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಮತ್ತು ಏಕದಿನ ಕ್ರಿಕೆಟ್‌ ಸರಣಿಗಳಲ್ಲಿ ಪೈಪೋಟಿ ನಡೆಸಲಿದೆ.



Read more

[wpas_products keywords=”deal of the day sale today offer all”]