ಹೈಲೈಟ್ಸ್:
- ‘ಸಿಲ್ಲಿ ಲಲ್ಲಿ’ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ಮಂಜು ಭಾಷಿಣಿ
- ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಮಂಜು ಭಾಷಿಣಿ ನಟಿಸುತ್ತಿದ್ದಾರೆ
- ಬಡ್ಡಿ ಬಂಗಾರಮ್ಮ ಪಾತ್ರದಲ್ಲಿ ಮಂಜು ಭಾಷಿಣಿ ನಟನೆ
ಬಡ್ಡಿ ಬಂಗಾರಮ್ಮನ ಪಾತ್ರದಲ್ಲಿ ಮಂಜು ಭಾಷಿಣಿ
“ನಾಯಕನ ತಾಯಿ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಬಡ್ಡಿ ವ್ಯವಹಾರ ಮಾಡುವ ಗಟ್ಟಿಗಿತ್ತಿ ಮಹಿಳೆ ಪಾತ್ರದಲ್ಲಿ ನಾನು ನಟಿಸುತ್ತಿರುವೆ. ಜೀವನದಲ್ಲಿ ಏನಾದರೂ ಸಾಧನೆ ಮಾಡುತ್ತೇವೆ ಎಂದು ನಿಜವಾದ ಕಾರಣ ನೀಡಿದರೆ ಮಾತ್ರ ಅವಳು ಹಣ ನೀಡುತ್ತಾಳೆ. ಸಮಾಜದಲ್ಲಿ ಆಕೆ ನ್ಯಾಯಕ್ಕಾಗಿ ನಿಲ್ಲುತ್ತಾಳೆ” ಎಂದು ಪಾತ್ರದ ಬಗ್ಗೆ ಮಾಧ್ಯಮದ ಜೊತೆಗೆ ಮಂಜುಭಾಷಿಣಿ ಹೇಳಿದ್ದಾರೆ.
2018ರಿಂದ ಮಂಜು ಭಾಷಿಣಿ ಯಾಕೆ ಯಾವುದೇ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ?
2018ರಲ್ಲಿ ಮಂಜು ಭಾಷಿಣಿ ಅವರು ‘ರಾಜಾ ರಾಣಿ’ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಾದ ನಂತರದಲ್ಲಿ ಅವರು ಮತ್ತೆ ಈಗಲೇ ಕಿರುತೆರೆಗೆ ಎಂಟ್ರಿ ನೀಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಂಜು ಭಾಷಿಣಿ ಅವರು “2018ರಿಂದ ನನಗೆ ಆಫರ್ಸ್ ಬರುತ್ತಿದೆ. ಆ ಪಾತ್ರಗಳಿಗೆ ತಿಂಗಳಲ್ಲಿ ನಾನು 20 ದಿನ ಮೀಸಲು ಇಡಬೇಕಿತ್ತು. ಆದರೆ ನಾನು ನನ್ನ ಪತಿ ಕಂಪೆನಿ ನಡೆಸುತ್ತಿರುವುದರಿಂದ, 12 ದೇಶ ಸುತ್ತಬೇಕಿರುವುದರಿಂದ ಸಾಧ್ಯವಾಗುತ್ತಿರಲಿಲ್ಲ. ಆದರೆ ಕೊರೊನಾ ಇರೋದಕ್ಕೆ ನಾನು ಎಲ್ಲಿಯೂ ಟ್ರಾವೆಲ್ ಮಾಡೋದು ಇರೋದಿಲ್ಲ” ಎಂದು ಹೇಳಿದ್ದಾರೆ.
ಮತ್ತೆ ಪ್ರಸಾರ ಆಗಲಿದೆ ಟಿ.ಎನ್. ಸೀತಾರಾಮ್ ನಿರ್ದೇಶನದ ‘ಮಾಯಾಮೃಗ’ ಧಾರಾವಾಹಿ!
“ಒಂದು ಸಮಯದಲ್ಲಿ ನಾವು ಒಪ್ಪಿಕೊಂಡ ಪಾತ್ರಗಳು ಪ್ರೌಢಿಮೆಯಿಂದ ಕೂಡಿರುತ್ತಿದ್ದವು. ಆದರೆ ಲಲಿತಾಂಬಾ ಪಾತ್ರ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ. ನನಗೆ ಸಿಕ್ಕಂತಹ ಪ್ರೀತಿ ಅಭಿಮಾನವನ್ನು ಕೊನೆಯ ಉಸಿರು ಇರೋವರೆಗೂ ಮರೆಯೋದಿಲ್ಲ” ಎಂದು ನಟಿ ಮಂಜು ಭಾಷಿಣಿ ಹೇಳಿದ್ದಾರೆ.
ಧನ್ಯವಾದ ತಿಳಿಸಿದ ಮಂಜು ಭಾಷಿಣಿ
“ಕೆಲ ಗಂಟೆ, ಶ್ರದ್ಧೆ ಕೇಳಿದರೂ ನನಗೆ ನನ್ನ ವೃತ್ತಿ ಎಂದರೆ ತುಂಬ ಇಷ್ಟ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಾನು ನಟಿಸುತ್ತಿದ್ದೇನೆ. ಬಹಳ ಸಮಯದ ನಂತರ ನಿಮಗೆಲ್ಲ ಮನರಂಜನೆ ನೀಡುತ್ತಿರುವುದಕ್ಕೆ ನನಗೆ ಖುಷಿಯಾಗಿದೆ. ನನಗೆ ಪ್ರತ್ಯಕ್ಷ, ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು” ಎಂದು ನಟಿ ಮಂಜು ಭಾಷಿಣಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.
ಅಣ್ಣಾವ್ರ ಭೇಟಿಯೇ ನನಗೆ ಆಸ್ಕರ್ ಸಿಕ್ಕಂತೆ; ‘ಹೆಲೋ’ ಲೈವ್‌ನಲ್ಲಿ ನಮಿತಾ ರಾವ್ ಮನದ ಮಾತು
ಪುಟ್ಟಕ್ಕ ಪಾತ್ರದಲ್ಲಿ ನಟಿ ಉಮಾಶ್ರೀ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ನಟಿ ಅಕ್ಷರಾ, ಸಂಜನಾ ಬುರ್ಲಿ, ಧನುಷ್, ಪವನ್ ಕುಮಾರ್, ಹಂಸ ಅವರು ಕೂಡ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಿಸೆಂಬರ್ 13ರಿಂದ ಈ ಧಾರಾವಾಹಿ ಪ್ರಸಾರವಾಗುತ್ತಿದೆ. 3 ಹೆಣ್ಣು ಮಕ್ಕಳನ್ನು ಒಂದು ಪುಟ್ಟ ಮೆಸ್ ಇಟ್ಟುಕೊಂಡು ಪುಟ್ಟಕ್ಕ ಹೇಗೆ ಸಲಹುತ್ತಾಳೆ? ಎಂಬ ಕಥೆ ಈ ಧಾರಾವಾಹಿಯಲ್ಲಿದೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನನ್ನ ಜೀವನದ ಕಥೆಯಲ್ಲ ಎಂದು ಉಮಾಶ್ರೀ ಈಗಾಗಲೇ ಮಾಧ್ಯಮದ ಜೊತೆ ಹೇಳಿಕೊಂಡಿದ್ದಾರೆ.