ಹೈಲೈಟ್ಸ್:
- ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಬ್ಯಾನರ್‌ನ ಸಿನಿಮಾ ‘ಒನ್ ಕಟ್ ಟು ಕಟ್’
- ‘ಒನ್ ಕಟ್ ಟು ಕಟ್’ ಸಿನಿಮಾದಲ್ಲಿ ದಾನೀಶ್ ಸೇಠ್ ಹೀರೋ
- ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಲಿದೆ ‘ಒನ್ ಕಟ್ ಟು ಕಟ್’
ಗೋಪಿ ಪಾತ್ರದಲ್ಲಿ ದಾನೀಶ್
‘ಒನ್ ಕಟ್ ಟು ಕಟ್’ ಚಿತ್ರದಲ್ಲಿ ಕಲಾ ಶಿಕ್ಷಕ ಗೋಪಿ ಎಂಬ ಪಾತ್ರದಲ್ಲಿ ದಾನೀಶ್ ಸೇಠ್ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಸಿನಿಮಾದಲ್ಲಿ ರಾಜಕೀಯ ವ್ಯವಸ್ಥೆಯನ್ನು ಅಣಕ ಮಾಡಿದ್ದ ದಾನೀಶ್ ಅವರು, ಈ ಬಾರಿ ಸರ್ಕಾರಿ ಶಾಲೆಯ ಸಮಸ್ಯೆಗಳನ್ನು ವಿಡಂಬನಾತ್ಮಕವಾಗಿ ಹೇಳಲು ಹೊರಟಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಅನ್ನು ದಾನೀಶ್ ಅವರೇ ಬರೆದಿದ್ದಾರೆ. ಸಿನಿಮಾಗೆ ವಂಶಿಧರ ಭೋಗರಾಜು ನಿರ್ದೇಶನ ಮಾಡಿದ್ದಾರೆ. ‘ಹಂಬಲ್ ಪೊಲಿಟಿಷೀಯನ್ ನಾಗರಾಜ್’ ಸಿನಿಮಾದಲ್ಲಿ ನಟಿಸಿದ್ದ ವಂಶಿಧರ ಭೋಗರಾಜು, ಬಹಳ ವರ್ಷದಿಂದ ದಾನಿಶ್ ಜತೆ ಕೆಲಸ ಮಾಡುತ್ತಿದ್ದಾರೆ.
ಪಾತ್ರದ ಬಗ್ಗೆ ಹೇಳುವ ದಾನೀಶ್, ‘ನನ್ನ ಕೆಲಸ ಮನರಂಜನೆ ಮಾಡುವುದಷ್ಟೇ. ವಿಶಿಷ್ಟ ಶೈಲಿಯ ಪಾತ್ರದ ಮೂಲಕ ನಾನು ರಂಜಿಸುತ್ತೇನೆ. ಗೋಪಿ ಪಾತ್ರ ಸರ್ಕಾರಿ ಶಾಲೆಯ ಸಮಸ್ಯೆಗಳನ್ನು ಅನಾವರಣಗೊಳಿಸುತ್ತಿದೆ. ಈ ಚಿತ್ರದಲ್ಲಿ ನಾನು ಕಲಾ ಶಿಕ್ಷಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಸಿನಿಮಾಗಳಿಗೆ ನಾನೇ ಚಿತ್ರಕಥೆ ಬರೆಯುವುದು ನನಗಿಷ್ಟ. ಹಾಗೆ ಬರೆದಾಗ ಇನ್ನೂ ಚೆನ್ನಾಗಿ ಅಭಿನಯ ಮಾಡಬಹುದು ಎನಿಸುತ್ತದೆ. ಲಾಕ್‌ಡೌನ್‌ನಲ್ಲಿ ಸಾಕಷ್ಟು ಜನ ಸಿರೀಸ್ ಸೇರಿದಂತೆ ವಿವಿಧ ಆನ್‌ಲೈನ್ ಕಂಟೆಂಟ್‌ಗಳನ್ನು ನೋಡಿದ್ದಾರೆ. ಹಾಗಾಗಿ ನಾನು ಗೋಪಿ ಪಾತ್ರವನ್ನು ಇಟ್ಟುಕೊಂಡು ಸಿನಿಮಾ ಮಾಡೋಣ ಎಂದು ಯೋಚಿಸಿದೆ’ ಎನ್ನುತ್ತಾರೆ ದಾನೀಶ್ ಸೇಠ್.
ಪುನೀತ್ ರಾಜ್‌ಕುಮಾರ್‌ಗೆ ಅಮೇಜಾನ್ ಪ್ರೈಮ್‌ನಿಂದ ವಿಶೇಷ ಗೌರವ; ಅಪ್ಪು ಸಿನಿಮಾಗಳ ಉಚಿತ ಪ್ರಸಾರ
ಪಿಆರ್‌ಕೆ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಗುರುದತ್ತ ತಲ್ವಾರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ದಾನೀಶ್ ಸೇಠ್ ಜೊತೆಗೆ ಪ್ರಕಾಶ್ ಬೆಳವಾಡಿ, ಸಂಯುಕ್ತ ಹೊರನಾಡ್, ವಿನೀತ್ ಬೀಪ್ ಕುಮಾರ್ ಮತ್ತು ಸಂಪತ್ ಮೈತ್ರೇಯ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಹಿಂದೆ ಪಿಆರ್‌ಕೆ ಬ್ಯಾನರ್‌ನಲ್ಲಿ ಬಂದ ‘ಫ್ರೆಂಚ್ ಬಿರಿಯಾನಿ’ ಸಿನಿಮಾದಲ್ಲಿ ದಾನೀಶ್ ನಟಿಸಿದ್ದರು.
ಜೀ ಕನ್ನಡದಲ್ಲಿ ‘ಕರುನಾಡ ರತ್ನ ಪುನೀತ್’; ಅಪ್ಪು ಸಾಧನೆ, ಜೀವನ ಮೌಲ್ಯಗಳ ಅನಾವರಣ
Read more
[wpas_products keywords=”deal of the day party wear dress for women stylish indian”]