ಹೈಲೈಟ್ಸ್:
- ಹೊರವರ್ತುಲ ರಸ್ತೆ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಏರ್‌ಪೋರ್ಟ್ ಮೆಟ್ರೋ ಮಾರ್ಗ ಕಾಮಗಾರಿಯಲ್ಲಿ ಹಿನ್ನಡೆ
- ಮೆಟ್ರೋ ಕಾಮಗಾರಿಗಾಗಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬ
- ಇನ್ನೂ ಸ್ವಾಧೀನಪಡಿಸಿಕೊಳ್ಳಬೇಕಿದೆ 49 ಆಸ್ತಿಗಳು
ಈ ಯೋಜನೆಗಾಗಿ ಒಟ್ಟು 274 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಈ ಪೈಕಿ 214 ಆಸ್ತಿಗಳು ಖಾಸಗಿ ಮತ್ತು 60 ಆಸ್ತಿಗಳು ಸರಕಾರಕ್ಕೆ ಸೇರಿದ್ದಾಗಿವೆ. ಇದುವರೆಗೂ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) 225 ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡಿದೆ. ಉಳಿದ 49 ಆಸ್ತಿ ಸ್ವಾಧೀನಪಡಿಸಿಕೊಳ್ಳುವುದು ಬಾಕಿ ಇದೆ.
ವಿಮಾನ ನಿಲ್ದಾಣದ ಮಾರ್ಗವನ್ನು ಹಂತ 2ಬಿ (ವಿಮಾನ ನಿಲ್ದಾಣ ಮಾರ್ಗದ 38 ಕಿ.ಮೀ) ಎಂದು ವರ್ಗೀಕರಿಸಲಾಗಿದೆ. ಇದು ಕೆ.ಆರ್.ಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದ ವಯಡಕ್ಟ್ ಮತ್ತು ಸ್ಟೇಷನ್‌ಗಳ ನಿರ್ಮಾಣಕ್ಕೆ ಅಗತ್ಯವಿರುವ 2,22,404.17 ಚ.ಮೀ ಗಳ ಪೈಕಿ 2,10,730.80 ಚ.ಮೀ ಸ್ವಾಧೀನಪಡಿಸಿಕೊಳ್ಳಲಾಗಿದೆ ಮತ್ತು 2,09,784.65 ಚ.ಮೀ ಜಾಗವನ್ನು ಎಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಉಳಿದ ಪ್ರದೇಶಕ್ಕೆ ಪರಿಹಾರ ಪಾವತಿ ಕಾರ್ಯ ಪ್ರಗತಿಯಲ್ಲಿದೆ.
ಇತ್ತೀಚೆಗೆ ಬಿಎಂಆರ್‌ಸಿಎಲ್ ಹೊರಡಿಸಿರುವ ಪತ್ರದ ಪ್ರಕಾರ, ರೀಚ್-6 (22 ಕಿ.ಮೀ ಉದ್ದದ ಕಾಳೇನ ಅಗ್ರಹಾರ-ಐಐಎಂಬಿ-ನಾಗವಾರ ಹೊಸ ಮಾರ್ಗ) ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಎಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ವಯಾಡಕ್ಟ್‌ಗಾಗಿ 582.25 ಚ.ಮೀ ಹೆಚ್ಚುವರಿ ಪ್ರದೇಶ, ನಾಗವಾರ ಮೆಟ್ರೋ ನಿಲ್ದಾಣಕ್ಕೆ 157.10 ಚ.ಮೀ ಮತ್ತು ಆರ್‌ಎಂಎಸ್ ನಿಲ್ದಾಣಕ್ಕೆ ಅಗತ್ಯವಿರುವ 883 ಚ.ಮೀ ಪ್ರದೇಶಕ್ಕಾಗಿ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ರೀಚ್-3ಸಿ ವಿಸ್ತರಣೆ ಮಾರ್ಗವು ಕೇವಲ 3 ಕಿ.ಮೀ ಉದ್ದವಿದ್ದರೂ (ನಾಗಸಂದ್ರದಿಂದ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ), ಯೋಜನೆಯು ನಿಗದಿತ ಗಡುವನ್ನು ಮೀರಿದೆ. ರೀಚ್-3ಸಿ ಗೆ ಅಗತ್ಯವಿರುವ ಎಲ್ಲ ಜಮೀನನ್ನು ಸ್ವಾಧೀನಪಡಿಸಿಕೊಂಡು ಎಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
18.5 ಕಿ.ಮೀ ಉದ್ದದ ರೀಚ್-5 (ಆರ್.ವಿ. ರಸ್ತೆ-ಬೊಮ್ಮಸಂದ್ರ ಹೊಸ ಮಾರ್ಗ)ಕ್ಕೆ ಅಗತ್ಯವಿರುವ 3,09,379.97 ಚ.ಮೀ ಗಳ ಪೈಕಿ 3,08,232 ಚ.ಮೀ ಸ್ವಾಧೀನಪಡಿಸಿಕೊಂಡು ಎಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. 1147.97 ಚ.ಮೀ ಹೆಚ್ಚುವರಿ ಪ್ರದೇಶ ಸ್ವಾಧೀನಪಡಿಸಿಕೊಳ್ಳುವ ಅಂತಿಮ ಅಧಿಸೂಚನೆಗೆ ಸರಕಾರ ಅನುಮೋದಿಸಿದೆ ಮತ್ತು ಭೂ ಸಮಿತಿಯ ವರದಿಗಾಗಿ ಕಾಯುತ್ತಿದೆ.
ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ರಸ್ತೆ ಮೆಟ್ರೋ ಕಾಮಗಾರಿ ಭರದಿಂದ ಸಾಗುತ್ತಿದೆ. ಆದರೆ ಸ್ವಾಗತ್ ಕ್ರಾಸ್ ಬಳಿ ಮೆಟ್ರೋ ಕಾಮಗಾರಿ ಕುಂಟುತ್ತಾ ಸಾಗಿದೆ. ಇತ್ತೀಚಿನ ವರದಿಯ ಪ್ರಕಾರ, ಹೊಸೂರು ರಸ್ತೆ-ಬೊಮ್ಮನಹಳ್ಳಿ ಮಾರ್ಗ ಪೂರ್ಣಗೊಂಡಿದೆ ಮತ್ತು ಸ್ವಾಗತ್ ಕ್ರಾಸ್ ಮೆಟ್ರೋ ಕಾಮಗಾರಿ ಕೇವಲ ಶೇ. 30ರಷ್ಟು ಪೂರ್ಣಗೊಂಡಿದೆ.
ಸಂಪರ್ಕ ರಸ್ತೆ ನಿರ್ಮಾಣಕ್ಕೆ ಅಡ್ಡಿ
ಅಂಚೆಪಾಳ್ಯ ಮತ್ತು ಇತರ ಗ್ರಾಮಗಳಿಂದ ಜಿಂದಾಲ್-ಪ್ರೆಸ್ಟೀಜ್ ಲೇಔಟ್ ಮೂಲಕ ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು 1885.11 ಚದರ ಮೀಟರ್ ಹೆಚ್ಚುವರಿ ಪ್ರದೇಶ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಹೈಕೋರ್ಟ್ ತಡೆ ನೀಡಿದೆ. ಈ ಆದೇಶದ ವಿರುದ್ಧ ಈಗಾಗಲೇ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.
ಶೆಟ್ಟಿಗೆರೆ ಡಿಪೋಗೆ ಭೂಸ್ವಾಧೀನ ಸಮಸ್ಯೆ
ಶೆಟ್ಟಿಗೆರೆಯಲ್ಲಿ ಡಿಪೋ ನಿರ್ಮಾಣಕ್ಕೆ ಅಗತ್ಯವಿರುವ 23 ಎಕರೆ ಭೂಮಿ ಪೈಕಿ 18 ಎಕರೆ ಭೂಮಿಯನ್ನು ರಾಜ್ಯ ಸರಕಾರ ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಿದೆ. ಉಳಿದ ಐದು ಎಕರೆ ಜಮೀನಿಗೆ ಸಂಬಂಧಿಸಿದಂತೆ ವ್ಯಾಜ್ಯ ಇದ್ದು, ಈ ಸಂಬಂಧ ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಗಳ ತೀರ್ಪು ಬಾಕಿ ಇದೆ. ಆದರೆ, ಡಿಪೋಗೆ ಈಗಾಗಲೇ ನೀಡಿರುವ 18 ಎಕರೆ ಪಕ್ಕದ 4.34 ಎಕರೆ ಭೂಮಿಯನ್ನು ಹಸ್ತಾಂತರಿಸುವಂತೆ ಬಿಎಂಆರ್‌ಸಿಎಲ್ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ. ಈ ಪ್ರಸ್ತಾವನೆ ಸದ್ಯ ಜಿಲ್ಲಾಧಿಕಾರಿಗಳ ಬಳಿ ಬಾಕಿ ಇದೆ.
ಎಷ್ಟು ಪ್ರಮಾಣದ ಕೆಲಸ ಪೂರ್ಣ? (ಶೇಕಡಾವರು)
ಹೊಸರೋಡ್ ನಿಂದ ಬೊಮ್ಮನಹಳ್ಳಿ – 100
ಬೈಯ್ಯಪ್ಪನಹಳ್ಳಿಯಿಂದ ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶ – 96
ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶದಿಂದ ವೈಟ್‌ಫೀಲ್ಡ್ -99
ನಾಯಂಡಹಳ್ಳಿಯಿಂದ ಪಟ್ಟಣಗೆರೆ-100
ಪಟ್ಟಣಗೆರೆಯಿಂದ ಚಲ್ಲಘಟ್ಟ ಡಿಪೋ-99
ನಾಗಸಂದ್ರದಿಂದ ಬಿಐಇಸಿ – 75
ಯಲಚೇನಹಲ್ಳಿ ಕ್ರಾಸ್‌ನಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್ – 99
ಬೊಮ್ಮಸಂದ್ರದಿಂದ ಹೊಸ ರಸ್ತೆ-92
ಬೊಮ್ಮನಹಳ್ಳಿಯಿಂದ ಆರ್.ವಿ. ರಸ್ತೆ – 76
ಕಾಳೇನ ಅಗ್ರಹಾರದಿಂದ ಸ್ವಾಗತ್ ಕ್ರಾಸ್ ರಸ್ತೆ – 30
Read more
[wpas_products keywords=”deal of the day sale today offer all”]