ಹೈದರಾಬಾದ್: ತೆಲುಗು ನಟ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ’ ಸಿನಿಮಾದ ದೃಶ್ಯವೊಂದನ್ನು ಬಳಸಿಕೊಂಡು ಸಾರ್ವಜನಿಕರಲ್ಲಿ ಶೀಟ್ ಬೆಲ್ಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಹೈದರಾಬಾದ್ ಪೊಲೀಸರು ಮುಂದಾಗಿದ್ದಾರೆ.
ಬೊಯಪಾಟಿ ಶ್ರೀನು ನಿರ್ದೇಶನದ ‘ಅಖಂಡ’ ಸಿನಿಮಾ ಡಿ.2ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಲಕೃಷ್ಣ – ಪ್ರಜ್ಞಾ ಜೈಸ್ವಾಲ್ ನಟನೆಗೆ ಅಭಿಮಾನಿಗಳು ಬಹುಪರಾಕ್ ಎಂದಿದ್ದಾರೆ.
ಬಾಲಕೃಷ್ಣ – ಪ್ರಜ್ಞಾ ಒಟ್ಟಿಗೆ ಕಾರಿನಲ್ಲಿ ತೆರಳುತ್ತಿರುವ ವೇಳೆ ಏಕಾಏಕಿ ಬ್ರೇಕ್ ಹಾಕಿದಾಗ ಶೀಟ್ ಬೆಲ್ಟ್ ಧರಿಸದ ಪ್ರಜ್ಞಾ ಅವರ ತಲೆ ಮುಂಭಾಗದ ವಿಂಡ್‌ಶೀಲ್ಡ್‌ಗೆ ತಗುಲಲು ಮುಂದಾಗುತ್ತದೆ. ಇದೇ ಸಂದರ್ಭದಲ್ಲಿ ಕಾರು ಚಲಾಯಿಸುತ್ತಿದ್ದ ಬಾಲಕೃಷ್ಣ, ಆಕೆಗೆ ಸೀಟ್ ಬೆಲ್ಟ್ ಧರಿಸುವಂತೆ ಒತ್ತಾಯಿಸಿ, ‘ಜೀವನ ಅಮೂಲ್ಯ’ ಎಂದು ಹೇಳುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಇದೀಗ ಸಿನಿಮಾದ ಈ ದೃಶ್ಯವನ್ನು ಹೈದರಾಬಾದ್ ಪೊಲೀಸರು #WearASeatBelt ಎಂಬ ಹ್ಯಾಶ್‌ಟ್ಯಾಗ್ ಬಳಸಿ ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ ಚಿತ್ರತಂಡಕ್ಕೂ ಧನ್ಯವಾದ ಸಲ್ಲಿಸಿದ್ದಾರೆ.
ಓದಿ… ಅಮೃತಾ ಹುಟ್ಟುಹಬ್ಬ: ಮುದ್ದಿನ ಮಗಳ ಫೋಟೊ ಹಂಚಿಕೊಂಡು ಶುಭ ಹಾರೈಸಿದ ನಟ ಪ್ರೇಮ್
#HYDTPweBringAwareness
No Matter How Far,
No Matter Whose Car,
Always Buckle Up! #WearASeatBelt #seatbelt
Thank you #NandamuriBalaKrishna Garu & #BoyapatiSrinu Garu for promoting Road Safety. #Akhanda @JtCPTrfHyd pic.twitter.com/Iyhoq0iN2V— Hyderabad Traffic Police (@HYDTP) January 23, 2022
Read More…Source link
[wpas_products keywords=”deal of the day party wear for men wedding shirt”]