Karnataka news paper

ಓರ್ವ ಔರಂಗಜೇಬ್ ಬಂದಾಗಲೆಲ್ಲಾ, ಓರ್ವ ಶಿವಾಜಿ ಎದ್ದು ನಿಲ್ಲುತ್ತಾರೆ: ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸಿದ ಮೋದಿ


Source : PTI

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಕಾರಿಡಾರ್ ನ್ನು ಡಿ.13 ರಂದು ಉದ್ಘಾಟಿಸಿದ್ದು, ಗಂಗಾ ನದಿಯಲ್ಲಿ ಮಿಂದು ವಿಶ್ವನಾಥ ಮಂದಿರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರು, ಸಂತರು, ಗಣ್ಯರನ್ನುದ್ದೇಶಿಸಿ ಮಾತನಾಡಿದ್ದಾರೆ. 

ಭೋಜ್ ಪುರಿ ಭಾಷೆಯಲ್ಲಿ ತಮ್ಮ ಭಾಷಣ ಪ್ರಾರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಈ ವೈಭವೋಪೇತ ಕಾರಿಡಾರ್ ನ್ನು ನಿರ್ಮಿಸಿರುವ ಎಲ್ಲಾ ಕಾರ್ಮಿಕರಿಗೂ ಧನ್ಯವಾದ ತಿಳಿಸುವುದಾಗಿ ಮೋದಿ ಹೇಳಿದ್ದಾರೆ.

“ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲೂ ಕಾರಿಡಾರ್ ನಿರ್ಮಾಣ ಕಾಮಗಾರಿ ಸ್ಥಗಿತಗೊಳ್ಳಲಿಲ್ಲ” ಎಂದು ಮೋದಿ ತಿಳಿಸಿದ್ದಾರೆ. 

ಈ ಹಿಂದೆ ದೇವಾಲಯದ ಪ್ರಾಂಗಣ ಕೇವಲ 3,000 ಚದರ ಅಡಿಯಷ್ಟಿತ್ತು. ಈಗ 5 ಲಕ್ಷ ಚದರ ಅಡಿಯಷ್ಟಾಗಿದೆ. 50,000-75,000 ಮಂದಿ ಭಕ್ತಾದಿಗಳು ದೇವಾಲಯ ಹಾಗೂ ದೇವಾಲಯದ ಪ್ರಾಂಗಣಕ್ಕೆ ಏಕಕಾಲದಲ್ಲಿ ಬರಬಹುದಾಗಿದೆ ಎಂದು ಮೋದಿ ಹೇಳಿದ್ದಾರೆ. 

ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ

ಪಟ್ಟಭದ್ರ ಹಿತಾಸಕ್ತಿಗಳು ವಾರಾಣಸಿಯ ಬಗ್ಗೆ ಆರೋಪಗಳನ್ನು ಹರಡುತ್ತಿದ್ದರು. ಕಾಶಿಯಲ್ಲಿರುವುದು ಒಂದೇ ಸರ್ಕಾರ ಅದು ಕೈಲಿ ಢಮರು ಹಿಡಿದಿರುವ ವಿಶ್ವನಾಥನ ಸರ್ಕಾರ, ಮಹಾದೇವನ ಇಚ್ಛೆ ಇಲ್ಲದೇ ಇಲ್ಲಿಗೆ ಯಾರೂ ಬರಲು ಸಾಧ್ಯವಿಲ್ಲ. ಇಲ್ಲಿ ಏನೇ ಆದರೂ ಅದನ್ನು ಮಹಾದೇವನೇ ಮಾಡಿಸುತ್ತಾನೆ. 

“ವಾರಾಣಾಸಿ ಹಲವು ದಾಳಿಗಳನ್ನು ಎದುರಿಸಿ ಕಾಲದಿಂದ ನಿಂತಿದೆ. ಹಲವು ಸುಲ್ತಾನರು ಬಂದು ಹೋಗಿರುವುದನ್ನು ಕಂಡಿದೆ. ಔರಂಗ್ ಜೇಬ್ ಸಂಸ್ಕೃತಿಯನ್ನು ನಾಶ ಮಾಡಲು ಯತ್ನಿಸಿದ. ಆದರೆ ಈ ದೇಶ ಬೇರೆ ದೇಶಗಳಿಗಿಂತಲೂ ಭಿನ್ನವಾದದ್ದು, ಓರ್ವ ಔರಂಗಜೇಬ ಬಂದಾಗಲೆಲ್ಲಾ ಓರ್ವ ಶಿವಾಜಿ ತಲೆ ಎತ್ತಿ ನಿಲ್ಲುತ್ತಾರೆ. 1700 ರಲ್ಲಿ ಅಹಲ್ಯಾಬಾಯಿ ಹೋಳ್ಕರ್ ಅವರು ದೇವಾಲಯವನ್ನು ಪುನರ್ನಿರ್ಮಾಣ ಮಾಡಿದಾಗ ಕಾಶಿಯಲ್ಲಿ ಹೆಚ್ಚಿನ ಕಾಮಗಾರಿಗಳು ನಡೆದಿದ್ದವು” ಎಂದು ಮೋದಿ ಹೇಳಿದ್ದಾರೆ.



Read more