
ಹೌದು, ರಿಲಯನ್ಸ್ ಡಿಜಿಟಲ್ ಎಲೆಕ್ಟ್ರಾನಿಕ್ಸ್ ರಿಲಯನ್ಸ್ ಡಿಜಿಟಲ್ ಸೇಲ್ ನಡೆಸುತ್ತಿವೆ. ಈ ಸೇಲ್‌ನಲ್ಲಿ ವಿಶೇಷ ಡಿಸ್ಕೌಂಟ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ರಿಲಯನ್ಸ್ ಡಿಜಿಟಲ್ ಯಾವುದೇ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಖರೀದಿಸುವವರಿಗೆ 6% ತ್ವರಿತ ರಿಯಾಯಿತಿಯನ್ನು ಸಹ ನೀಡುತ್ತಿದೆ. ಹಾಗೆಯೇ ಸಿಟಿಬ್ಯಾಂಕ್ ಗ್ರಾಹಕರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಹಾಗಾದ್ರೆ ಈ ಸೇಲ್‌ನಲ್ಲಿ ನಿಮಗೆ ಏನೆಲ್ಲಾ ಆಪರ್ ಸಿಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್‌ನಲ್ಲಿ ಪ್ರತಿ 5,000ರೂ. ಖರೀದಿಯ ಮೇಲೆ 1,000ರೂ. ಮೌಲ್ಯದ ರಿಲಯನ್ಸ್ ಡಿಜಿಟಲ್ ವೋಚರ್‌ಗಳನ್ನು ಪಡೆಯಬಹುದಾಗಿದೆ. ಇನ್ನು ಸಿಟಿಬ್ಯಾಂಕ್ ಗ್ರಾಹಕರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ 10% ತ್ವರಿತ ಆಫರ್ ಕೂಡ ದೊರೆಯಲಿದೆ. ಸದ್ಯ ಈ ಆಫರ್ ಇದೇ 26 ಜನವರಿ 2022 ರವರೆಗೆ ಮಾನ್ಯವಾಗಿರುತ್ತವೆ. ಇನ್ನು ಈ ಸೇಲ್‌ನಲ್ಲಿ ಟಿವಿಗಳು, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ರೆಫ್ರಿಜರೇಟರ್‌ಗಳು, ವಾಷಿಂಗ್ ಮೆಷಿನ್‌ಗಳು, ವೆರಿಯೆಬಲ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ ಡಿಸ್ಕೌಂಟ್ ಸಿಗಲಿದೆ. ಆಫರ್‌ನಲ್ಲಿ ನೀವು ಖರೀದಿಸಬಹುದಾದ ಪ್ರಾಡಕ್ಟ್‌ಗಳ ಬಗ್ಗೆ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಒನ್‌ಪ್ಲಸ್ 9RT 5G ಸ್ಮಾರ್ಟ್‌ಫೋನ್
ಇನ್ನು ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್‌ನಲ್ಲಿ ಒನ್‌ಪ್ಲಸ್ 9RT 5G ಸ್ಮಾರ್ಟ್‌ಫೋನ್ ನಿಮಗೆ ರಿಯಾಯಿತಿ ದರದಲ್ಲಿ ಕೇವಲ 38,999ರೂ.ಗಳಿಗೆ ಲಭ್ಯವಾಗಲಿದೆ. ಜೊತೆಗೆ ಬ್ಯಾಂಕ್ ಕ್ಯಾಶ್‌ಬ್ಯಾಕ್ ಆಫರ್ ಕೂಡ ದೊರೆಯಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 9RT ಸ್ಮಾರ್ಟ್‌ಫೋನ್ 6.62-ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್ f/1.8 ಲೆನ್ಸ್ ಹೊಂದಿದೆ. 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಯುಎಸ್‌ಬಿ ಟೈಪ್-ಸಿ ಮೂಲಕ ಕಂಪನಿಯ ವಾರ್ಪ್ ಚಾರ್ಜ್ 65T ತಂತ್ರಜ್ಞಾನದ ಬಳಸಿ 65W ವೇಗದ ಚಾರ್ಜಿಂಗ್‌ಗೆ ಬೆಂಬಲಿಸಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S20FE 5G
ಸ್ಯಾಮ್‌ಸಂಗ್ ಗ್ಯಾಲಕ್ಸಿ S20FE 5G ಸ್ಮಾರ್ಟ್‌ಫೋನ್ ನಿಮಗೆ ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್‌ನಲ್ಲಿ ಕೇವಲ 34,990ರೂ.ಗಳಿಗೆ ದೊರೆಯಲಿದೆ. ಬೆಲೆ ನಂತರದ ಕ್ಯಾಶ್‌ಬ್ಯಾಕ್ ಮತ್ತು ವಿನಿಮಯ ಬೋನಸ್ ಎಲ್ಲವೂ ಸೇರಿ ಈ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಗ್ಯಾಲಕ್ಸಿ S20FE 5G ಸ್ಮಾರ್ಟ್‌ಫೋನ್ 6.5 ಇಂಚಿನ ಫುಲ್ ಹೆಚ್‌ಡಿ + ಸೂಪರ್ ಅಮೋಲೆಡ್ ಇನ್ಫಿನಿಟಿ-ಒ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಮ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ.ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ.

ಆಪಲ್ ಏರ್‌ಪಾಡ್ಸ್
ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್‌ನಲ್ಲಿ 18,900ರೂ. ಮೂಲಬೆಲೆಯ ಆಪಲ್ ಏರ್‌ಪಾಡ್ಸ್ 6,910ರೂ. ಡಿಸ್ಕೌಂಡ್ ಪಡೆದುಕೊಂಡಿದೆ. ಇದರಿಂದ ಈ ಏರ್‌ಪಾಡ್ಸ್ ಕೇವಲ 11,990ರೂ. ಬೆಲೆಗೆ ಲಭ್ಯವಾಗಲಿದೆ. ಇದಲ್ಲದೆ ಆಯ್ದ ಬ್ಯಾಂಕ್‌ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ 1,500ರೂ. ಕ್ಯಾಶ್‌ಬ್ಯಾಕ್ ಕೂಡ ಲಭ್ಯವಾಗಲಿದೆ.

ಸ್ಯಾಮ್‌ಸಂಗ್ ವಾಚ್3 ಬ್ಲೂಟೂತ್ (41 ಎಂಎಂ)
ಸ್ಯಾಮ್‌ಸಂಗ್ ವಾಚ್3 ಅನ್ನು ಈ ಸೇಲ್‌ನಲ್ಲಿ ಕೇವಲ 14,100ರೂ.ಗಳಿಗೆ ಖರೀದಿಸಬಹುದಾಗಿದೆ. ಈ ಆಫರ್ ಬೆಲೆಯು ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ ಬ್ಯಾಂಕ್ ಕ್ಯಾಶ್‌ಬ್ಯಾಕ್ ಅನ್ನು ಒಳಗೊಂಡಿರುತ್ತದೆ.

ಇದಲ್ಲದೆ ಗೇಮಿಂಗ್ ಲ್ಯಾಪ್‌ಟಾಪ್‌ಗಳ ಮೇಲೂ ಕೂಡ ಈ ಸೇಲ್‌ನಲ್ಲಿ ವಿಶೇಷ ಡಿಸ್ಕೌಂಟ್‌ನಲ್ಲಿ ಲಭ್ಯವಾಗಲಿದೆ. ಅದರಂತೆ HP Victus ಮತ್ತು Pavilion ಗೇಮಿಂಗ್ ಲ್ಯಾಪ್‌ಟಾಪ್ ನಿಮಗೆ 59,999ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ. ಹಾಗೆಯೇ ಲೆನೊವೊ ಕೋರ್ Core i3 8GB ಲ್ಯಾಪ್‌ಟಾಪ್‌ಗಳನ್ನು 37,990ರೂ. ಆರಂಭಿಕ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದರಿಂದ ನಿಮ್ಮ ಖರೀದಿಯ ಮೇಲೆ 12,900 ವರೆಗಿನ ಹೆಚ್ಚುವರಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು BPL 50 ಇಂಚಿನ UHD ಆಂಡ್ರಾಯ್ಡ್ ಟಿವಿ ನಿಮಗೆ 29,999ರೂ.ಗಳಿಗೆ ಲಭ್ಯವಾಗಲಿದೆ.

ರಿಯನ್ಸ್ ಡಿಜಿಟಲ್ ತನ್ನ ವಿಶೇಷ ಸೇಲ್ ಶಾಪಿಂಗ್ ಅನುಭವವನ್ನು ಇನ್ನಷ್ಟು ಲಾಭದಾಯಕವಾಗಿಸಲು, EMI ಮತ್ತು ಸುಲಭ ಹಣಕಾಸುಗಾಗಿ ಆಕರ್ಷಕ ಆಯ್ಕೆಗಳನ್ನು ನೀಡಿದೆ. ಅಲ್ಲದೆ ಗ್ರಾಹಕರು www.reliancedigital.in ನಲ್ಲಿ ಕೂಡ ಶಾಪಿಂಗ್ ಮಾಡಬಹುದು ಮತ್ತು ಇನ್‌ಸ್ಟಾ ಡೆಲಿವರಿ ಪಡೆಯಬಹುದು. ಅದರಲ್ಲೂ ಇನ್‌ಸ್ಟಾ ಡೆಲಿವರಿ ನಿಮಗೆ 3 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ದೊರೆಯಲಿದೆ. ಜೊತೆಗೆ ಗ್ರಾಹಕರು ತಮ್ಮ ಹತ್ತಿರದ ಸ್ಟೋರ್‌ಗಳಿಂದ ಪಿಕ್-ಅಪ್ ಆಯ್ಕೆಗಳನ್ನು ಸಂಗ್ರಹಿಸಬಹುದು. ಆದರೆ ಈ ಆಫರ್‌ಗಳಲ್ಲಿ ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ ಎಂದು ರಿಲಯನ್ಸ್ ಡಿಜಿಟಲ್ ಹೇಳಿದೆ.
Read more…
[wpas_products keywords=”smartphones under 15000 6gb ram”]