ಹೈಲೈಟ್ಸ್:
- ಪೊಲೀಸರ ಬಲೆಗೆ ಆಂಧ್ರದ ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‌ನ ಕಳ್ಳರು
- ಬ್ಯಾಂಕ್ ಗ್ರಾಹಕರನ್ನೇ ಟಾರ್ಗೆಟ್ ಮಾಡಿ ಗ್ಯಾಂಗ್ ನಿಂದ ದರೋಡೆ
- ಆರೋಪಿಗಳಿಂದ 4 ಲಕ್ಷ ರೂ. ನಗದು, ದ್ವಿಚಕ್ರ ವಾಹನ ಜಪ್ತಿ
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಓಜಿಕುಪ್ಪುಂ ಗ್ರಾಮದ ಗಿರಿ ಕುಮಾರ್(39) ಹಾಗೂ ಷಣ್ಮುಗಂ(26) ಬಂಧಿತರು. ಈ ಗ್ಯಾಂಗ್‌ನ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿಗಳಿಂದ 4.10 ಲಕ್ಷ ರೂ. ನಗದು ಮತ್ತು ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಇಂದಿರಾನಗರದ ಬ್ಯಾಂಕೊಂದರ ಬಳಿ ದರೋಡೆಗೆ ಸಂಚು ರೂಪಿಸಿದ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ಬಂಧನದಿಂದ ಕೊತ್ತನೂರು ಠಾಣೆ ವ್ಯಾಧಿಪ್ತಿಯಲ್ಲಿ ಮೂರು, ಮಾರತ್ತಹಳ್ಳಿ, ಅಮೃತಹಳ್ಳಿ, ಯಲಹಂಕ ಹಾಗೂ ಕೋಲಾರ ಟೌನ್ ಠಾಣೆ ವ್ಯಾಪ್ತಿಯ ಏಳು ದರೋಡೆ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು. ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಲ್ಲಿ ಮೂರು ದರೋಡೆ ಪ್ರಕರಣಗಳು ದಾಖಲಾಗಿದ್ದವು.
ರಾಜಾನುಕುಂಟೆಯ ಪ್ರತಿಷ್ಠಿತ ಕಾಲೇಜು ಬಳಿ ಡ್ರಗ್ಸ್ ಮಾರಾಟ : ವಿದ್ಯಾರ್ಥಿಗಳೇ ಟಾರ್ಗೆಟ್
ಹೀಗಾಗಿ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಕೆಲ ಪ್ರಕರಣಗಳಲ್ಲಿಬ್ಯಾಂಕ್ ಸುತ್ತಮುತ್ತಲ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಗಳ ಚಹರೆ ಪತ್ತೆಯಾಗಿತ್ತು. ಈ ಮಾಹಿತಿ ಮೇರೆಗೆ ಇಂದಿರಾನಗರದ ಬ್ಯಾಂಕ್ ಬಳಿ ಗ್ರಾಹಕರ ಸೋಗಿನಲ್ಲಿನಿಂತಿದ್ದವರನ್ನು ಅನುಮಾನದ ಮೇರೆಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಬ್ಯಾಂಕ್ ಗ್ರಾಹಕರೇ ಟಾರ್ಗೆಟ್:
ಓಜಿಕುಪ್ಪಂ ಎಂಬುದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಒಂದು ಗ್ರಾಮ. ಈ ಗ್ರಾಮದ ಬಹುತೇಕ ಮಂದಿ ಕಳ್ಳತನ ಕೃತ್ಯದಲ್ಲಿ ತೊಡಗಿದ್ದಾರೆ. ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಆರೋಪಿಗಳು ಅಪರಾಧ ಕೃತ್ಯವೆಸಗಿ ಪರಾರಿಯಾಗುತ್ತಾರೆ. ಬ್ಯಾಂಕ್‌ಗಳ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಾರೆ.
ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‌ನ ಸದಸ್ಯರು ಯಾವುದೇ ಹಲ್ಲೆ, ಮಾರಕಾಸ್ತ್ರಗಳನ್ನು ಬಳಸದೆಯೇ ಹಣ ದೋಚಿ ಪರಾರಿಯಾಗುತ್ತಾರೆ. ಬ್ಯಾಂಕ್‌ಗಳ ಒಳಗಡೆ ಮತ್ತು ಹೊರಗಡೆ ಗ್ರಾಹಕರ ಸೋಗಿನಲ್ಲಿ ನಿಂತು, ಬ್ಯಾಂಕ್‌ಗಳಿಗೆ ಬರುವ ಗ್ರಾಹಕರ ಚಲನವಲನ ಗಮನಿಸುತ್ತಿದ್ದರು. ನಂತರ ಹಣ ಡ್ರಾ ಮಾಡಿದ ವ್ಯಕ್ತಿ ಕಾರು ಅಥವಾ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರೆ, ಅವರನ್ನು ಹಿಂಬಾಲಿಸಿ, ವಾಹನದ ಬಳಿ 10 ರೂ. ನೋಟು ಎಸೆದು ಗಮನ ಬೇರೆಡೆ ಸೆಳೆದು ಹಣ ದೋಚಿ ಪರಾರಿಯಾಗುತ್ತಿದ್ದರು.
Read more
[wpas_products keywords=”deal of the day sale today offer all”]