Karnataka news paper

3ನೇ ಏಕದಿನ ಪಂದ್ಯ; ಭಾರತದ ಗೆಲುವಿಗೆ 288ರನ್ ಗಳ ಸವಾಲಿನ ಗುರಿ ನೀಡಿದ ದಕ್ಷಿಣ ಆಫ್ರಿಕಾ


Online Desk

ಪಾರ್ಲ್: ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಅಂತಿಮ ಪಂದ್ಯವನ್ನಾಡುತ್ತಿರುವ ಭಾರತ ತಂಡ ಗೆಲ್ಲಲು 288ರನ್ ಗಳ ಗುರಿಯನ್ನು ಬೆನ್ನಟ್ಟಬೇಕಿದೆ.

ಇಂದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್ ಶತಕ ಹಾಗೂ ಮಧ್ಯಮ ಕ್ರಮಾಂಕದ ರಾಸ್ಸಿ ವಾನ್‌ಡರ್ ಡುಸ್ಸೆನ್ ಅರ್ಧಶತಕದ ಕೊಡುಗೆಯ ನೆರವಿನಿಂದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದ ಗೆಲುವಿಗೆ ಭಾರತಕ್ಕೆ 288  ರನ್ ಗುರಿ ನೀಡಿದೆ.

ರವಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿದ್ದ ದಕ್ಷಿಣ ಆಫ್ರಿಕಾ 49.5 ಓವರ್‌ಗಳಲ್ಲಿ 287 ರನ್‌ಗೆ ಸರ್ವಪತನಗೊಂಡಿತು. ದಕ್ಷಿಣ ಆಫ್ರಿಕಾವು 70 ರನ್‌ಗೆ 3 ವಿಕೆಟ್ ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತ್ತಾದರೂ, ಆಗ ತಂಡಕ್ಕೆ ಆಸರೆಯಾದ  ಡಿಕಾಕ್(124 ರನ್, 130 ಎಸೆತ, 12 ಬೌಂಡರಿ, 2 ಸಿಕ್ಸರ್)ಹಾಗೂ ಡುಸ್ಸೆನ್(52 ರನ್, 59 ಎಸೆತ, 4 ಬೌಂ.1 ಸಿ.) 4ನೇ ವಿಕೆಟ್ ಜೊತೆಯಾಟದಲ್ಲಿ 144 ರನ್ ಸೇರಿಸಿದರು.

ಡೇವಿಡ್ ಮಿಲ್ಲರ್(39 ರನ್, 38 ಎಸೆತ) ಹಾಗೂ ಡ್ವೇಯ್ನೆ ಪ್ರಿಟೋರಿಯಸ್(20 ರನ್, 25 ಎಸೆತ)7ನೇ ವಿಕೆಟ್ ಜೊತೆಯಾಟದಲ್ಲಿ 44 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಭಾರತದ ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ ಕೃಷ್ಣ(3-59)ಯಶಸ್ವಿ ಬೌಲರ್ ಎನಿಸಿಕೊಂಡರು. ದೀಪಕ್ ಚಹಾರ್(2-53), ಜಸ್‌ಪ್ರೀತ್ ಬುಮ್ರಾ (2-52)ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಭಾರತವು ಇಂದು ಆಡುವ 11ರ ಬಳಗದಲ್ಲಿ 4 ಬದಲಾವಣೆ ಮಾಡಿದ್ದು, ಸೂರ್ಯಕುಮಾರ್ ಯಾದವ್, ಜಯಂತ್ ಯಾದವ್, ದೀಪಕ್ ಚಹಾರ್‌ಹಾಗೂ ಪ್ರಸಿದ್ದ ಕೃಷ್ಣರನ್ನು ಸೇರಿಸಿಕೊಂಡಿತು.

ಭಾರತಕ್ಕೆ ಆರಂಭಿಕ ಆಘಾತ, 55/1
ಇನ್ನು ಆಫ್ರಿಕಾ ನೀಡಿರುವ 288ರನ್ ಗಳ ಗುರಿಯನ್ನು ಬೆನ್ನು ಹತ್ತಿರುವ ಭಾರತ ತಂಡ 1 ವಿಕೆಟ್ ನಷ್ಟಕ್ಕೆ 55ರನ್ ಗಳಿಸಿದೆ. ನಾಯಕ ಕೆಎಲ್ ರಾಹುಲ್ ಕೇವಲ 9ರನ್ ಗಳಿಸಿ ನ್ಗಿಡಿ ಬೌಲಿಂಗ್ ನಲ್ಲಿ ಔಟ್ ಆದರು, ಬಳಿಕ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ (16ರನ್, 26 ಎಸೆತ), ಶಿಖರ್ ಧವನ್  (29ರನ್, 38 ಎಸೆತ) ಕ್ರೀಸ್ ಕಾಯ್ದುಕೊಂಡಿದ್ದಾರೆ.
 





Read more…

[wpas_products keywords=”deal of the day sports items”]