Karnataka news paper

ವಿಜಯಪುರ: ಪ್ಲಾಸ್ಟಿಕ್ ಅಂಗಡಿಯಲ್ಲಿ ಭೀಕರ ಅಗ್ನಿ ಅವಘಡ, ಇಬ್ಬರು ಸಜೀವ ದಹನ


The New Indian Express

ವಿಜಯಪುರ: ಪ್ಲಾಸ್ಟಿಕ್ ಅಂಗಡಿಗೆ ಬೆಂಕಿ ತಗುಲಿದ ಪರಿಣಾಮ ಇಬ್ಬರು ಸಜೀವವಾಗಿ ದಹನವಾದ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರದ ಬಸವನಬಾಗೇವಾಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ ಪ್ಲಾಸ್ಟಿಕ್ ಅಂಗಡಿಗೆ ಬೆಂಕಿ ಬಿದ್ದು ಅದರೊಳಗಿದ್ದ ಇಬ್ಬರು ಸಜೀವ ದಹನವಾಗಿದ್ದಾರೆ. 

ಮೂಲಗಳ ಪ್ರಕಾರ ಅಂಗಡಿಯಲ್ಲಿದ್ದ ರಾಜಸ್ತಾನ ಮೂಲದ ಅಶೋಕ ದೇಶಮುನೆ (25), ಲಿಂಬಾರಾಜ ದೇಶಮುನೆ (35) ಮೃತರು ಎಂದು ಗುರುತಿಸಲಾಗಿದೆ. 

ಶನಿವಾರ ರಾತ್ರಿ 2ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದ್ದು, ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಷ್ಟರಲ್ಲೇ ಅಂಗಡಿಯೊಳಗೆ ಮಲಗಿದ್ದ ಇಬ್ಬರು ಹೊರಹೋಗಲು ಆಗದೇ ಸುಟ್ಟು ಕರಕಲಾಗಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





Read more

[wpas_products keywords=”deal of the day”]