Karnataka news paper

ಜನಾರ್ದನ ಪೂಜಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಹರಿಕೃಷ್ಣ ಬಂಟ್ವಾಳ್ ವಿರುದ್ಧ ಪ್ರತಿಭಟನೆ


ತೊಕ್ಕೊಟ್ಟು: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ಮುಖಂಡ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ವಿರುದ್ಧ ಸೋಮವಾರ ತೊಕ್ಕೊಟ್ಟಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಹಾಗೂ ಬ್ಲಾಕ್‌ ಹಿಂದುಳಿದ ವರ್ಗಗಳ ವಿಭಾಗ ವತಿಯಿಂದ ಜ. 24ರಂದು ತೊಕ್ಕೊಟ್ಟಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಕೆಪಿಸಿಸಿ ವಕ್ತಾರ, ನ್ಯಾಯವಾದಿ ಅಭಿಷೇಕ್‌ ಉಳ್ಳಾಲ್‌ ಹೇಳಿದರು. ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಹಾಗೂ ಬ್ಲಾಕ್‌ ಹಿಂದುಳಿದ ವರ್ಗಗಳ ವಿಭಾಗ ವತಿಯಿಂದ ತೊಕ್ಕೊಟ್ಟಿನ ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಕೃಷ್ಣ ಬಂಟ್ವಾಳ್‌ ಆಡಿದ ಮಾತುಗಳು ಭಾಜಪದ ನಾಯಕರ ಮಾತೇ? ಅಥವಾ ಅವರ ಸ್ವಂತ ಮಾತೇ? ಅದೇನಿದ್ದರೂ ಅವರನ್ನು ಬಿಜೆಪಿ ಈಗ ಕೊಟ್ಟಿರುವ ಸ್ಥಾನದಿಂದ ವಜಾ ಮಾಡಬೇಕು. ನಿಂದಿಸುವ ಮತುಗಳನ್ನಾಡಿದ್ದಕ್ಕೆ ಅವರು ಕ್ಷಮಾಪಣೆ ಕೇಳಬೇಕು ಎಂದರು.

ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಪೂರ್ವಭಾವಿಯಾಗಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಕೇಂದ್ರ ಸರಕಾರ ನಡೆದುಕೊಂಡಿದ್ದು, ಒಬ್ಬ ಶ್ರೇಷ್ಠ ದಾರ್ಶನಿಕ ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಉದ್ದೇಶಪೂರ್ವಕ ಅವಕಾಶ ಕೊಡದಿರುವುದು ಖಂಡನೀಯ ಎಂದು ಹೇಳಿದರು.
ನಾರಾಯಣಗುರು ಸ್ತಬ್ಧ ಚಿತ್ರ ನಿರಾಕರಣೆ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ, ಪಾದಯಾತ್ರೆ – ಅಭಯಚಂದ್ರ ಜೈನ್‌
ಮಾಜಿ ಮಾಜಿ ಅಧ್ಯಕ್ಷ ಈಶ್ವರ್‌ ಉಳ್ಳಾಲ್‌, ಬ್ಲಾಕ್‌ ಹಿಂದುಳಿದ ವರ್ಗಗಗಳ ವಿಭಾಗ ಅಧ್ಯಕ್ಷ ದೀಪಕ್‌ ಪಿಲಾರ್‌, ಡಿಸಿಸಿ ಸದಸ್ಯ ಸುರೇಶ್‌ ಭಟ್ನಗರ, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಸದಸ್ಯ ರಾಜಾ ಬಂಡಸಾಲೆ ಹಾಗೂ ಸೇವಾ ದಳದ ಅಧ್ಯಕ್ಷ ನಾಗೇಶ್‌ ಶೆಟ್ಟಿ ಉಪಸ್ಥಿತರಿದ್ದರು.

26ರಂದು ಮೆರವಣಿಗೆ
ಮಂಗಳೂರು ಕ್ಷೇತ್ರದಾದ್ಯಂತ ಹಿಂದುಳಿದ ವರ್ಗಗಳ ವಿಭಾಗ ಹಾಗೂ ಕಾಂಗ್ರೆಸ್‌ ಮುಖಂಡರ ಸಹಕಾರದಿಂದ ಜ. 26ರಂದು ನಾರಾಯಣ ಗುರುಗಳ ಸ್ತಬ್ಧಚಿತ್ರದ ಪ್ರದರ್ಶನ ಮೆರವಣಿಗೆ ಮೂಲಕ ಸಾಗಲಿದೆ. ಕೊಲ್ಯ ಬ್ರಹ್ಮಶ್ರೀ ನಾರಾಯಣಗುರುಗಳ ಭಜನಾ ಮಂದಿರದಿಂದ ಬೆಳಗ್ಗೆ ಮೆರವಣಿಗೆ ಹೊರಡಲಿದ್ದು ಕೊಲ್ಯ-ಬಂಡಿಕೊಟ್ಯ, ಸೋಮೇಶ್ವರ, ಬೀರಿ, ಕಿನ್ಯ, ಮಂಜನಾಡಿ, ಗ್ರಾಮಚಾವಡಿ, ಬೋಳಿಯಾರು, ಇರಾ, ಕುರ್ನಾಡು ಮೂಲಕ ಸಂಚರಿಸಿ ಸಂಜೆ ನಾಲ್ಕು ಗಂಟೆಗೆ ತೊಕ್ಕೊಟ್ಟಿನಲ್ಲಿ ಸಮಾರೋಪಗೊಳ್ಳಲಿದೆ ಎಂದು ಡಿಸಿಸಿ ಸದಸ್ಯ ಸುರೇಶ್‌ ಭಟ್ನಗರ ತಿಳಿಸಿದರು.



Read more

[wpas_products keywords=”deal of the day sale today offer all”]