Karnataka news paper

ಸೈಯದ್ ಮೋದಿ ಇಂಟರ್‌ನ್ಯಾಶನಲ್ ಟೈಟಲ್ ಗೆದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು!


Online Desk

ಲಖನೌ: ಭಾರತದ ಸ್ಟಾರ್ ಷಟ್ಲರ್ ಮತ್ತು ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಪಿವಿ ಸಿಂಧು ಸೈಯದ್ ಮೋದಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಫೈನಲ್‌ ಪಂದ್ಯದಲ್ಲಿ ಭಾರತದ ಯುವ ಶಟ್ಲರ್ ಮಾಳವಿಕಾ ಬನ್ಸೋಡ್ ಅವರನ್ನು ಸೋಲಿಸಿದರು.

ಲಕ್ನೋದಲ್ಲಿ ಇಂದು ನಡೆದ ಫೈನಲ್‌ನಲ್ಲಿ ಸಿಂಧು ಸತತ ಗೇಮ್‌ಗಳಲ್ಲಿ ಮಾಳವಿಕಾ ಅವರನ್ನು 21-13, 21-16 ಸೆಟ್‌ಗಳಿಂದ ಸೋಲಿಸಿದರು. ಅಗ್ರ ಶ್ರೇಯಾಂಕದ ಸಿಂಧು ಅವರ ಎರಡನೇ ಸೈಯದ್ ಮೋದಿ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 300 ಈವೆಂಟ್ ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ ಅವರು 2017ರಲ್ಲಿ ಈ ಪ್ರಶಸ್ತಿ ಗೆದ್ದಿದ್ದರು. ಅಂತಿಮ ಪಂದ್ಯ 35 ನಿಮಿಷಗಳ ಕಾಲ ನಡೆಯಿತು.

ಸೈನಾಗೆ ಮೂರು ಬಾರಿ ಪ್ರಶಸ್ತಿ

ಸೈನಾ ನೆಹ್ವಾಲ್ ಸೈಯದ್ ಮೋದಿ ಇಂಟರ್ನ್ಯಾಷನಲ್ನಲ್ಲಿ ಮಹಿಳೆಯರ ಸಿಂಗಲ್ಸ್ ನಲ್ಲಿ ಹೆಚ್ಚು ಬಾರಿ ಪ್ರಶಸ್ತಿಯನ್ನು ಗೆದ್ದ ದಾಖಲೆಯನ್ನು ಹೊಂದಿದ್ದಾರೆ. ಸೈನಾ 2009, 2014 ಮತ್ತು 2015ರಲ್ಲಿ ಪ್ರಶಸ್ತಿ ಗೆದ್ದಿದ್ದರು. ಅದೇ ಸಮಯದಲ್ಲಿ, ಚೇತನ್ ಆನಂದ್ (2009), ಪರುಪಳ್ಳಿ ಕಶ್ಯಪ್ (2015), ಕಿಡಂಬಿ ಶ್ರೀಕಾಂತ್ (2016) ಮತ್ತು ಸಮೀರ್ ವರ್ಮಾ (2017, 2018) ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆದರೆ, ಈ ಬಾರಿ ಕೊರೊನಾದಿಂದಾಗಿ ಪುರುಷರ ಫೈನಲ್ ಪಂದ್ಯ ನಡೆದಿಲ್ಲ.



Read more…

[wpas_products keywords=”deal of the day sports items”]