Online Desk
ನವದೆಹಲಿ: ಪಂಜಾಬ್, ಉತ್ತರ ಪ್ರದೇಶ ಸೇರಿ 5 ರಾಜ್ಯಗಳ ವಿಧಾನಸಭೆಗೆ ಮತದಾನ ಪ್ರಕ್ರಿಯೆ ಪ್ರಾರಂಭಕ್ಕೆ ಇನ್ನು ಕೆಲವು ದಿನಗಳಷ್ಟೇ ಬಾಕಿ ಇದ್ದು ಸಮಾವೇಶ, ರೋಡ್ ಶೋ ಗಳಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಜ.31 ವರೆಗೆ ವಿಸ್ತರಿಸಲಾಗಿದೆ.
ಚುನಾವಣಾ ಆಯೋಗ, ಫೆ.10-14 ರಂದು ನಡೆಯಲಿರುವ ಚುನಾವಣೆಗೆ ಕೆಲವು ಸಡಿಲಿಕೆಗಳನ್ನು ಘೋಷಿಸಿದೆ. ಆದರೆ ರೋಡ್ ಶೋ, ಸಾರ್ವಜನಿಕ ಸಮಾವೇಶಗಳಿಗೆ ಜ.31 ವರೆಗೆ ನಿರ್ಬಂಧಗಳು ಮುಂದುವರೆಯಲಿದೆ ಎಂದು ಹೇಳಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ಹಾಗೂ 5 ರಾಜ್ಯಗಳ ಮುಖ್ಯ ಆರೋಗ್ಯ ಕಾರ್ಯದರ್ಶಿಗಳೊಂದಿಗಿನ ಸಭೆಯ ಬಳಿಕ ಚುನಾವಣಾ ಆಯೋಗ ಈ ನಿರ್ಧಾರವನ್ನು ಪ್ರಕಟಿಸಿದೆ.
ಈ ವರೆಗೂ ಜ.15 ಹಾಗೂ ಜ.22 ವರೆಗೆ ಚುನಾವಣಾ ರಾಜ್ಯಗಳಲ್ಲಿ ನಿರ್ಬಂಧಗಳನ್ನು ವಿಸ್ತರಿಸಲಾಗಿತ್ತು.
ಮೊದಲ ಹಂತದಲ್ಲಿ ಚುನಾವಣೆ ಎದುರಿಸಲಿರುವ ಹಾಗೂ ಎರಡನೇ ಹಂತದಲ್ಲಿ ಚುನಾವಣೆ ಎದುರಿಸಲಿರುವ ಅಭ್ಯರ್ಥಿಗಳಿಗೆ ಅನುಕ್ರಮವಾಗಿ ಜ.28 ಹಾಗೂ ಫೆ.1 ರಿಂದ ಭೌತಿಕ ಸಾರ್ವಜನಿಕ ಸಭೆಗಳನ್ನು ನಡೆಸುವುದಕ್ಕೆ ವಿನಾಯಿತಿಗಳನ್ನು ಆಯೋಗ ಪ್ರಕಟಿಸಿದೆ.
ಮನೆ ಮನೆಗೆ ತೆರಳಿ ಪ್ರಚಾರ ಮಾಡುವುದಕ್ಕೆ ವಿಧಿಸಲಾಗಿದ್ದ 5 ಮಂದಿಯ ಮಿತಿಯನ್ನು ಈಗ ಕೋವಿಡ್-19 ನಿರ್ಬಂಧಗಳ ಸಹಿತ, ಕೆಲವು ಪ್ರದೇಶಗಳಲ್ಲಿ ವಿಡಿಯೋ ವ್ಯಾನ್, ಭದ್ರತಾ ಸಿಬ್ಬಂದಿಗಳನ್ನು ಹೊರತುಪಡಿಸಿ 10 ಮಂದಿಗೆ ಏರಿಕೆ ಮಾಡಲಾಗಿದೆ.
ಬಹಿರಂಗ ಪ್ರದೇಶಗಳಲ್ಲಿ ಮೊದಲ ಹಂತದ ಚುನಾವಣೆ ಎದುರಿಸುತ್ತಿರುವ ಅಭ್ಯರ್ಥಿಗಳು ಭೌತಿಕ ಸಭೆಗಳನ್ನು 500 ಮಂದಿಯೊಂದಿಗೆ ಅಥವಾ ಯಾವ ಸ್ಥಳದಲ್ಲಿ ಸಭೆ ನಡೆಯುವುದೋ ಅಲ್ಲಿಯ ಸಾಮರ್ಥ್ಯದ ಶೇ.50 ರಷ್ಟು ಮಂದಿಗೆ ಪ್ರವೇಶ ಕಲ್ಪಿಸುವುದಕ್ಕೆ ಆಯೋಗ ಅನುಮತಿ ನೀಡಿದೆ.
2 ನೇ ಹಂತದಲ್ಲಿ ಚುನಾವಣೆ ಎದುರಿಸುವ ಅಭ್ಯರ್ಥಿಗಳಿಗೆ ಫೆ.1 ರಿಂದ 12 ವರೆಗೂ ಇದೇ ಸಡಿಲಿಕೆಗಳು ಅನ್ವಯವಾಗಲಿವೆ.
Read more
[wpas_products keywords=”deal of the day”]