Karnataka news paper

ರಾಷ್ಟ್ರಗೀತೆ ವೇಳೆ ಚೀವಿಂಗ್‌ ಗಮ್‌ ಜಗಿದ ಕೊಹ್ಲಿ, ಫ್ಯಾನ್ಸ್‌ ಗರಂ!


ಹೈಲೈಟ್ಸ್‌:

  • ಭಾರತ-ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಒಡಿಐ ಸರಣಿ.
  • ಕೊನೇ ಪಂದ್ಯದಲ್ಲಿ 4 ರನ್‌ಗಳ ವೀರೋಚಿತ ಸೋಲುಂಡ ಟೀಮ್ ಇಂಡಿಯಾ.
  • ಪಂದ್ಯ ಆರಂಭಕ್ಕೂ ಮೊದಲೇ ಬಾರಿ ಟ್ರೋಲಾದ ಮಾಜಿ ನಾತಕ ವಿರಾಟ್ ಕೊಹ್ಲಿ.

ಬೆಂಗಳೂರು: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಹಾಗೂ ಅಂತಿಮ ಹಣಾಹಣಿ ಆರಂಭಕ್ಕೂ ಮೊದಲೇ ಟ್ವಿಟರ್‌ನಲ್ಲಿ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅನಗತ್ಯ ಕಾರಣವೊಂದಕ್ಕೆ ಭಾರಿ ಟ್ರೋಲ್‌ ಆಗಲು ಶುರುವಾಗಿದ್ದರು.

ಕೇಪ್‌ ಟೌನ್‌ನ ನ್ಯೂಲೆಂಡ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 3ನೇ ಏಕದಿನ ಕ್ರಿಕೆಟ್‌ ಪಂದ್ಯದ ಆರಂಭಕ್ಕೂ ಮುನ್ನ ಇತ್ತಂಡಗಳ ರಾಷ್ಟ್ರಗೀತೆಯನ್ನು ವಾಡಿಕೆಯಂತೆ ಹಾಕಲಾಯಿತು. ಈ ಸಂದರ್ಭದಲ್ಲಿ ಭಾರತ ತಂಡದ ಎಲ್ಲಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಬಳಗ ರಾಷ್ಟ್ರಗೀತೆ ಹಾಡುವ ಮೂಲಕ ತಾಯ್ನಾಡಿಗೆ ಗೌರವ ಸೂಚಿಸಿದರೆ, ಮಾಜಿ ನಾಯಕ ವಿರಾಟ್‌ ಕೊಹ್ಲಿ ಚೀವಿಂಗ್‌ ಗಮ್‌ ಜಗಿಯುತ್ತಾ ನಿಂತ್ತಿದ್ದರು. ಇದು ಲೈವ್‌ ಟೆಲಿಕಾಸ್ಟ್‌ ಕೂಡ ಆಗಿದೆ.

ಇದನ್ನು ಕಂಡ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಮಾಜಿ ನಾಯಕನನ್ನು ಸೋಷಿಯಲ್‌ ಮೀಡಿಯಾ ವೇದಿಕೆ ಮೂಲಕ ಹಿಗ್ಗಾ ಮಗ್ಗಾ ಜಾಡಿಸಿದ್ದಾರೆ. ರಾಷ್ಟ್ರಗೀತೆ ವೇಳೆ ಚೀವಿಂಗ್‌ ಜಗಿಯುತ್ತಾ ನಿಂತಿರುವ ಈ ವ್ಯಕ್ತಿ ನಮ್ಮ ದೇಶದ ರಾಯಭಾರಿ ಎಂದೆಲ್ಲಾ ವಿಡಂಬನೆ ಮಾಡಲಾಗಿದೆ. ಕೊಹ್ಲಿ ಅವರ ಈ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ಮಿಂಚಿನ ಸಂಚಲನವನ್ನೇ ಸೃಷ್ಟಿ ಮಾಡಿದೆ.

ಶತಕ ಸಿಡಿಸಿ ಸೆಹ್ವಾಗ್‌ ದಾಖಲೆ ‘ನುಚ್ಚು ನೂರು’ ಮಾಡಿದ ಡಿ’ಕಾಕ್‌!

ಒಡಿಐ ತಂಡದ ನಾಯಕತ್ವ ಕಳೆದುಕೊಂಡ ಕಾರಣ ಭಾರತ ತಂಡದ ಸಾಲಿನಲ್ಲಿ ಮೊದಲಿಗನಾಗಿ ವಿರಾಟ್‌ ಕೊಹ್ಲಿ ನಿಂತಿರಲಿಲ್ಲ. ಆದರೆ ರಾಷ್ಟ್ರಗೀತೆ ಆರಂಭವಾದ ಬಳಿಕ ಕ್ಯಾಮೆರಾ ಸಿಬ್ಬಂದಿ ಹೆಚ್ಚು ಕೊಹ್ಲಿ ಕಡೆಗೆ ಹೆಚ್ಚು ಪೋಕಸ್‌ ಮಾಡಿದ್ದರು. ಎಲ್ಲೋ ಕಳೆದು ಹೋಗಿರುವವರಂತೆ ಕಂಡ ಕೊಹ್ಲಿ ಚೀವಿಂಗ್‌ ಗಮ್‌ ಜಗಿಯುತ್ತಾ ತಮ್ಮದೇ ಲೋಕದಲ್ಲಿ ಮುಳುಗಿದ್ದರು.

ಕ್ಯಾಪ್ಟನ್ಸಿ ಕಳೆದುಕೊಂಡ ಬಳಿಕ ತೀರಾ ಉದಾಸೀನದ ಸ್ವಭಾವ ಪ್ರದರ್ಶಿಸುತ್ತಿರುವ ವಿರಾಟ್‌ ಕೊಹ್ಲಿ ವಿರುದ್ಧ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ನಾಯಕತ್ವ ಇಲ್ಲದ ಕೊಹ್ಲಿ ಅವರಲ್ಲಿ ಈ ಹಿಂದಿನ ಹುರುಪು ಕೂಡ ಕಾಣಲು ಸಿಗುತ್ತಿಲ್ಲ.

ವೈಟ್‌ವಾಷ್‌ ಜಯ ದಾಖಲಿಸಿದ ಹರಿಣ ಪಡೆ
ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ ದೊಡ್ಡ ಮೊತ್ತವನ್ನೇ ಕಲೆಹಾಕಿತು. ಟೀಮ್‌ ಇಂಡಿಯಾ ಬೌಲರ್‌ಗಳನ್ನು ಬಡಿದು ಬೆಂಡೆತ್ತಿದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಹಾಗೂ ಓಪನರ್‌ ಕ್ವಿಟಂನ್‌ ಡಿ’ಕಾಕ್‌ ಮನಮೋಹಕ ಶತಕ ಬಾರಿಸಿದರು. ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ಡಿ’ಕಾಕ್‌, 108 ಎಸೆತಗಳಲ್ಲಿ ತಮ್ಮ ಏಕದಿನ ಕ್ರಿಕೆಟ್‌ ವೃತ್ತಿ ಬದುಕಿನ 17ನೇ ಶತಕ ಬಾರಿಸಿದರು. ಇದು ಭಾರತ ವಿರುದ್ಧ ಅವರು ಗಳಿಸಿದ ದಾಖಲೆಯ 6ನೇ ಒಡಿಐ ಸೆಂಚುರಿ ಆಗಿದೆ. 130 ಎಸೆತಗಳಲ್ಲಿ 124 ರನ್‌ ಗಳಿಸಿ ಡಿ’ಕಾಕ್‌ ಔಟ್‌ ಆದ ಬಳಿಕ ಕೊಂಚ ಕಮ್‌ಬ್ಯಾಕ್‌ ಮಾಡಿದ ಭಾರತ ತಂಡ ಎದುರಾಳಿಯನ್ನು 49.5 ಓವರ್‌ಗಳಲ್ಲಿ 287 ರನ್‌ಗಳಿಗೆ ಆಲ್‌ಔಟ್‌ ಮಾಡಿತು.

ಮತ್ತೆ ಕೈಕೊಟ್ಟ ಮಧ್ಯಮ ಕ್ರಮಾಂಕ
ಸರಣಿಯುದ್ದಕ್ಕೂ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯ ಭಾರಿ ತಲೆನೋವಾಗಿ ಪರಿಣಮಿಸಿತು. ಅಗ್ರ ಕ್ರಮಾಂಕದಲ್ಲಿ ಶಿಖರ್‌ ಧವನ್‌ (61) ಮತ್ತು ವಿರಾಟ್‌ ಕೊಹ್ಲಿ (64) ಉತ್ತಮ ಆರಂಭ ಕೊಟ್ಟರೂ, ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್‌ (0), ಶ್ರೇಯಸ್‌ ಅಯ್ಯರ್‌ (26) ಮತ್ತು ಸೂರ್ಯಕುಮಾರ್‌ ಯಾದವ್‌ (39) ವೈಫಲ್ಯದಿಂದ ಮತ್ತೆ ನಿರಾಶೆ ಅನುಭವಿಸುವಂತ್ತಾಯಿತು. ಇನಿಂಗ್ಸ್‌ ಅಂತ್ಯದಲ್ಲಿ ದೀಪಕ್‌ ಚಹರ್‌ 34 ಎಸೆತಗಳಲ್ಲಿ 54 ರನ್‌ ಸಿಡಿಸಿದರೂ ತಂಡ 4 ರನ್‌ಗಳ ಸಂತರದಲ್ಲಿ ಸೋಲೊಪ್ಪಿಕೊಂಡಿತು.

ಸಂಕ್ಷಿಪ್ತ ಸ್ಕೋರ್‌
ದಕ್ಷಿಣ ಆಫ್ರಿಕಾ: 49.5 ಓವರ್‌ಗಳಲ್ಲಿ 287ಕ್ಕೆ ಆಲ್‌ಔಟ್‌ (ಕ್ವಿಂಟನ್‌ ಡಿ’ಕಾಕ್ 124, ರಾಸಿ ವ್ಯಾನ್‌ ಡೆರ್‌ ಡುಸೆನ್‌ 52, ಡೇವಿಡ್‌ ಮಿಲ್ಲರ್‌ 39; ಪ್ರಸಿಧ್‌ ಕೃಷ್ಣಾ 59ಕ್ಕೆ 3).
ಭಾರತ: 49.2 ಓವರ್‌ಗಳಲ್ಲಿ 283ಕ್ಕೆ ಆಲ್‌ಔಟ್‌ (ಶಿಖರ್‌ ಧವನ್‌ 61, ವಿರಾಟ್‌ ಕೊಹ್ಲಿ 65, ಸೂರ್ಯಕುಮಾರ್‌ 39, ದೀಪಕ್‌ ಚಹರ್‌ 54; ಲುಂಗಿ ಎನ್ಗಿಡಿ 58ಕ್ಕೆ 3, ಆಂಡಿಲ್‌ ಫೆಹ್ಲುಕ್ವಾಯೊ 40ಕ್ಕೆ 3).
ಪಂದ್ಯ ಮತ್ತು ಸರಣಿ ಶ್ರೇಷ್ಠ: ಕ್ವಿಂಟನ್‌ ಡಿ’ಕಾಕ್



Read more

[wpas_products keywords=”deal of the day gym”]