Karnataka news paper

ಕೆನಡಾದಲ್ಲಿ ಚಳಿಗೆ ನಾಲ್ವರು ಭಾರತೀಯರ ಬಲಿ: ಗುಜರಾತ್‌ನಲ್ಲಿ ಆತಂಕ


ಹೈಲೈಟ್ಸ್‌:

  • ಅಮೆರಿಕ- ಕೆನಡಾ ಗಡಿಯಲ್ಲಿ ಮಾನವ ಕಳ್ಳಸಾಗಣೆ ವ್ಯಾಪಕ ಚಟುವಟಿಕೆ
  • ಉದ್ಯೋಗ ಅರಸಿ ಅಕ್ರಮ ವಲಸೆ ಹೋಗವವರಲ್ಲಿ ಭಾರತೀಯರೂ ಇದ್ದಾರೆ
  • ಒಂದೇ ಕುಟುಂಬದ ನಾಲ್ವರು ವಲಸೆ ವೇಳೆ ಚಳಿ ತಡೆದುಕೊಳ್ಳಲಾಗದೆ ಸಾವು
  • ಮೃತಪಟ್ಟವರು ಗುಜರಾತ್‌ನವರಾಗಿದ್ದು, ಅವರ ಗ್ರಾಮದಲ್ಲಿ ಆತಂಕ

ಅಹಮದಾಬಾದ್‌: ಕೆನಡಾ-ಅಮೆರಿಕ ಗಡಿಯಲ್ಲಿ ಅತಿಯಾದ ಚಳಿಯಿಂದ ಮೃತಪಟ್ಟ ನಾಲ್ವರು ಭಾರತೀಯರು ಗುಜರಾತ್‌ನ ಗಾಂಧಿನಗರ ಜಿಲ್ಲೆ ಕಲೋಲ್‌ ತಹಸೀಲ್‌ ವ್ಯಾಪ್ತಿಯವರು ಎಂದು ತಿಳಿದುಬಂದಿದೆ. ಕಳೆದ ಮಂಗಳವಾರ ಕೆನಡಾದಿಂದ ಅಮೆರಿಕ ಗಡಿ ಪ್ರವೇಶಿಸುವಾಗ ಅತಿಯಾದ ಚಳಿಯಿಂದ ಇಬ್ಬರು ತರುಣರು, ಒಬ್ಬ ಬಾಲಕಿ ಹಾಗೂ ಒಂದು ಶಿಶು ಮೃತಪಟ್ಟಿದ್ದಾರೆ. ಇವರದ್ದೇ ತಂಡದ ಇನ್ನೂ ಮೂವರು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಡಿ ದಾಟುವಾಗ ಅಮೆರಿಕದ ಪೊಲೀಸರು ಏಳು ಭಾರತೀಯರನ್ನು ಬಂಧಿಸಿದ್ದು, ಇವರು ನೀಡಿದ ಮಾಹಿತಿಯಿಂದಾಗಿ ಮೃತರು ಗುಜರಾತ್‌ನವರು ಎಂಬುದು ಗೊತ್ತಾಗಿದೆ. ಆದರೆ, ಬಂಧಿತರ ಕುರಿತು ಮಾಹಿತಿ ನೀಡಲು ಅಮೆರಿಕ ಅಧಿಕಾರಿಗಳು ನಿರಾಕರಿಸಿದ್ದಾರೆ. ಕೆನಡಾ-ಅಮೆರಿಕ ಗಡಿಯಲ್ಲಿ ಮಾನವ ಕಳ್ಳಸಾಗಣೆಯೂ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಆರೋಪದಲ್ಲಿ ಸ್ಟೀವ್‌ ಶಾಂಡ್‌ (47) ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ಈ ನಾಲ್ವರು ಒಂದೇ ಕುಟುಂಬದವರಾಗಿದ್ದು, ಇದು ಗುಜರಾತ್‌ನ ಗಾಂಧಿನಗರ ಜಿಲ್ಲೆಯಲ್ಲಿರುವ ಅವರ ಹಳ್ಳಿಯಲ್ಲಿ ತೀವ್ರ ಆತಂಕ ಮೂಡಿಸಿದೆ. ಇತ್ತೀಚೆಗಷ್ಟೇ ಕೆನಡಾಕ್ಕೆ ತೆರಳಿದ್ದ ತಮ್ಮ ಸಂಬಂಧಿಯೊಬ್ಬರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ನಿವಾಸಿಯೊಬ್ಬರು ತಿಳಿಸಿದ್ದಾರೆ.

ವಿಪರೀತ ಹಿಮ ಸುರಿಯುವಿಕೆ ಹಾಗೂ ಚಳಿಯ ನಡುವೆ ಅಮೆರಿಕ- ಕೆನಡಾ ಗಡಿ ದಾಟುವ ಪ್ರಯತ್ನದಲ್ಲಿ ಹೆಪ್ಪಗಟ್ಟಿ ಮಗು ಸೇರಿದಂತೆ ನಾಲ್ವರು ಗುಜರಾತಿಗಳ ಸಾವು, ಡಿಂಗುಚಾ ಗ್ರಾಮದಲ್ಲಿ ಕಳವಳಕ್ಕೆ ಕಾರಣವಾಗಿದೆ. ಡಿಂಗುಚಾ ಗ್ರಾಮದ ಕುಟುಂಬವೊಂದು ಕೆನಡಾಕ್ಕೆ ಹೊರಟಿದ್ದರ ಮಾಹಿತಿ ಬಂದಿದೆ. ಆದರೆ ಅಲ್ಲಿ ಚಳಿಯಿಂದ ಮೃತಪಟ್ಟವರ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಅವರು ಇದೇ ಗ್ರಾಮದವರೇ ಎನ್ನುವುದು ಖಾತರಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಕುಲದೀಪ್ ಆರ್ಯ ತಿಳಿಸಿದ್ದಾರೆ.

ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಅಥವಾ ಗೃಹ ಸಚಿವಾಲಯದಿಂದ ಯಾವುದೇ ಅಧಿಕೃತ ಸಂದೇಶ ಬಂದಿಲ್ಲ ಎಂದು ಹೇಳಿದ್ದಾರೆ. ಜಸ್ವಂತ್ ಪಟೇಲ್ ಎಂಬುವವರ ಸಂಬಂಧಿಯೊಬ್ಬರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕಲೋಲ್ ತಾಲೂಕಿನಿಂದ ಕೆನಡಾಕ್ಕೆ ಪ್ರಯಾಣ ಬೆಳೆಸಿತ್ತು. ಆದರೆ ಈ ವರೆಗೂ ಅವರು ಸಂಪರ್ಕಕ್ಕೆ ಸಿಕ್ಕಿದ್ದಲ್ಲ.

‘ಅಮೆರಿಕ- ಕೆನಡಾ ಗಡಿ ದಾಟುವ ಪ್ರಯತ್ನದಲ್ಲಿ ಕುಟುಂಬವೊಂದರ ನಾಲ್ವರು ಸದಸ್ಯರು ಮೃತಪಟ್ಟಿರುವ ಸುದ್ದಿಯಿಂದ ಬಮಗೆ ಬಹಳ ಆತಂಕವಾಗಿದೆ. ನನ್ನ ಸಂಬಂಧಿ ಇತ್ತೀಚೆಗೆ ಹೆಂಡತಿ ಹಾಗೂ ಇಬ್ಬರು ಮಕ್ಕಳ ಜತೆಗೆ ಕೆನಡಾಕ್ಕೆ ತೆರಳಿದ್ದರು. ಕಳೆದ ಮೂರು ನಾಲ್ಕು ದಿನಗಳಿಂದ ಅವರೊಂದಿಗೆ ಮಾತನಾಡಲು ಸಾಧ್ಯವಾಗಿಲ್ಲ’ ಎಂದು ಜಸ್ವಂತ್ ಹೇಳಿದ್ದಾರೆ.

‘ಜನರು ಏಕೆ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾಗಳಿಗೆ ಹೋಗುತ್ತಿದ್ದಾರೆ? ಏಕೆಂದರೆ ಇಲ್ಲಿ ಅವಕಾಶಗಳ ಕೊರತೆ ಇದೆ. ಅವರು ಕಠಿಣವಾಗಿ ಪರಿಶ್ರಮ ಪಟ್ಟರೂ ಕೆಲಸ ಸಿಗುವುದು ಬಹಳ ಕಷ್ಟ. ಅದಕ್ಕಾಗಿ ಅವರು ಭಾರಿ ದೊಡ್ಡ ಹಣವನ್ನು ತೆರುತ್ತಿದ್ದಾರೆ. ಅಮೆರಿಕಕ್ಕೆ ವಲಸೆ ಹೋಗಲು ಸಾಕಷ್ಟು ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ’ ಎಂದು ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಹೇಳಿದ್ದಾರೆ.



Read more

[wpas_products keywords=”deal of the day sale today offer all”]