ಹೈಲೈಟ್ಸ್:
- ಮಂದಿರ, ಮಸೀದಿ, ಚರ್ಚ್‌ಗಳಲ್ಲಿ ಕಾಂಗ್ರೆಸ್‌ನಿಂದ ಆಣೆ ಪ್ರಮಾಣ
- ಗೆದ್ದ ಬಳಿಕ ಬೇರೆ ಪಕ್ಷಗಳಿಗೆ ವಲಸೆ ಹೋಗುವುದಿಲ್ಲ ಎಂದು ಪ್ರಮಾಣ
- ಅಭ್ಯರ್ಥಿಗಳಿಂದ ಅಫಿಡವಿಟ್‌ಗೆ ಸಹಿ ಹಾಕಿಸಿಕೊಂಡಿರುವ ಎಎಪಿ
- ಗೋವಾದಲ್ಲಿ ಮುಖಂಡರ ಪಕ್ಷಾಂತರವೇ ಪಕ್ಷಗಳಿಗೆ ತಲೆನೋವು
34 ಅಭ್ಯರ್ಥಿಗಳನ್ನು ಭಾನುವಾರ ಅವರವರ ನಂಬಿಕೆಯಂತೆ ಮಂದಿರ, ಮಸೀದಿ ಮತ್ತು ಚರ್ಚ್‌ಗಳಿಗೆ ಕರೆದೊಯ್ದು ಪ್ರಮಾಣ ಮಾಡಿಸಲಾಗಿದೆ. ”ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದ ನಂತರ ನಾನು ಬೇರೆ ಪಕ್ಷಗಳಿಗೆ ವಲಸೆ ಹೋಗುವುದಿಲ್ಲ. ಕಾಂಗ್ರೆಸ್‌ನಲ್ಲಿಯೇ ಇದ್ದು ಜನಸೇವೆ ಮಾಡುತ್ತೇನೆ,” ಎಂದು ಪ್ರತಿಯೊಬ್ಬ ಅಭ್ಯರ್ಥಿಯೂ ಪ್ರಮಾಣ ಮಾಡಿದ್ದಾರೆ.
40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ 2017ರಲ್ಲಿ ಕಾಂಗ್ರೆಸ್ 17 ಸ್ಥಾನ ಗೆದ್ದು ಏಕೈಕ ದೊಡ್ಡ ಪಕ್ಷ ಎನ್ನಿಸಿತ್ತು. ಅಂದು ನಾಲ್ಕು ಶಾಸಕರನ್ನು ಸೆಳೆದಿದ್ದರೆ ಕಾಂಗ್ರೆಸ್ ಸರಕಾರ ರಚಿಸುತ್ತಿತ್ತು. ಆದರೆ, ಆದದ್ದು ಅದಕ್ಕೆ ತದ್ವಿರುದ್ಧ. ಕಾಂಗ್ರೆಸ್‌ನ 10 ಶಾಸಕರು ಸಾಮೂಹಿಕವಾಗಿ ಬಿಜೆಪಿಗೆ ಪಕ್ಷಾಂತರ ಮಾಡಿದರು. ಅಂದು ಗೆದ್ದಿದ್ದ 17 ಶಾಸಕರ ಪೈಕಿ ಈಗ ಪಕ್ಷದಲ್ಲಿ ಉಳಿದವರು ಇಬ್ಬರು ಮಾತ್ರ!
”ಗೋವಾದ ಜನರಿಗೆ ಕಾಂಗ್ರೆಸ್‌ನ ಮೇಲೆ ಭರವಸೆ ಇದೆ. ಆದರೆ ಗೆಲ್ಲುವ ಅಭ್ಯರ್ಥಿಗಳು ಮುಂದೆಯೂ ಆಮಿಷಗಳಿಗೆ ಮಣಿಯದೇ ಪಕ್ಷದಲ್ಲಿ ಉಳಿಯುತ್ತಾರೆ ಎನ್ನುವ ಕುರಿತು ಖಾತ್ರಿ ಬೇಕಿದೆ. ಅದಕ್ಕಾಗಿಯೇ ಈ ಬಾರಿ ಅಭ್ಯರ್ಥಿಗಳನ್ನು ದೇವರ ಬಳಿಗೆ ಕರೆದೊಯ್ದು ಪ್ರಮಾಣ ಮಾಡಿಸಲಾಯಿತು,” ಎಂದು ಗೋವಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಛೋಡಂಕರ್ ತಿಳಿಸಿದರು.
ಅಭ್ಯರ್ಥಿಗಳನ್ನು ದೇವಸ್ಥಾನಗಳಿಗೆ ಕರೆದೊಯ್ದ ಸಂದರ್ಭ ಅವರ ಜತೆಗೆ ಕಾಂಗ್ರೆಸ್ ಹಿರಿಯ ಮುಖಂಡ ಪಿ. ಚಿದಂಬರಂ ಕೂಡ ಇದ್ದರು. ಅಷ್ಟಕ್ಕೂ ಗೋವಾದಲ್ಲಿ ಇಂತಹ ಆಣೆ ಪ್ರಮಾಣ ಮಾಡಿಸಿದ್ದು ಇದೇ ಮೊದಲೇನು ಅಲ್ಲ. ಕಳೆದ ವರ್ಷ ಜನವರಿಯಲ್ಲಿ ಗೋವಾ ಫಾರ್ವರ್ಡ್ ಪಾರ್ಟಿ(ಜಿಎಫ್‌ಪಿ) ಕೂಡ ತನ್ನ ಶಾಸಕರಿಂದ ಇಂಥದ್ದೇ ಪ್ರಮಾಣ ಮಾಡಿಸಿ ಗಮನ ಸೆಳೆದಿತ್ತು. ಮೊದಲು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಸರಕಾರದಲ್ಲಿ ಭಾಗಿದಾರನಾಗಿದ್ದ ಜಿಎಫ್‌ಪಿ, ನಂತರ ಕಾಂಗ್ರೆಸ್‌ನ ಭಿನ್ನರು ಬಿಜೆಪಿ ಸೇರಿದ ಬಳಿಕ ಮೂಲೆಗುಂಪಾಗಿತ್ತು. ಮೈತ್ರಿಯಿಂದ ಹೊರದೂಡಲ್ಪಟ್ಟ ಬಳಿಕ ಆಕ್ರೋಶಗೊಂಡ ಜಿಎಫ್‌ಪಿ, ಬಿಜೆಪಿಯನ್ನು ಮಣಿಸುವ ಶಪಥ ಮಾಡಿತ್ತು.
2022ರ ಚುನಾವಣೆಯಲ್ಲಿ ತಮ್ಮ ಪಕ್ಷದ ಯಾವೊಬ್ಬ ಶಾಸಕನೂ ಬಿಜೆಪಿಯನ್ನು ಬೆಂಬಲಿಸಬಾರದು ಎಂದು ಪ್ರಮಾಣ ಮಾಡಿಸಿಕೊಂಡಿತ್ತು. ದೇವಸ್ಥಾನದ ಮುಂದೆ ನಡೆದ ಈ ಆಣೆ ಪ್ರಮಾಣದ ಹೊರತಾಗಿಯೂ ಜಿಎಫ್‌ಪಿಯ ಶಾಸಕ ಜಯೇಶ್ ಸಲ್ಗಾಂಕರ್ ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಈ ಬಾರಿ ರಾಜ್ಯದಲ್ಲಿ ರಂಗ ಪ್ರವೇಶ ಮಾಡಿರುವ ಆಮ್ ಆದ್ಮಿ ಪಾರ್ಟಿ ಕೂಡ ಪಕ್ಷಾಂತರ ಹಾವಳಿ ಬಗ್ಗೆ ಆತಂಕಕ್ಕೊಳಗಾಗಿದೆ. ಪಕ್ಷದ ಟಿಕೆಟ್ ಪಡೆದ ಅಭ್ಯರ್ಥಿಗಳಿಂದ ಅದು ಪಕ್ಷಾಂತರ ಮಾಡದಿರುವ ಕುರಿತ ಅಫಿಡವಿಟ್‌ಗೆ ಸಹಿ ಹಾಕಿಸಿಕೊಂಡಿದೆ.
Read more
[wpas_products keywords=”deal of the day sale today offer all”]