Karnataka news paper

ಜಿಯೋ, ಟಾಟಾಸ್ಕೈ, ಎಸಿಟಿ: 150Mbps ವೇಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ ಮಾಹಿತಿ!


|

ಪ್ರಸ್ತುತ ಆನ್‌ಲೈನ್‌ ಕೆಲಸಗಳಿಗೆ ಇಂಟರ್ನೆಟ್‌ ಅವಶ್ಯ ಆಗಿದೆ. ನೆಟ್‌ ಇಲ್ಲದಿದ್ದರೇ ಆನ್‌ಲೈನ್‌ ಕೆಲಸಗಳು ನಡೆಯೋದೆ ಇಲ್ಲ. ಈ ನಿಟ್ಟಿನಲ್ಲಿ ಬಹುತೇಕ ಬಳಕೆದಾರರು ಹೆಚ್ಚು ವೇಗದ ಇಂಟರ್ನೆಟ್ ಸಂಪರ್ಕ್ ಪಡೆಯಲು ಮುಂದಾಗುತ್ತಾರೆ. ಅದಕ್ಕಾಗಿ ಬ್ರಾಡ್‌ಬ್ಯಾಂಡ್‌ ಯೋಜನೆಗಳತ್ತ ಮುಖ ಮಾಡುತ್ತಾರೆ. ಇನ್ನು ಗ್ರಾಹಕರನ್ನು ಸೆಳೆಯಲು ಜಿಯೋ, ಟಾಟಾಸ್ಕೈ, ಎಸಿಟಿ ಸೇರಿದಂತೆ ಏರ್‌ಟೆಲ್ ಹಾಗೂ ಬಿಎಸ್‌ಎನ್‌ಎನ್‌ ಭಿನ್ನ ವೇಗದ ಯೋಜನೆ ಪರಿಚಯಿಸಿವೆ.

ಜಿಯೋ, ಟಾಟಾಸ್ಕೈ, ಎಸಿಟಿ: 150Mbps ವೇಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ ಮಾಹಿತಿ!

ಹೌದು, ಜಿಯೋ, ಟಾಟಾಸ್ಕೈ, ಎಸಿಟಿ ಬ್ರಾಡ್‌ಬ್ಯಾಂಡ್‌ ಕಂಪನಿಗಳು ಭಿನ್ನ ವೇಗದಲ್ಲಿ ಆಕರ್ಷಕ ಯೋಜನೆಗಳನ್ನು ಪರಿಚಯಿಸಿವೆ. ಆ ಪೈಕಿ 150 Mbps ವೇಗದ ಬ್ರಾಡ್‌ಬ್ಯಾಂಡ್‌ ಯೋಜನೆಗಳು ಗ್ರಾಹಕರನ್ನು ಸೆಳೆದಿವೆ. ಹಾಗೆಯೇ 150 Mbps ವೇಗದ ಬ್ರಾಡ್‌ಬ್ಯಾಂಡ್‌ ಬಜೆಟ್‌ ಬೆಲೆಯಲ್ಲಿ ಕಾಣಿಸಿಕೊಂಡಿವೆ. ಹಾಗಾದರೇ ಜಿಯೋ, ಟಾಟಾಸ್ಕೈ, ಎಸಿಟಿ ಕಂಪನಿಗಳ 150 Mbps ವೇಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ ಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋಫೈಬರ್ 150 Mbps ವೇಗದ ಡೇಟಾ ಯೋಜನೆ

ಜಿಯೋಫೈಬರ್ 150 Mbps ಇಂಟರ್ನೆಟ್ ವೇಗದ ಡೇಟಾ ಯೋಜನೆಯ ಬೆಲೆಯು 999ರೂ. ಆಗಿದೆ. ಈ ಯೋಜನೆಯು 30 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಹಾಗೆಯೇ ಈ ಯೋಜನೆಯಲ್ಲಿ FUP ಮಿತಿಯನ್ನು 3300Gb ಅಥವಾ 3.3TB ಡೇಟಾ ಪ್ರಯೋಜನ ಲಭ್ಯ. ಜಿಯೋಫೈಬರ್ ನಿಂದ 150 Mbps ಯೋಜನೆಯನ್ನು ಬಳಸುವುದರಿಂದ, ಗ್ರಾಹಕರು ಬೇರೆ ಬೇರೆ ಸಾಧನಗಳಲ್ಲಿ ತಡೆರಹಿತ ಇಂಟರ್ನೆಟ್‌ ಸೇವೆ ಪಡೆಯಬಹುದು.

ಜಿಯೋ, ಟಾಟಾಸ್ಕೈ, ಎಸಿಟಿ: 150Mbps ವೇಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ ಮಾಹಿತಿ!

ಇನ್ನು ಈ ಯೋಜನೆಯ ಜೊತೆಗೆ ಬಳಕೆದಾರರು ಅಮೆಜಾನ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, Eros ನವ್, ಸೋನಿ ಲೈವ್ ಸೇರಿದಂತೆ ಇತರೆ ಕೆಲವು ಪ್ರಮುಖ ಓವರ್-ದಿ-ಟಾಪ್ (OTT) ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಗಳನ್ನು ಸಹ ಪಡೆಯುತ್ತಾರೆ. ಅಮೆಜಾನ್ ವಿಡಿಯೋ ವೀಡಿಯೊಗೆ ಬಂಡಲ್ ಮಾಡಿದ ಚಂದಾದಾರಿಕೆಯು ಒಂದು ವರ್ಷದ ಅವಧಿಗೆ ಬರುತ್ತದೆ. ಈ ಪ್ಲಾನ್‌ನ ಬೆಲೆಯು ಜಿಎಸ್‌ಟಿಯನ್ನು ಹೊರತುಪಡಿಸಿದೆ.

ಟಾಟಾ ಸ್ಕೈ 150 Mbps ವೇಗದ ಡೇಟಾ ಯೋಜನೆ
ಪ್ರಮುಖ ಬ್ರಾಡ್‌ಬ್ಯಾಂಡ್ ಪೂರೈಕೆದಾರರಲ್ಲಿ ಒಂದಾದ ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಭಿನ್ನ ವೇಗದಲ್ಲಿ ಯೋಜನೆಗಳನ್ನು ಹೊಂದಿದೆ. ಆ ಪೈಕಿ 150 Mbps ಇಂಟರ್ನೆಟ್ ವೇಗದ ಯೋಜನೆ ಬೆಲೆಯು 1,050 ರೂ. ಆಗಿದೆ. ಈ ಯೋಜನೆಯು ಒಂದು ತಿಂಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಯೋಜನೆಯಲ್ಲಿ ಡೇಟಾ ಮಿತಿಯು 3300GB ಅಥವಾ 3.3TB ಆಗಿದ್ದು, ನಂತರ ಬಳಕೆದಾರರು 3 Mbps ವೇಗದಲ್ಲಿ ಇಂಟರ್ನೆಟ್ ಅನ್ನು ಪಡೆಯುವರು. ಆದರೆ, ಯಾವುದೇ OTT ಚಂದಾದಾರಿಕೆಗಳನ್ನು ನೀಡುವುದಿಲ್ಲ. ವೈ-ಫೈ ರೂಟರ್‌ನೊಂದಿಗೆ ತಜ್ಞರು ಮತ್ತು ಉಚಿತ ರೂಟರ್ ಬ್ಯಾಂಡ್ ONT ಮೂಲಕ ಉಚಿತ ಇನ್‌ಸ್ಟಾಲೇಶನ್ ಲಭ್ಯ ಇದೆ. 150 Mbps ಯೋಜನೆಯ 3 ತಿಂಗಳ ಅವಧಿಗೆ 3,000 ರೂ, ಆರು ತಿಂಗಳ ಅವಧಿಗೆ 5,100 ಮತ್ತು ಒಂದು ವರ್ಷದ ಮಾನ್ಯತೆಯ ಅವಧಿಗೆ 9,600 ರೂ. ದರ ಹೊಂದಿದೆ.

ಜಿಯೋ, ಟಾಟಾಸ್ಕೈ, ಎಸಿಟಿ: 150Mbps ವೇಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ ಮಾಹಿತಿ!

ಎಸಿಟಿ – ACT 150 Mbps ವೇಗದ ಡೇಟಾ ಯೋಜನೆ

ಜನಪ್ರಿಯ ಇಂಟರ್ನೆಟ್ ಸೇವಾ ಪೂರೈಕೆದಾರರು ACT ಬ್ಲೇಜ್ ಎಂಬ 150 Mbps ಅನಿಯಮಿತ ಡೇಟಾ ಯೋಜನೆಯನ್ನು ಒದಗಿಸುತ್ತದೆ. ಬಳಕೆದಾರರು ACT ಬ್ಲೇಜ್ ಪ್ಯಾಕ್ ಅನ್ನು ಒದಗಿಸುವವರಿಂದ ಮಾಸಿಕ ರೂ 1,085 ವೆಚ್ಚದಲ್ಲಿ ಪಡೆಯಬಹುದು. ವಿಧಿಸಲಾದ FUP ಡೇಟಾ ಮಿತಿಯು 1500GB ಪೋಸ್ಟ್ ಆಗಿದ್ದು, ಇಂಟರ್ನೆಟ್ 1 Mbps ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಈ ಪ್ಯಾಕ್‌ನೊಂದಿಗೆ ಕೆಲವು ಓವರ್ ದಿ ಟಾಪ್ (OTT) ಪ್ಲಾಟ್‌ಫಾರ್ಮ್‌ಗಳು ಮತ್ತು ವಿವಿಧ ಆಡ್ ಆನ್‌ಗಳಿಗೆ ಉಚಿತ ಪ್ರಯೋಗಗಳನ್ನು ಪಡೆಯಬಹುದು. ಈ OTT ಪ್ಲಾಟ್‌ಫಾರ್ಮ್‌ಗಳು ಜೀ5, ಸೋನಿ ಲೈವ್ ಸೇರಿದಂತೆ ಇತರೆ ತಾಣಗಳನ್ನು ಒಳಗೊಂಡಿವೆ. ಈ ಯೋಜನೆಯು ಬೆಂಗಳೂರು ನಗರಕ್ಕೆ ಮತ್ತು ದೇಶದ ಇತರೆ ನಗರಗಳಲ್ಲಿ ಬದಲಾಗಬಹುದು ಎಂಬುದನ್ನು ಗಮನಿಸಬೇಕು.

Best Mobiles in India

  • 54,535

  • 1,19,900

  • 54,999

  • 86,999

  • 49,975

  • 49,990

  • 20,999

  • 1,04,999

  • 44,999

  • 64,999

  • 20,699

  • 49,999

  • 11,499

  • 54,999

  • 7,999

  • 8,980

  • 17,091

  • 10,999

  • 34,999

  • 39,600


  • 25,750


  • 33,590


  • 27,760


  • 44,425


  • 13,780


  • 1,25,000


  • 45,990


  • 1,35,000


  • 82,999


  • 17,999

English summary

JioFiber, ACT, Tata Sky: 150 Mbps Broadband Plans Details.

Story first published: Tuesday, December 14, 2021, 16:14 [IST]



Read more…