
ಲಂಡನ್: ಕೊರೊನಾ ವೈರಸ್‌ನ ಓಮೈಕ್ರಾನ್ ತಳಿ ಸೋಂಕಿನಿಂದ ಹತ್ತು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬ್ರಿಟನ್‌ನ ಉಪ ಪ್ರಧಾನಿ ಡೊಮಿನಿಕ್ ರಾಬ್ ಹೇಳಿದರು.
ಇದಕ್ಕೂ ಮೊದಲು ರಾಬ್ ಅವರು ಓಮೈಕ್ರಾನ್ ತಳಿ ಸೋಂಕಿನಿಂದ ಕನಿಷ್ಠ 250 ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ‘ಸ್ಕೈ ನ್ಯೂಸ್’ಗೆ ತಿಳಿಸಿದ್ದರು. ಆ ಬಳಿಕ ಅವರು ಒಂಬತ್ತು ಮಂದಿ ಆಸ್ಪತ್ರೆಗೆ ಸೇರಿದ್ದಾರೆ ಎಂದು ಬಿಬಿಸಿಗೆ ತಿಳಿಸಿದರು.
ಅಂಕಿ ಅಂಶಗಳ ವ್ಯತ್ಯಾಸದ ಬಗ್ಗೆ ಕೇಳಿದಾಗ ‘ಪ್ರಶ್ನೆ ನನಗೆ ಸರಿಯಾಗಿ ಕೇಳಿರಲಿಲ್ಲ. ಓಮೈಕ್ರಾನ್ ಸೋಂಕಿನಿಂದ ಬಳಲುತ್ತಿರುವ 10 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಒಬ್ಬರು ಸಾವಿಗೀಡಾಗಿದ್ದಾರೆ’ ಎಂದರು.