ಪ್ರಣಯರಾಜ ಶ್ರೀನಾಥ್ ಅವರ ಸಾರಥ್ಯದಲ್ಲಿ ಬಂದಿದೆ ‘ಆರ್ಟ್ ಎನ್ ಯು’. ನಟನೆ, ನಿರ್ದೇಶನ, ಕಥೆ ಹಾಗೂ ಬರವಣಿಗೆ, ಸಿನಿಮಾ ತಯಾರಿಕೆ, ತಂತ್ರಜ್ಞಾನ, ಧ್ವನಿ ತರಬೇತಿ, ಪ್ರಸಾದನ ಹೀಗೆ ಸಿನಿಮಾಗೆ ಸಂಬಂಧಿಸಿದ ತರಬೇತಿ ನೀಡಲಿದೆ ಈ ಸಂಸ್ಥೆ.
‘ನಾನು ಚಿತ್ರರಂಗಕ್ಕೆ ಬಂದು 54 ವರ್ಷಗಳಾಯಿತು. ನಾನು ಬಂದಾಗಿನ ಚಿತ್ರರಂಗವೇ ಬೇರೆ. ಈಗಲೇ ಬೇರೆ. ಆದರೆ ಕಲಿಕೆ ಮಾತ್ರ ನಿರಂತರ. ನನ್ನ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರೇ ಎಂದಿಗೂ ನನ್ನ ಗುರುಗಳು. ಅವರಿಂದ ಕಲಿತದ್ದು ಸಾಕಷ್ಟು. ಆಗಿನ ಕಾಲ, ಈಗಿನ ಕಾಲ ಅನ್ನುವುದಕ್ಕಿಂತ ವರ್ತಮಾನಕ್ಕೆ ನಾವು ಹೊಂದಿಕೊಳ್ಳಬೇಕು. ನಾನು ಈಗಲೂ ಕಲಿಯುತ್ತಿದ್ದೇನೆ. ಈವರೆಗೂ ನಾನು ಕಲಿತಿರುವುದನ್ನು ಮತ್ತೊಬ್ಬರಿಗೆ ಕಲಿಸುವ ಉದ್ದೇಶದಿಂದ ಈ ಸಂಸ್ಥೆ ಆರಂಭಿಸುತ್ತಿದ್ದೇನೆ’ ಎಂದರು ಶ್ರೀನಾಥ್.
‘ಫೆಬ್ರುವರಿಯಲ್ಲಿ ಇಲ್ಲಿ ತರಗತಿಗಳು ಆರಂಭವಾಗಲಿವೆ. ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಅವರ ಸಂಸ್ಥೆಯಲ್ಲೇ ರಂಗಮೂಲ ತರಬೇತಿ ನೀಡುವ ಯೋಜನೆಯೂ ಇದೆ’ ಎಂದರು ಶ್ರೀನಾಥ್.
ಶ್ರೀನಾಥ್ ಪ್ರಯತ್ನಕ್ಕೆ ಅವರ ಪತ್ನಿ ಗೀತಾ, ಮಗ ರೋಹಿತ್ ಹಾಗೂ ಸೊಸೆ ಮಂಗಳಾ ಅವರ ಬೆಂಬಲವಿದೆ.
‘ಇದರ ಜೊತೆಗೆ ‘ಕಾಲ್ ಬ್ಯಾಕ್’ ಅನ್ನುವ ಕಂಪನಿಯನ್ನೂ ಆರಂಭಿಸಿದ್ದು, ‘ಆರ್ಟ್ ಎನ್ ಯು’ ಸಂಸ್ಥೆಯಲ್ಲಿ ತರಬೇತಿ ಪಡೆದವರು ಇಲ್ಲಿ ತಮ್ಮ ವಿವರ ದಾಖಲಿಸಬಹುದು. ಹೊಸ ಸಿನಿಮಾ ಆರಂಭಿಸುವವರಿಗೆ ಒಂದೇ ಕಡೆ ಅವರಿಗೆ ಬೇಕಾದ ಕಲಾವಿದರು, ತಂತ್ರಜ್ಞರು ಸಿಗುತ್ತಾರೆ. ಇನ್ನೂ ಆಯಾ ಆಸಕ್ತರನ್ನು ಸಂದರ್ಶಿಸಿ, ಅವರಿಗೆ ಯಾವುದರಲ್ಲಿ ಆಸಕ್ತಿಯಿದೆ ಎಂಬುದನ್ನು ನಿರ್ಧರಿಸಿ ಶುಲ್ಕ ನಿಗದಿಪಡಿಸಲಾಗುವುದು ಎಂದು ಶ್ರೀನಾಥ್ ಪುತ್ರ ರೋಹಿತ್ ಮಾಹಿತಿ ನೀಡಿದರು.
ನಟ ಉಪೇಂದ್ರ ಅವರು ಧ್ವನಿ ಸಂದೇಶದ ಮೂಲಕ ಶುಭ ಕೋರಿದರು.
Read More…Source link
[wpas_products keywords=”deal of the day party wear for men wedding shirt”]