The New Indian Express
ಮಡಿಕೇರಿ: ನಿರ್ಲಕ್ಷ್ಯಕ್ಕೊಳಗಾದ, ಕಾರಣಾಂತರಗಳಿಂದ ಮನೆಯಿಂದ ದೂರಾದವರಿಗೆ ಮಡಿಕೇರಿಯ ಥನಾಲ್ ಆಶ್ರಮ ಆಶ್ರಯ ತಾಣವಾಗಿದೆ. 2017 ರಲ್ಲಿ ಸ್ಥಾಪನೆಯಾದ ಥಾನಲ್ ಆಶ್ರಮ ಹಲವು ಮಹಿಳೆಯರಿಗೆ ಆಶ್ರಯ ನೀಡಿದ್ದು ಇನ್ನೂ ಹಲವರನ್ನು ತಮ್ಮ ಕುಟುಂಬದವರೊಂದಿಗೆ ಪುನಃ ಬೆಸೆದಿದೆ.
ಜನನಿಬಿಢ ರಸ್ತೆಯಲ್ಲಿರುವ ಈ ಕಟ್ಟಡ 24 ಮಹಿಳೆಯರಿಗೆ ಸದ್ಯಕ್ಕೆ ಮನೆಯಾಗಿದೆ. ಈ ಪೈಕಿ ಹಲವರಿಗೆ ಮನೆ ಇಲ್ಲ ಇನ್ನೂ ಕೆಲವರು ಕುಟುಂಬ ಸದಸ್ಯರಿಂದ ದೂರವಿದ್ದು ಇದನ್ನೇ ಮನೆಯನ್ನಾಗಿಸಿಕೊಂಡಿದ್ದಾರೆ.
” ಒಮ್ಮೆ ರಸ್ತೆಯಲ್ಲಿ ಪತ್ತೆಯಾದ 96 ವರ್ಷದ ಮಹಿಳೆಯನ್ನು ಕರೆತಂದು ಇಲ್ಲಿ ಆಶ್ರಯ ನೀಡಲಾಗಿತ್ತು. ಆಕೆ ಹಸಿವಿನಿಂದ ಕಂಗೆಟ್ಟಿದ್ದರು. ಆಕೆಗೆ ಆಹಾರ ನೀಡಿ ನಂತರ ಶುಚಿಗೊಳಿಸಲಾಯಿತು” ಎಂದು ಹಿಂದಿನ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾರೆ ಆಶ್ರಮದ ಉದ್ಯೋಗಿ ಶಶಿಕಲಾ ಬಿ.ಕೆ
ಇಂತಹ ಅನೇಕ ಮಹಿಳೆಯರ ಘಟನೆಗಳನ್ನು, ಅವರಿಗೆ ಥಾನಲ್ ಆಶ್ರಮ ಆಶ್ರಯ ನೀಡಿರುವುದನ್ನು ಶಶಿಕಲಾ ಕಂಡಿದ್ದಾರೆ. ಹೀಗೆಯೇ ಒಮ್ಮೆ ಪಾರ್ವತಿ ಎಂಬ ಹಿರಿಯ ಮಹಿಳೆಯನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಯಿಂದ ಆಶ್ರಮಕ್ಕೆ ಕರೆತರಲಾಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ನೋಡಲು ಪುನಃ ಆಕೆಯ ಮನೆಯ ಸದಸ್ಯರು ಯಾರೂ ಬರಲಿಲ್ಲ. ಆಕೆಗೆ ಕ್ಯಾನ್ಸರ್ ಸಮಸ್ಯೆ ಇತ್ತು, ಹಲವು ಸಮಯದ ನಂತರ ಆಕೆ ಮೃತಪಟ್ಟರು. ಪಾರ್ವತಿ ಕೊಡವ ಸಮುದಾಯದವರಾಗಿದ್ದರು. ಆದ್ದರಿಂದ ಕೊಡವ ಸಂಪ್ರದಾಯದ ಪ್ರಕಾರವೇ ಅಂತ್ಯಕ್ರಿಯೆ ನಡೆಸಲು ಕೊಡವ ಸಮಾಜ, ಮಕ್ಕಡ ಕೂಟವನ್ನು ಸಂಪರ್ಕಿಸಲಾಯಿತು. ಕೊನೆಗೆ ಅವರ ಸಂಪ್ರದಾಯದಂತೆಯೇ ಅಂತ್ಯಕ್ರಿಯೆ ನೆರವೇರಿತು ಎನ್ನುತ್ತಾರೆ ಥಾನಲ್ ನ ಮುಖ್ಯಸ್ಥರಾಗಿರುವ ಮೊಹಮ್ಮದ್ ಮುಸ್ತಫಾ
ಥಾನಲ್ ಆಶ್ರಮದ ಮುಖ್ಯ ಕಚೇರಿ ಇರುವುದು ಕೇರಳದಲ್ಲಿ ಹಾಗೂ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರೂ ಆಗಿರುವ ಡಾ. ಇದ್ರೀಸ್ ಅದರ ಸ್ಥಾಪಕರು. ಮಡಿಕೇರಿಯಲ್ಲಿ ಮುಸ್ತಫಾ ನೇತೃತ್ವದ ದಯಾ ಪುನರ್ವಸತಿ ಟ್ರಸ್ಟ್ ನಿಂದ ಥಾನಲ್ ಆಶ್ರಮ ನಿರ್ವಹಣೆಯಾಗುತ್ತಿದೆ. ಕುಟುಂಬ ಇರುವವರು ಯಾರೂ ಮನೆ ಇಲ್ಲದವರಂತೆ ಇರಬಾರದು. ಮನೆ ಇಲ್ಲದವರಿಗೆ ಆಶ್ರಯ ನೀಡುವುದಷ್ಟೇ ಅಲ್ಲದೇ ಮನೆಯಿಂದ ದೂರ ಆದವರನ್ನು ಅವರ ಕುಟುಂಬದೊಂದಿಗೆ ಸೇರಿಸುವುದಕ್ಕೂ ನಾವು ಪ್ರಯತ್ನಿಸುತ್ತೇವೆ ಎನ್ನುತ್ತಾರೆ ಮುಸ್ತಫಾ
ಮುತ್ತುಲಕ್ಷ್ಮಿ, ಜಲವತಿ ಎಂಬ ಇಬ್ಬರು ಮಹಿಳೆಯರ ಕಥೆಯನ್ನು ವಿವರಿಸಿರುವ ಅವರು, ಉತ್ತರ ಪ್ರದೇಶದ ಜಲವತಿ ರೈಲಿನಲ್ಲಿ ಕುಟುಂಬ ಸದಸ್ಯರಿಂದ ಬೇರ್ಪಟ್ಟು ಮಡಿಕೇರಿಗೆ ಬಂದಿದ್ದರು. ಸರಿಯಾಗಿ ಹಿಂದಿ ಮಾತನಾಡಲು ಬಾರದ ಆಕೆಯ ಕುಟುಂಬ ಸದಸ್ಯರನ್ನು ಥಾನಲ್ ಪತ್ತೆ ಮಾಡಿ ಎರಡು ವರ್ಷಗಳ ಬಳಿಕ ಮರಳಿ ಮನೆಗೆ ಕಳಿಸಿತು
ಇದೇ ರೀತಿಯಲ್ಲಿ ಮುತ್ತುಲಕ್ಷ್ಮಿ ಎಂಬಾಕೆ ಮಡಿಕೇರಿ ಬಸ್ ಡಿಪೋನಲ್ಲಿ ಕಾಲಿನಲ್ಲಿ ತೀವ್ರ ಸೋಂಕು ಗಾಯದಿಂದ ಬಳಲುತ್ತಾ ಪತ್ತೆಯಾಗಿದ್ದರು ಹಾಗೂ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದರು ಅವರಿಗೆ ಚಿಕಿತ್ಸೆ ಕೊಡಿಸಿ ಮತ್ತೆ ಆಕೆಯ ಗ್ರಾಮವನ್ನು ಪತ್ತೆ ಮಾಡಿ ಮನೆಗೆ ಕಳಿಸಿದೆವು ಎಂದು ಆಶ್ರಮದ ಕಾರ್ಯವೈಖರಿಯನ್ನು ಮುಸ್ತಫಾ ವಿವರಿಸಿದ್ದಾರೆ.
ಈ ರೀತಿಯ ಸಮಾಜಮುಖಿ ಕೆಲಸಗಳಿಗೆ ಹೆಚ್ಚಿನ ಆರ್ಥಿಕ ನೆರವು ಅಗತ್ಯವಿದ್ದು, ನೆರವು ನೀಡಲು ಆಸಕ್ತಿ ಹೊಂದಿರುವವರು 9844558896 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.
Read more
[wpas_products keywords=”deal of the day”]