Online Desk
ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ(Siddaramaiah) ಮತ್ತು ಹೆಚ್ ಡಿ ಕುಮಾರಸ್ವಾಮಿ(H D Kumaraswamy) ನಡುವೆ ವಾಗ್ದಾಳಿ, ಟ್ವೀಟ್ ಸಮರ ಮುಂದುವರಿದಿದೆ.
ಇಂದು ಮತ್ತೆ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಸ್ವಯಂಘೋಷಿತ ಸಂವಿಧಾನ ಪಂಡಿತ ಸಿದ್ದರಾಮಯ್ಯ ನಮ್ಮ ಪಕ್ಷ ಮತ್ತು ನಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ನಾನು ಟ್ವಿಟ್ಟರ್ ನಲ್ಲಿ ಉತ್ತರ ಕೊಟ್ಟಿದ್ದೆ. ಆಡಿದ ಮಾತನ್ನು ದಕ್ಕಿಸಿಕೊಳ್ಳುವ ಯೋಗ್ಯತೆ ಅವರಿಗಿಲ್ಲ ಎಂದು ಟ್ವೀಟ್ ನಲ್ಲಿ ತಿವಿದಿದ್ದಾರೆ.
ಇದನ್ನೂ ಓದಿ: ಸೋಲು ಸಹಜ; ಯಾಕ್ ನೀನ್ ಸೋತಿಲ್ವ, ನಿಮ್ಮಪ್ಪ ಸೋತಿಲ್ವ, ನಿನ್ ಮಗ ಸೋತಿಲ್ವ: ಕುಮಾರಸ್ವಾಮಿ ವಿರುದ್ಧ ಸಿದ್ದು ವಾಗ್ದಾಳಿ!
ಮಾತೆತ್ತಿದರೆ ನಾನು ನೀಟ್, ಕ್ಲೀನ್ ಎನ್ನುವ ಪ್ರತಿಪಕ್ಷ ನಾಯಕರೇ, ಅರ್ಕಾವತಿ ಅಕ್ರಮ ಕೇಳಿಬರುತ್ತಿರುವುದೇಕೆ, ದೇವರಾಜ ಅರಸು ಅವರ ನಂತರ ‘ ಐದು ವರ್ಷದ ಮುಖ್ಯಮಂತ್ರಿ ‘ ಎಂದು ಹೇಳಿಕೊಳ್ಳುವ ಅಪರ ಸಿದ್ದಪುರುಷರ ಪಾಡೇನು? ‘ ಐದು ವರ್ಷದ ಮುಖ್ಯಮಂತ್ರಿ ‘ ಎಂಬ ಪ್ರಭಾವಳಿಯ ಕಥೆ ಏನು ಎಂದು ಕೇಳಿದ್ದಾರೆ.
ಈ ಸತ್ಯ ಆಚೆ ಬಿದ್ದರೆ ಆ ಸಿದ್ದಹಸ್ತರು ಮುಖವನ್ನು ಎಲ್ಲಿ ಇಟ್ಟುಕೊಳ್ಳುತ್ತಾರೆ? ದೇವರಾಜ ಅರಸು ಅವರ ನಂತರ ‘ ಐದು ವರ್ಷದ ಮುಖ್ಯಮಂತ್ರಿ ‘ ಎಂದು ಹೇಳಿಕೊಳ್ಳುವ ಅಪರ ಸಿದ್ದಪುರುಷರ ಪಾಡೇನು? ‘ ಐದು ವರ್ಷದ ಮುಖ್ಯಮಂತ್ರಿ ‘ ಎಂಬ ಪ್ರಭಾವಳಿಯ ಕಥೆ ಏನು? 9/9
— H D Kumaraswamy (@hd_kumaraswamy) January 23, 2022
ಜೆಡಿಎಸ್ ನ್ನು ತುಮಕೂರಿನಿಂದ ಓಡಿಸಿ ಎಂದು ಹೇಳುವ ನಿಮ್ಮ ಸಂಸ್ಕೃತಿ ಎಂಥದ್ದು ಎಂದೂ ಕುಮಾರಸ್ವಾಮಿ ಪ್ರಶ್ನಿಸಿದ್ದರು.
Read more
[wpas_products keywords=”deal of the day”]