Karnataka news paper

ಹಿಟ್ಲರ್ ನಿಮ್ಮನ್ನು ಆವತ್ತೇ ಕೊಂದು ಮುಗಿಸಬೇಕಿತ್ತು: ಯಹೂದಿ ಬಾಲಕನಿಗೆ ಥೂ ಎಂದು ಉಗಿದ ಅಮೆರಿಕನ್ ಯುವತಿ


The New Indian Express

ವಾಷಿಂಗ್ಟನ್: ಅಮೆರಿಕದ ಯುವತಿಯೋರ್ವಳು ಯಹೂದಿ ಬಾಲಕನಿಗೆ ಥೂ ಎಂದು ಉಗಿದಿದ್ದಲ್ಲದೆ ಅವಹೇಳನಕಾರಿ ಮಾತುಗಳಿಂದ ನಿಂದಿಸಿರುವ ಘಟನೆ ಬ್ರೂಕ್ಲಿನ್ ನಗರದಲ್ಲಿ ನಡೆದಿದೆ.

ಇದನ್ನೂ ಓದಿ: ಅಮೆರಿಕ: ಭಾರತ ಮೂಲದ ಟ್ಯಾಕ್ಸಿ ಚಾಲಕನ ಮೇಲೆ ಜನಾಂಗೀಯ ದ್ವೇಷಪ್ರೇರಿತ ದಾಳಿ; ಸಿಖ್ ಸಂಘಟನೆಗಳು ಆಕ್ರೋಶ

ಯುವತಿಯನ್ನು ಕ್ರಿಸ್ಟೀನಾ ಮೇರಿ ಎಂದು ಗುರುತಿಸಲಾಗಿದೆ. ಆಕೆ ೮ ವರ್ಷದ ಯಹೂದಿ ಬಾಲಕನಿಗೆ ಹಿಟ್ಲರ್ ನಿಮ್ಮನ್ನು ಆವತ್ತೇ ಕೊಂದು ಮುಗಿಸಬೇಕಿತ್ತು ಎಂದು ಹೇಳಿದ್ದಾಗಿ ತಿಳಿದುಬಂದಿದೆ. ಅಷ್ಟೇ ಅಲ್ಲದೆ ಆಕೆ ಬಾಲಕನಿಗೆ ಜೀವ ಬೆದರಿಕೆಯನ್ನೂ ಒಡ್ಡಿದ್ದಾಳೆ.

ಇದನ್ನೂ ಓದಿ: ಸಿಖ್ಖರ ವಿರುದ್ಧ ‘ಅವಹೇಳನಕಾರಿ’ ಹೇಳಿಕೆ: ಮುಂಬೈನಲ್ಲಿ ನಟಿ ಕಂಗನಾ ವಿರುದ್ಧ ಎಫ್ಐಆರ್ ದಾಖಲು

ಬಾಲಕನ ಮೇಲೆ ಥೂ ಎಂದು ಉಗಿದು ಆಕೆ ಸ್ಥಳದಿಂದ ಪಲಾಯನ ಮಾಡಿದ್ದಳು. ನಂತರ ಪೊಲಿಸರು ಆಕೆಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆಕೆ ಸೈಕಾಲಜಿ ವಿದ್ಯಾರ್ಥಿನಿ ಎನ್ನುವುದು ಅಚ್ಚರಿಯ ಸಂಗತಿ. ಯುವತಿಯ ಯಹೂದಿ ವಿರೋಧಿ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಇದನ್ನೂ ಓದಿ: ಲ್ಯಾಟಿನ್ ಅಮೆರಿಕಾದಲ್ಲಿ ಮೊದಲ ಬಾರಿಗೆ ವ್ಯಕ್ತಿಗೆ ದಯಾಮರಣ: ಅಂತಿಮ ವಿದಾಯ ವಿಡಿಯೊದಲ್ಲಿ ಸೆರೆ



Read more

[wpas_products keywords=”deal of the day”]