Karnataka news paper

ಅಮೃತಾ ಹುಟ್ಟುಹಬ್ಬ: ಮುದ್ದಿನ ಮಗಳ ಫೋಟೊ ಹಂಚಿಕೊಂಡು ಶುಭ ಹಾರೈಸಿದ ನಟ ಪ್ರೇಮ್


ಬೆಂಗಳೂರು: ‘ನೆನಪಿರಲಿ’ ಖ್ಯಾತಿಯ ಪ್ರೇಮ್‌ ಅವರ ಪುತ್ರಿ ಅಮೃತಾ ಇಂದು (ಭಾನುವಾರ) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಗಳ ಜೊತೆಗಿರುವ ಫೋಟೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪ್ರೇಮ್, ‘ನನ್ನ ಬಂಗಾರ ದೇವತೆಗೆ ಹುಟ್ಟುಹಬ್ಬದ ಶುಭಾಶಯಗಳು. ಅಪರಿಮಿತ ಆನಂದ ಸದಾ ನಿನದಾಗಲಿ’ ಎಂದು ಬರೆದುಕೊಂಡಿದ್ದಾರೆ.

ಪ್ರೇಮ್​ –ಜ್ಯೋತಿ ದಂಪತಿ ಮಗಳಿಗೆ ಮುತ್ತಿಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅಮೃತಾ ಹುಟ್ಟಹಬ್ಬಕ್ಕೆ ಚಿತ್ರರಂಗದ ನಟ– ನಟಿಯರು ಸೇರಿದಂತೆ ಅಭಿಮಾನಿಗಳು ಶುಭ ಕೋರಿದ್ದಾರೆ.

ಅಮೃತಾ ಅವರ ಬಾಲ್ಯದ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಜ್ಯೋತಿ ಪ್ರೇಮ್​, ‘ಮುದ್ದು ಮಗಳ ಭವಿಷ್ಯಕ್ಕೆ ಒಳಿತಾಗಲಿ’ ಎಂದು ಶುಭ ಹಾರೈಸಿದ್ದಾರೆ.

ಪ್ರೇಮ್‌ ಅಭಿನಯದ ‘ಪ್ರೇಮಂ ಪೂಜ್ಯಂ’ ಚಿತ್ರ 2021ರ ನವೆಂಬರ್‌ನಲ್ಲಿ ಬಿಡುಗಡೆಯಾಗಿತ್ತು.

ಓದಿ… ಇನ್‌ಸ್ಟಾಗ್ರಾಂನಲ್ಲಿ ಸಂಡೇ ಸೆಲ್ಫಿ ಹಂಚಿಕೊಂಡ ಕರಿಷ್ಮಾ: ಅಭಿಮಾನಿಗಳಿಂದ ಮೆಚ್ಚುಗೆ

 





Read More…Source link

[wpas_products keywords=”deal of the day party wear for men wedding shirt”]