Karnataka news paper

ಹರಭಜನ್‌ ಸಿಂಗ್‌ ದಂಪತಿಗೆ ಕೋವಿಡ್‌: ಕೊನೆಗೂ ವೈರಸ್‌ ನಮ್ಮನ್ನು ಹಿಡಿಯಿತು –ಗೀತಾ


ಮುಂಬೈ: ಬಾಲಿವುಡ್‌ ನಟಿ ಗೀತಾ ಬಾಸ್ರಾ ಹಾಗೂ ಕ್ರಿಕೆಟ್‌ ತಾರೆ ಹರಭಜನ್‌ ಸಿಂಗ್‌ ದಂಪತಿಗೆ ಕೋವಿಡ್‌ ದೃಢಪಟ್ಟಿದೆ.

ಈ ಬಗ್ಗೆ ಇಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ. ತಮ್ಮ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. 

ಹರಭಜನ್‌ ಸಿಂಗ್‌ ಪತ್ನಿ ಗೀತಾ ಬಾಸ್ರಾ ಅವರು ತಮಾಷೆಯಾಗಿಯೇ ಪೋಸ್ಟ್‌ ಹಂಚಿಕೊಂಡಿದ್ದಾರೆ. ’2 ವರ್ಷಗಳಿಂದ ಬಹಳಷ್ಟು ಎಚ್ಚರಿಕೆ ಹಾಗೂ ಜಾಗ್ರತೆ ತೆಗೆದುಕೊಂಡಿದ್ದೆವು. ಅದಾಗ್ಯೂ 2 ವರ್ಷದ ನಂತರ ಕೊರೊನಾ ವೈರಸ್ ನಮ್ಮನ್ನು ಹಿಡಿದಿದೆ. ಇದೀಗ ನಾವು ಪ್ರತ್ಯೇಕ ವಾಸದಲ್ಲಿ ಇದ್ದೇವೆ ಎಂದು ತಿಳಿಸಿದ್ದಾರೆ. 

ಹರಭಜನ್‌ ಸಿಂಗ್‌ ಕೂಡ ಕೋವಿಡ್‌ ದೃಢಪಟ್ಟಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.  ‘ನನಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿದ್ದೇನೆ. ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇನೆ. ನನ್ನೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲರೂ ದಯವಿಟ್ಟು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ. ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಸುರಕ್ಷಿತವಾಗಿರಿ’ ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳು ಗೀತಾ ಹಾಗೂ ಹರಭಜನ್‌ ಸಿಂಗ್‌ ಅವರಿಗೆ ಆದಷ್ಟು ಶೀಘ್ರವಾಗಿ ಗುಣಮುಖರಾಗುವಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಹಾರೈಸಿದ್ದಾರೆ.
 
ಆಫ್‌ ಸ್ಪಿನ್ನರ್‌ ಹರಭಜನ್‌ ಸಿಂಗ್‌, ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತದ ಪರ ಹರ್ಭಜನ್ 1998ರ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 



Read More…Source link

[wpas_products keywords=”deal of the day party wear for men wedding shirt”]