Karnataka news paper

ಆಳ ತಿಳಿಯದೆ ಬಿದ್ದೆ ನಾ ನಿನ್ನ ಪ್ರೀತಿಯ ಬಲೆಗೆ; ಇದು ಒಡೆದ ಹೃದಯಗಳ ಪಿಸುಮಾತು!


ಆಕೆ ಅಲ್ಲಿ ಏಕಾಂಗಿ. ಮೆಲ್ಲನೆ ಹೋಗಿ ಅವಳ ಹೆಗಲ ಮೇಲೆ ಕೈ ಇಡುವಾಗ ಭಯದಿಂದ ತಿರುಗಿ ನೋಡಿದಳು. ಗೆಳತಿಯನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು. ಆಕೆ ಬೇಸತ್ತು ಹೋಗಿದ್ದಳು. ಯಾಕಿರಬಹುದು ಎಂದು ಕೇಳಿದಾಗ ಉತ್ತರವೇ ಇರಲಿಲ್ಲ. ಅವಳಿಗೋ ಹೇಳಿಕೊಳ್ಳಲು ಏನೋ ಒಂಥರಾ ಮುಜುಗರ…!!

ಮನಸ್ಸಿನ ಬೇಗುದಿಯನ್ನು ಹಂಚಿಕೊಂಡಾಗ ಸಾಂತ್ವನ ಸಿಗುತ್ತದೆ ಎಂದು ತಿಳಿದಿದ್ದೆ. ಏನೇ ವಿಷಯ ಇದ್ದರೂ ಹೇಳಿಕೊಳ್ಳುತ್ತಿದ್ದಳು ಈ ಬಾರಿ ಸ್ವಲ್ಪ ಹಿಂದೇಟು ಹಾಕಿದಳು. ಆಕೆಯದ್ದೀಗ ಪ್ರೀತಿಗೆ ಬೇಸತ್ತು ಹೋಗಿರುವ ಹೃದಯ. ಎಲ್ಲಿ ಪ್ರಾರಂಭವಾಯಿತೋ ಅಲ್ಲಿಯೇ ಅಂತ್ಯವಾಗಿದೆ. ಜೀವನವೇ ಸಾಕಾಯಿತು ಎಂಬ ಕಟು ಉತ್ತರ ನೀಡಿದ್ದಳಾಕೆ. ಯಾವತ್ತೂ ಈ ರೀತಿ ಮಾತನಾಡದ ಆಕೆ ಹೀಗ್ಯಾಕೆ. ನನಗೆ ಈಗ ಉತ್ತರ ಅಗತ್ಯವಾಗಿತ್ತು.

ನಿಧಾನವಾಗಿ ನಡೆದ ವಿಷಗಳನ್ನು ವಿವರಿಸಲಾರಂಭಿಸಿದಳು… ಪ್ರತಿದಿನ ಮೆಸೇಜ್ ಗಳು ಬರುತ್ತಿದ್ದವು. ಪರಿಚಯವಾಯಿತು. ಅದೊಂದು ದಿನ ಮೆಸೇಜ್ ಮಾಡಿದಾಗ, ನೀನು ಇಷ್ಟವೆಂದು ಹೇಳಿದಾಗ ಮನಸ್ಸು ಗೊಂದಲಕ್ಕೀಡಾಯಿತು. ಏನು ಹೇಳಬೇಕೆಂದು ತೋಚದೆ ಮೌನಿಯಾದೆ. ಸಮಯ ಸಿಕ್ಕಾಗ ಫೋನ್, ಮೆಸೇಜ್ ಎಲ್ಲವೂ ಮಾಮೂಲಿಯಾಗಿತ್ತು. ಒಂದು ದಿನ ಮೆಸೇಜ್ ಬರಲಿಲ್ಲ, ಫೋನ್ ರಿಂಗಣಿಸಲಿಲ್ಲ. ಬೇಸರವಾಯಿತು. ಹೃದಯದಲ್ಲಿ ಏನೋ ಒಂಥರ ತಳಮಳ ಶುರುವಾಯಿತು. ಒಂದು ದಿನ ಆನ್ಲೈನ್ ಕ್ಲಾಸ್ ಗೂ ಹೋಗದೆ ಆಳವಾಗಿ ಯೋಚಿಸಿದಾಗ ದೊರೆತ ಉತ್ತರ ಪ್ರೀತಿ…!

ಅಂತರಾಳದಲ್ಲಿ ದೊರೆತ ಈ ಉತ್ತರ ಸರಿಯೇ ಎಂಬುದೇ ಪ್ರಶ್ನೆಯಾಗಿತ್ತು. ಅವನ ಬಳಿ ʼನಿನ್ನ ಮೇಲೆ ಪ್ರೀತಿಯ ಬೀಜ ನನ್ನ ಹೃದಯದ ಅಂತರಾಳದಲ್ಲಿ ಬಿತ್ತಿದೆʼ ಎಂದು ಬಿತ್ತಿದ ಬೀಜ ಗಿಡವಾಗಿ ಬೆಳೆಯಬಹುದು ಎಂಬ ಭಾವನೆಯಿಂದ ಕೇಳಿದಾಗ ದೊರೆತ ಉತ್ತರ ಮಾತ್ರ ಭಿನ್ನ, ಕಠೋರ. ಅಂದು ಜೀವನಕ್ಕೇ ಪೂರ್ಣವಿರಾಮ ಹಾಕುವಷ್ಟು ಹೃದಯ ಕಲ್ಲಾಗಿ ಹೋಯಿತು…!!

ಅಷ್ಟು ಹೇಳಿದ ಗೆಳತಿಗೆ ಸಾಂತ್ವನ ಹೇಳುವುದು ನನ್ನ ಕರ್ತವ್ಯವಾಗಿತ್ತು. ಇಲ್ಲದ ಪ್ರೀತಿಯನ್ನು ಹುಡುಕಲು ಹೋಗಬೇಡ ಗೆಳತಿ… ಪ್ರೀತಿ ಇರುವುದಾದರೆ ನಿನ್ನ ಬಳಿಗೆ ತಾನಾಗಿಯೇ ಒಲಿದು ಬರುತ್ತದೆ ಎಂದು ಹೇಳಿದಾಗ… ಅವಳು ಒಂದು ಕ್ಷಣ ಮೌನಿಯಾಗಿ ಕಣ್ಣೀರಾದಳು. ನಂತರ, ಯಾವ ಹುಡುಗಿಯಲ್ಲಾದರೂ ಪ್ರೀತಿ ಎಂಬ ಎರಡಕ್ಷರ ಹುಟ್ಟಿಕೊಂಡರೆ ಅದು ಸಿಗದೇ ಹೋದಾಗ ಆ ಸಂಕಟದಿಂದ ಹೊರಬರುವುದು ಸುಲಭದ ಮಾತಲ್ಲ… ಈಗ ಒಂದು ದಿನ ಅವನ ಮೆಸೇಜ್ ಫೋನ್ ಇಲ್ಲ ಎಂದರೆ ಆ ದಿನದ ನೋವಿಗೆ ಪರಿಹಾರವಿಲ್ಲ ಎಂದಳು… ಕಣ್ಣೀರ ಸಾಗರವೇ ಹರಿದು ಬಂತು..!!
ಇಂದೇಕೆ ಅವಳ ನೆನಪು -ಭಾಗ 34; ಆತ್ಮಾವಲೋಕನದ ಬದಲು ದೂಷಣೆ; ಮತ್ತೆ ಎಡವಿದಳೇ ಆಕೆ?!
ನೋವಿನಲ್ಲಿ ಇರುವಾಗ ಅನುಕಂಪ ನೀಡುವುದಕ್ಕಿಂತ ಅವರ ಜೊತೆ ಇದ್ದು ಧೈರ್ಯ ತುಂಬುವುದು ಶ್ರೇಷ್ಠವಾದದ್ದು ಎಂದು ಹೇಳುತ್ತಾರೆ. ಆದರೆ ಅವಳ ಕಂಬನಿಯ ಮಾತುಗಳಿಗೆ ಸ್ಟೈರ್ಯ ತುಂಬುವಷ್ಟು ಧೈರ್ಯ ನನಗಿರಲಿಲ್ಲ. ಏಕೆಂದರೆ ಹುಡುಗಿಯ ಜೀವನದಲ್ಲಿ ಈ ರೀತಿಯ ಘಟನೆಗಳಾದಾಗ ಎಷ್ಟು ಸಂಕಟವಾಗುತ್ತದೆ ಎಂದು ಅನುಭವಿಸಿದವರಿಗೆ ತಿಳಿದಿರುತ್ತದೆ. ಪ್ರೀತಿ ವಿಷಯಕ್ಕೆ ಬಂದಾಗ ಹುಡುಗಿಯರು ಮುಗ್ಧರಾಗುತ್ತಾರೆ. ನೂರಾರು ಬಾರಿ ಆಲೋಚನೆಯ ಲೋಕಕ್ಕೆ ಹೋಗಿ ಪ್ರೀತಿಗೆ ಉತ್ತರಿಸುತ್ತಾರೆ. ಆದರೆ ನಂಬಿದ ಪ್ರೀತಿ ಸಿಗದೇ ಹೋದಾಗ, ಅವಳಿಗೆ ನರಕಕ್ಕೆ ಹೋಗಿ ಜೀವಿಸಿದಂತಾಗುತ್ತದೆ.

ಆಳುವುದು ಆಳಾಗುವುದು ನಿಯಮವಲ್ಲಾ, ಜಗದಲ್ಲಿ ಸಹಬಾಳ್ವೆಗೆ ನಿಯಮ ಬೇಕಿಲ್ಲ, ಬಾಳಿ ಬದುಕುತ್ತೇವೆ ಅನ್ನುವ ಛಲವೊಂದಿದ್ದರೆ ಸಾಕು ಎಂದು ವಚನಕಾರರು ಹೇಳುತ್ತಾರೆ. ಆದರೆ ಪ್ರೀತಿಯಲ್ಲಿ ಮನಸೋತಿರುವ ಹೆಣ್ಣಿನ ಬಾಳಲ್ಲಿ ಈ ಮಾತು ಸುಳ್ಳೇ ಅನಿಸುತ್ತದೆ. ಈ ಅನುಭವ ನನ್ನ ಗೆಳತಿಯ ಬಾಳಲ್ಲಿಯೂ ಆಗಿರಬಹುದು.. ನನ್ನ ಬಾಳಲ್ಲಿಯೂ ಆಗಬಹುದು…!!

ರಚನಾ. ಕೆ
ತೃತೀಯ ಬಿ ಎ (ಪತ್ರಿಕೋದ್ಯಮ)
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

ರಚನಾ. ಕೆ



Read more

[wpas_products keywords=”deal of the day sale today offer all”]