ಹೈಲೈಟ್ಸ್:
- ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ನಟನೆಯ ‘ಭಜರಂಗಿ 2’
- ಅಕ್ಟೋಬರ್ 29ರಂದು ವಿಶ್ವಾದ್ಯಂತ ತೆರೆಗೆ ಬಂದಿದ್ದ ‘ಭಜರಂಗಿ 2’ ಸಿನಿಮಾ
- ಇದೀಗ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗೆ ಕೌಂಟ್‌ಡೌನ್ ಆರಂಭವಾಗಿದೆ
ಓಟಿಟಿಯಲ್ಲಿ ದಾಖಲೆ ಬರೆದ ಭಜರಂಗಿ 2
ಡಿ.23ರಂದು ಜೀ5ನಲ್ಲಿ ‘ಭಜರಂಗಿ 2’ಸಿನಿಮಾವು ರಿಲೀಸ್ ಆಗಿತ್ತು. ಮೊದಲ ಮೂರು ದಿನ ಕಳೆಯುವುದರೊಳಗೆ ಬರೋಬ್ಬರಿ 5 ಕೋಟಿ ನಿಮಿಷಗಳ ವೀಕ್ಷಣೆ ಕಂಡಿತ್ತು ಈ ಸಿನಿಮಾ. ಓಟಿಟಿಯಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಈ ಪ್ರಮಾಣದ ವೀಕ್ಷಣೆ ಪಡೆದ ಮೊದಲ ಕನ್ನಡ ಚಿತ್ರ ಎಂಬ ಕೀರ್ತಿಗೆ ‘ಭಜರಂಗಿ 2’ ಸಿನಿಮಾ ಪಾತ್ರವಾಗಿತ್ತು. ಆ ಮೂಲಕ ಹೊಸ ದಾಖಲೆ ಸೃಷ್ಟಿ ಮಾಡಿ ಮಿಂಚಿತ್ತು ‘ಭಜರಂಗಿ 2’ ಸಿನಿಮಾ. ‘ಭಜರಂಗಿ 2’ ಸಿನಿಮಾವು ಅಕ್ಟೋಬರ್ 29ರಂದು ತೆರೆಕಂಡಿತ್ತು. ಅಂದು ಮುಂಜಾನೆ 5ಗಂಟೆಗೆ ಸಿನಿಮಾ ಶೋ ಆರಂಭವಾಗಿ, 6 ಗಂಟೆಗೆಲ್ಲ ಶಿವರಾಜ್‌ಕುಮಾರ್ ಬೆಂಗಳೂರಿನ ಕೆಲ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದರು. ಫ್ಯಾನ್ಸ್ ಶೋ ಮುಗಿದು, ಮಾರ್ನಿಂಗ್ ಶೋಗಳು ಆರಂಭವಾಗಿದ್ದವು. ಆ ವೇಳೆ ಬರಸಿಡಿಲಿನಂತೆ ಪುನೀತ್ ರಾಜ್‌ಕುಮಾರ್ ಅವರ ನಿಧನದ ಸುದ್ದಿ ಅಪ್ಪಳಿಸಿತ್ತು. ಕರುನಾಡಿನ ತುಂಬ ನೋವು ಮನೆ ಮಾಡಿತ್ತು. ಕೆಲ ದಿನ ಚಿತ್ರದ ಪ್ರದರ್ಶನ ಕೂಡ ನಿಲ್ಲಿಸಲಾಗಿತ್ತು. ನಂತರ ಮತ್ತೆ ಶೋಗಳನ್ನು ಶುರು ಮಾಡಿದ ಮೇಲೆ ಶಿವಣ್ಣ ಫ್ಯಾನ್ಸ್ ಜೊತೆಗೆ ಸಿನಿಮಾ ವೀಕ್ಷಣೆ ಮಾಡಿದ್ದರು.
ಫ್ಯಾನ್ಸ್ ಜೊತೆ ‘ಭಜರಂಗಿ 2’ ಸಿನಿಮಾ ವೀಕ್ಷಿಸಿ ಅಪ್ಪು ಬಗ್ಗೆ ಮಾತಾಡಿದ ನಟ ಶಿವಣ್ಣ
‘ಭಜರಂಗಿ 2’ ಬಗ್ಗೆ ಶಿವಣ್ಣ ಹೇಳಿದ್ದೇನು?
‘ಅಪ್ಪು ಹೋಗಿಲ್ಲ, ಎಲ್ಲರ ಮನಸ್ಸಲ್ಲಿ ಇದ್ದಾನೆ. ಅಪ್ಪುಗೆ ‘ಭಜರಂಗಿ 2′ ಸಿನಿಮಾ ನೋಡಬೇಕು ಅಂತ ತುಂಬ ಆಸೆ ಇತ್ತು. ಅಕ್ಟೋಬರ್ 29ರಂದು ಮನೆಯಲ್ಲೇ ಸಿನಿಮಾ ನೋಡಬೇಕು ಅಂತ ಅಪ್ಲೋಡ್ ಕೂಡ ಮಾಡಿಸಿಕೊಂಡಿದ್ದ. ಇವತ್ತು ಅವನ ಅಭಿಮಾನಿಗಳು ಸಿನಿಮಾ ನೋಡ್ತಾ ಇದ್ದಾರೆ. ಅವರು ನೋಡಿದರೆ ಅಪ್ಪು ನೋಡಿದಂತೆಯೇ ಲೆಕ್ಕ. ಯಾಕೆಂದರೆ, ಅಭಿಮಾನಿಗಳ ಮನಸ್ಸಲ್ಲಿ ಆಳವಾಗಿ ಅಪ್ಪು ಬೇರೂರಿದ್ದಾನೆ’ ಎಂದು ಹೇಳಿದ್ದರು ಶಿವಣ್ಣ. ಇದೀಗ ಎಲ್ಲರ ಮನೆ ಮನೆಗಳಲ್ಲಿ ‘ಭಜರಂಗಿ 2’ ಪ್ರಸಾರಕ್ಕೆ ಕೌಂಟ್ ಡೌನ್ ಆರಂಭಗೊಂಡಿದೆ.
ತೆಲುಗು ನಾಡಲ್ಲಿ ಶಿವರಾಜ್‌ಕುಮಾರ್ ‘ಭಜರಂಗಿ 2’ ಬಗ್ಗೆ ಮಾತನಾಡಿದ ನಟ ಅಲ್ಲು ಅರ್ಜುನ್
Read more
[wpas_products keywords=”deal of the day party wear dress for women stylish indian”]